ಶಿವಮೊಗ್ಗ:ರಾಮಮಂದಿರ ಏಕೆ ಬೇಡ? ಕೃತಿ ವಿವಾದದ ಹಿನ್ನೆಲೆಯಲ್ಲಿ ಸಾಹಿತಿ ಕೆ.ಎಸ್​.ಭಗವಾನ್​ ಮಂಗಳವಾರ ಸಾಗರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಐದನೇ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯದ ನ್ಯಾಯಾಧೀಶರು ರೆಗ್ಯುಲರ್​ ಜಾಮೀನು ಮಂಜೂರು ಮಾಡಿದ್ದಾರೆ.
ಭಗವಾನ್​ ಅವರ ರಾಮಮಂದಿರ ಏಕೆ ಬೇಡ? ಕೃತಿಯಿಂದ ನಮ್ಮ ಮನಸ್ಸಿಗೆ ಘಾಸಿಯಾಗಿದೆ ಎಂದು ಸಂಘ ಪರಿವಾರದ ಕಾರ್ಯಕರ್ತ ಇಕ್ಕೇರಿಯ ಮಹಾಬಲೇಶ್ವರ ಎಂಬುವರು ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯ ಭಗವಾನ್​ ವಿರುದ್ಧ ಐಪಿಸಿ ಸೆಕ್ಷನ್​ 295(ಎ) ಅಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್​ ಪ್ರಕರಣ ದಾಖಲು ಮಾಡಿ 2022ರ ನ.2ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೈಸೂರು ಎಸ್ಪಿ ಮೂಲಕ ಸಮನ್ಸ್​ ಜಾರಿ ಮಾಡಿತ್ತು. ಆದರೆ ಭಗವಾನ್​ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇದರಿಂದ ಜೆಎಂಎಫ್​ಸಿ ನ್ಯಾಯಾಲಯ ಭಗವಾನ್​ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್​ ಹೊರಡಿಸಿತ್ತು. ಈ ಸಂಬಂಧ ಭಗವಾನ್​ ನಿರೀಕ್ಷಣಾ ಜಾಮೀನು ಕೋರಿ 5ನೇ ಜಿಲ್ಲಾ ಮತ್ತು ಸೆಷನ್ಸ್​ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್​ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ 10 ದಿನಗಳ ಒಳಗೆ ಪೊಲೀಸ್​ ಮುಂದೆ ಹಾಜರಾಗುವಂತೆ ಹಾಗೂ 1 ಲಕ್ಷ ರೂ. ವೈಯಕ್ತಿಕ ಬಾಂಡ್​ ನೀಡುವಂತೆ ಆದೇಶ ಮಾಡಿತ್ತು.
ಭಗವಾನ್​ ಅವರು ಸಾಗರ ನ್ಯಾಯಾಲಯಕ್ಕೆ ಹಾಜರಾಗಿ ರೆಗ್ಯುಲರ್​ ಜಾಮೀನಿಗೆ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಶೀಶೈಲ ಬಗಾಡೆ ಜಾಮೀನು ಮಂಜೂರು ಮಾಡಿದರು. ನಂತರ ಭಗವಾನ್​ ಅವರು ಪೇಟೆ ಠಾಣೆಗೆ ಹಾಜರಾದರು. ದೂರುದಾರರ ಪರ ವಕೀಲ ಕೆ.ವಿ.ಪ್ರವಿಣ್, ಭಗವಾನ್​ ಪರವಾಗಿ ಎಚ್​.ಬಿ. ರಾಘವೇಂದ್ರ ಮತ್ತು ಅಬ್ದುಲ್​ ರಶೀದ್​ ವಾದ ಮಂಡಿಸಿದರು.
ವಿದ್ಯಾರ್ಥಿ ಹಂತಕನ ಬಂಧನ: ಶಿಕ್ಷಕಿ ಮೇಲಿನ ಅತಿರೇಕದ ಪ್ರೇಮವೇ ಕೊಲೆಗೆ ಕಾರಣ? ವಾಟ್ಸ್​ಆ್ಯಪ್​ನಲ್ಲಿದೆ ರಹಸ್ಯ…

ಇಮ್ರಾನ್ ಖಾನ್ ಆಡಿಯೋ ಲೀಕ್​: ನಿಮ್ಮಿಂದಾಗಿ ನನ್ನ ಖಾಸಗಿ ಅಂಗಗಳು ನೋಯುತ್ತಿವೆ.. ಇಂದು ಬರೋಕೆ ಆಗಲ್ಲ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + fifteen =
Remember me
