ಬಾಗಲಕೋಟೆ:ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದ್ದು, ಅನೈತಿಕ ಸಂಬಂಧಕ್ಕೆ ಅಡ್ಡಿಪಡಿಯಾಗಿದ್ದಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.
ಯಮನಪ್ಪ ಕರೆಣ್ಣವರ(32) ಕೊಲೆಯಾದ ವ್ಯಕ್ತಿ. ಪತ್ನಿ ರುಕ್ಮವ್ವ ಹಾಗೂ ಪ್ರಿಯಕರ‌ ಮೈದುನ ಮುದಕಪ್ಪ ಕರೆಣ್ಣವರ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಮೈದುನನ ಜತೆ ಅನೈತಿಕ ಸಂಬಂಧಕ್ಕೆ ಪತಿ ಅಡಚಣೆಯಾಗಿದ್ದಕ್ಕೆ ಇಬ್ಬರು ಸೇರಿ ಯಮನಪ್ಪನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ.
ಇದನ್ನೂ ಓದಿ:ಚಂದಿರನ ಅಂಗಳವನ್ನು ತೋಡಿ ಕಲ್ಲು-ಮಣ್ಣು ಹೊತ್ತು ತಂದ ‘ಚಾಂಗ್​ ಲಿ’
ಎಂಟು ದಿನಗಳ ಹಿಂದೆ ಯಮನಪ್ಪ ನಾಪತ್ತೆಯಾಗಿದ್ದ. ಇಂದು ಮುಧೋಳ ತಾಲ್ಲೂಕಿನ ಹಲಗಲಿ ಗ್ರಾಮದ ಕಬ್ಬಿನ ಹೊಲದಲ್ಲಿ ಕಬ್ಬು ಕಟಾವು ಮಾಡುವಾಗ ಯಮನಪ್ಪನ ಶವ ಕಾರ್ಮಿಕರ ಕಣ್ಣಿಗೆ ಬಿದ್ದಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಪತ್ನಿ ಮತ್ತು ಆಕೆಯ ಪ್ರಿಯಕರ ಮೈದುನ ಯಮನಪ್ಪನ ಕತ್ತು ಹಿಸುಕಿ‌ ಕೊಲೆಗೈದು ಕಬ್ಬಿನ‌ ಹೊಲದಲ್ಲಿ ಎಸೆದಿರುವ ಆರೋಪ ಮಾಡಲಾಗಿದೆ.
ರುಕ್ಮವ್ ಹಾಗೂ ಮುದಕಪ್ಪ ಸಂಬಂಧದಲ್ಲಿ ಅತ್ತಿಗೆ-ಮೈದುನ. ಮುದಕಪ್ಪ ಮೃತ ಯಮನಪ್ಪ ಅವರ ದೊಡ್ಡಪ್ಪನ‌ ಮಗ. ಯಮನಪ್ಪನ ಶವ ಹಲಗಲಿ ಗ್ರಾಮದ ಎಚ್ ಆರ್ ಮಾಚಪ್ಪನವರ ಕಬ್ಬಿನ ಹೊಲದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಈ ರಾಜ್ಯಗಳಲ್ಲಿ ಮಹಿಳೆಯರೇ ‘ಎಣ್ಣೆ’ ಜಾಸ್ತಿ ಕುಡಿಯೋದಂತೆ: ಲೆಕ್ಕಾಚಾರ ತಲೆಕೆಳಗೆ ಮಾಡಿ ಸಮೀಕ್ಷೆ!
ಸಿಐಡಿ ಡಿವೈಎಸ್​ಪಿ ಲಕ್ಷ್ಮೀ ಆತ್ಮಹತ್ಯೆ ಕೇಸ್​: ಇಬ್ಬರ ಮೇಲೆ ತಂದೆಯ ಅನುಮಾನ..!

ಸ್ನೇಹಿತನ ಮನೆಯಲ್ಲೇ ಸಿಐಡಿ ಡಿವೈಎಸ್​ಪಿ ನೇಣಿಗೆ ಶರಣಾಗಿದ್ದೇಕೆ? ನಿನ್ನೆ ರಾತ್ರಿ ನಡೆದಿದ್ದೇನು?

ಆ್ಯಪ್​ ಮೂಲಕ ಇನ್​ಸ್ಟಂಟ್ ಲೋನ್ ಪಡೆದ ಯುವಕರ ಮಾನ ಜಾಲತಾಣದಲ್ಲಿ ಹರಾಜು: ಆತ್ಮಹತ್ಯೆಗೂ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 3 =
Remember me
