ಮಂಡ್ಯ:ಕಾವೇರಿಗೆ ಬಾಗಿನ ಅರ್ಪಿಸುವ ವಿಚಾರವಾಗಿ ಇದೀಗ ವಿಶೇಷವಾದ ಬೇಡಿಕೆಯೊಂದು ಕೇಳಿ ಬಂದಿದೆ. ಕಾವೇರಿಗೆ ರಾಜಕಾರಣಿಗಳು ಬಾಗಿನ ಅರ್ಪಿಸಬಾರದು, ಬದಲಿಗೆ ಒಡೆಯರ್ ಮನೆತನದವರೇ ಪೂಜೆ ಸಲ್ಲಿಸಲಿ ಎಂಬುದಾಗಿ ರೈತರೇ ಮನವಿ ಮಾಡಿಕೊಂಡಿದ್ದಾರೆ.
ಇಂದು ಮಂಡ್ಯದಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್​ ಅವರನ್ನು ಭೇಟಿಯಾದ ರೈತ ಮುಖಂಡರು ಇಂಥದ್ದೊಂದು ಮನವಿಯನ್ನು ಮಾಡಿಕೊಂಡರು. ಕೆಲವು ಪಾಪಿಷ್ಠ-ಪುಡಾರಿಗಳ ಪೂಜೆಯಿಂದಾಗಿ ಕಟ್ಟೆ ಬರಿದಾಗಿದೆ. ಹೀಗಾಗಿ ರಾಜಕಾರಣಿಗಳು ಕಾವೇರಿಗೆ ಬಾಗಿನ ಅರ್ಪಿಸುವುದು ಬೇಡ ಎಂದು ಅವರು ಕೋರಿಕೊಂಡರು.
ಇದನ್ನೂ ಓದಿ:ನಮ್ಮ ದೇಶದಲ್ಲಿ ಎಲ್ಲದಕ್ಕೂ ಸನಾತನ ಧರ್ಮವೇ ಮೂಲ, ಅವರ ಹೇಳಿಕೆ ನಾನು ಒಪ್ಪಲ್ಲ: ಯದುವೀರ ಒಡೆಯರ್
ಕೆಲವರು ಮಹಾರಾಜರು ಕೊಟ್ಟ ಕೊಡುಗೆಗೆ ಗೋಮುಖ ವ್ಯಾಘ್ರರಾಗಿ ನಡೆದುಕೊಳ್ಳುತ್ತಿದ್ದಾರೆ. ನಮ್ಮ ಮಹಾರಾಜರು ಕಟ್ಟಿದಂಥ ಕಟ್ಟೆಗೆ ಕಳಂಕ ತರುತ್ತಿದ್ದಾರೆ. ಯಾವ ರಾಜಕಾರಣಿಯೂ ಮನೆ ಮಾರಿ ಕನ್ನಂಬಾಡಿ ಕಟ್ಟೆ ಕಟ್ಟಿಲ್ಲ, ಇದು ರಾಜ್ಯದ ಜನರಿಗಾಗಿ ಮಹಾರಾಜರು ಕಟ್ಟಿದಂಥ ಕಟ್ಟೆ. ಇದಕ್ಕೆ ನೀವೇ ಬಾಗಿನ ಅರ್ಪಿಸಬೇಕು. ಪ್ರತಿವರ್ಷ ನೀವೇ ಕಾವೇರಮ್ಮಗೆ ಬಾಗಿನ ಅರ್ಪಿಸಬೇಕು. ಈಗಲೂ ದಂಪತಿಸಮೇತ ಕಾವೇರಿ ಮಾತೆಗೆ ಪೂಜೆ ಮಾಡಿ ಕಟ್ಟೆ ತುಂಬುತ್ತದೆ ಎಂದು ರೈತ ಮುಖಂಡರು ಮನವಿ ಮಾಡಿಕೊಂಡರು.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!

‘ಗಂಡ ಎಲ್ಲೂ ಕರ್ಕೊಂಡು ಹೋಗ್ಲಿಲ್ಲ, ನನ್ನನ್ನು ಹುಡುಕಬೇಡಿ’ ಎಂದು ಪತ್ರ ಬರೆದಿಟ್ಟು ಹೋದಾಕೆ ಇನ್ನೂ ನಾಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + ten =
Remember me
