ಬಾಗಲಕೋಟೆ:ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ ಎನ್ನುವಷ್ಟರಲ್ಲಿ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿವೆ. ಒಂದೆಡೆ ಪಕ್ಷದಿಂದ ಟಿಕೆಟ್ ಕೈತಪ್ಪಿದ ಅಭ್ಯರ್ಥಿಗಳು ಪಕ್ಷೇತರ ಅಭ್ಯರ್ಥಿಯಾದರೂ ಸರಿ ಚುನಾವಣೆಯಲ್ಲಿ ಸ್ಪರ್ಧಿಸುವೆ ಎಂದು ಮುಂದಾದರೆ, ಇನ್ನೂ ಕೆಲವರು ಅಖಾಡಕ್ಕೆ ಇಳಿಯುವುದೇ ಬೇಡ ಎಂದು ಬೇಸರದಿಂದ ಹೊರನಡೆದಿದ್ದು ಇದೆ. ಆದರೆ, ಬಾಗಲಕೋಟೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಗೆಲುವಿಗೆ ಟಿಕೆಟ್ ವಂಚಿತ ಮುಖಂಡ ಸಾಥ್ ನೀಡಿದ್ದಾರೆ.
ಇದನ್ನೂ ಓದಿ:ಕಚತೀವು ಕುರಿತು ಪ್ರಧಾನಿ ಹೇಳಿಕೆ: ‘ಮೂರು ಪ್ರಶ್ನೆಗಳೊಂದಿಗೆ’ ಮೋದಿಗೆ ಸವಾಲು ಹಾಕಿದ ಸ್ಟಾಲಿನ್
ಗದ್ದಿಗೌಡರ ಜತೆ ಪ್ರಚಾರಕ್ಕೆ ಇಳಿದಿರುವ ನಿವೃತ್ತ ಐಎಎಸ್ ಅಧಿಕಾರಿ, ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಚಿತ್ರದುರ್ಗ ಮೂಲದ ಡಾ. ಪ್ರಕಾಶ್ ಪರಪ್ಪ, ಕಳೆದ ಒಂದು ವರ್ಷದಿಂದ ಬಾಗಲಕೋಟೆಯಲ್ಲಿ ಮನೆ ಮಾಡಿ, ತಮ್ಮದೇ ಆದ ವಿಭಿನ್ನ ಪ್ರಚಾರಕ್ಕೆ ಇಳಿದಿದ್ದ ಮುಖಂಡರು. ಆದರೆ, ಟಿಕೆಟ್ ವಂಚಿತರಾದ ಬಳಿಕ ಹತಾಶೆಗೊಂಡಿದ್ದರು.
ಎಂಪಿ ಚಾಯ್, ಕಟೌಟ್ ಅಭಿಯಾನದ ಮೂಲಕ ಕ್ಷೇತ್ರದಾದ್ಯಂತ ಗಮನ ಸೆಳೆದಿದ್ದ ಡಾ.ಪ್ರಕಾಶ್​ಗೆ ಟಿಕೆಟ್ ನೀಡದ ಬಿಜೆಪಿ ಹಾಲಿ ಸಂಸದ ಗದ್ದಿಗೌಡರನ್ನು ಲೋಕಸಭೆ ಚುನಾವಣೆಯ ಅಭ್ಯರ್ಥಿ ಎಂದು ಘೋಷಿಸಿತ್ತು. ಪಕ್ಷದ ನಿರ್ಧಾರಕ್ಕೆ ಮಣಿದು ಇದೀಗ ಗದ್ದಿಗೌಡರ ಪರ ಪ್ರಚಾರಕ್ಕೆ ಡಾ.ಪ್ರಕಾಶ್ ಸಜ್ಜಾಗಿದ್ದಾರೆ.
ಇದನ್ನೂ ಓದಿ:ಅದಾನಿ ಕಂಪನಿ ಷೇರಿಗೆ ಭಾರೀ ಬೇಡಿಕೆ: ಟೋಟಲ್​ ಗ್ಯಾಸ್ ಷೇರು ಬೆಲೆ ಹೆಚ್ಚಳವೇಕೆ?
ಅಖಾಡ ರಂಗೇರಿದ ವೇಳೆಯೇ ಗದ್ದಿಗೌಡರಿಗೆ ಸಾಥ್​ ನೀಡಿದ ಡಾ.ಪ್ರಕಾಶ್, ಗೌಡರ ಜತೆ ಸೇರಿ ಒಗ್ಗಟ್ಟಿನ ಮಂತ್ರ ಜಪ್ಪಿಸಿದ್ದಾರೆ. ಕಳೆದ ಒಂದು ವರ್ಷದಿಂದ ಬೂತ್ ಮಟ್ಟದಲ್ಲಿ ಛಾಪು ಮೂಡಿಸಿದ್ದ ಪರಪ್ಪ, ಟಿಕೆಟ್ ಕೈ ತಪ್ಪಿದ ಅಸಮಾಧಾನ ಬದಿಗೊತ್ತಿ ಗದ್ದಿಗೌಡರ್​ಗೆ ಸಾಥ್ ನೀಡಿದ್ದಾರೆ. ಇದು ಅನೇಕರಿಗೆ ಆಶ್ಚರ್ಯ ತಂದೊಡ್ಡಿದೆ. ಇನ್ನು ಈ ಬಗ್ಗೆ ಗದ್ದಿಗೌಡರು ಕೆಲವು ವಿಷಯ ಹಂಚಿಕೊಂಡಿದ್ದಾರೆ.
“ನಾನು ಎಂದು ಕೂಡ ಅವರ ಪ್ರಯತ್ನಕ್ಕೆ ಅಡ್ಡಿ ಮಾಡಿರಲಿಲ್ಲ ಎಂದ ಗದ್ದಿಗೌಡರು, ನನಗೆ ನಿವೃತ್ತಿ ಆಗೋ ಮನಸ್ಸು ಇರೋದ್ರಿಂದ ನನ್ನನ್ನು ಭೇಟಿ ಮಾಡಿಯೇ ಪ್ರಚಾರ ಆರಂಭಿಸಿದರು. ಬಳಿಕ ನನಗೆ ಟಿಕೆಟ್ ಸಿಕ್ಕ ದಿನ ಶಾಲು ಹಾರ ಹಾಕಿ ಅವರೇ ಸನ್ಮಾನ ಮಾಡಿದರು. ನಿಮಗೆ ಭವಿಷ್ಯ ಒಳ್ಳೆಯದಿದೆ. ಸ್ವಚ್ಚ ಮನಸ್ಸಿನಿಂದ ಚುನಾವಣೆಯಲ್ಲಿ ಸಹಕಾರ ಮಾಡ್ತೀನಿ” ಅಂತ ಹೇಳಿದರು.
2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

ಈ ಹೋಟೆಲ್​ಗೆ ಮಾತ್ರ ಹೋಗಲೇಬೇಡಿ! ಇಲ್ಲಿಗೆ ಹೋದ್ರೆ ಖಂಡಿತ ಅವಮಾನ, ಕಣ್ಣೀರು ತಪ್ಪಿದ್ದಲ್ಲ

2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
