ಬೆಂಗಳೂರು:ಮುಡಾ ಹಗರಣದಲ್ಲಿ ಸಚಿವ ಬೈರತಿ ಸುರೇಶ್ ಪಾತ್ರವಿದೆ. ಅವನನ್ನು ಸಿಎಂ ಹತ್ತಿರ ಬಿಟ್ಟುಕೊಂಡಿದ್ದೇ ತಪ್ಪು. ಮೊದಲು ಅವನನ್ನು ಹೊರಗೆ ಹಾಕಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ನಾನು ಮೂಡಾ ಪ್ರಕರಣದಲ್ಲಿ ಸೈಲೆಂಟ್ ಆಗಿಲ್ಲ. ದಿನವೂ ಮಾತನಾಡೋಕೆ ಆಗುತ್ತಾ? ನಾನು ಮೊದಲೇ ನಿವೇಶನಗಳನ್ನು ಸರೆಂಡರ್ ಮಾಡಿ ಸಿದ್ದರಾಮಯ್ಯಗೆ ಹೇಳಿದ್ದೆ. ಅದೇಕೋ ಅವರು ಸುಮ್ಮನಾದರು. ಸ್ವತಃ ಮೈಸೂರಿನವರಾದ ಸಿದ್ದರಾಮಯ್ಯ ಮುಡಾ ರಿಪೇರಿ ಮಾಡಲು ಆಗಲಿಲ್ಲ ಅಂದರೆ ಹೇಗೆ? ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬಡವರಿಗೆ ಸೈಟ್ ಕೊಡಿ ಎಂದರೆ ಕೊಡಲಿಲ್ಲ. ಇದನ್ನು ಸಿದ್ದರಾಮಯ್ಯ ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಮುಡಾ ಹಗರಣದಲ್ಲಿ ಬೈರತಿ ಸುರೇಶ್ ಪಾತ್ರವಿದೆ. ಅವನೊಬ್ಬ ದುರಹಂಕಾರಿ, ಧುರ್ಯೋದನ, ದುಶ್ಯಾಸನ ಇದ್ದಂತೆ. ಅದೇ ಸಿದ್ದರಾಮಯ್ಯ ಅವರನ್ನು ಹಾಳು ಮಾಡುತ್ತಿದೆ. ಅದೇ ರೀತಿ ಮುಡಾ ಕಮೀಷನರ್ ನಟೇಶನನ್ನೂ ಹೊರಗೆ ಹಾಕಬೇಕು. ಏನು ಆಡಳಿತ ಮಾಡುತ್ತಿದ್ದಾರೆ? ಸರ್ಕಾರದ ಆಸ್ತಿ ಅಷ್ಟು ಲೂಟಿ ಮಾಡುತ್ತಿದ್ದಾರೆ. ಅಷ್ಟು ಲೂಟಿ ಮಾಡಿದ ಆಯುಕ್ತರ ಮೇಲೆ ಕ್ರಮವಿಲ್ಲ ಎಂದು ಸರ್ಕಾರದ ವಿರುದ್ಧ ವಿಶ್ವನಾಥ್ ಆಕ್ರೋಶ ಹೊರ ಹಾಕಿದರು.
ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುವ ಕುರಿತು ಪ್ರತಿಕ್ರಿಯಿಸಿದ ಅವರು, ದರ್ಶನ್ ಏನು ಸ್ವಾತಂತ್ರ್ಯ ಹೋರಾಟಗಾರನೆ? ಹಿ ಈಸ್ ಎ ಕ್ರಿಮಿನಲ್. ಒಬ್ಬನನ್ನು ಮರ್ಡರ್ ಮಾಡಿ ಬಂದವನು. ಅಂತವರಿಗೆ ರಾಜೋಪಚಾರ ಕೊಡ್ತಾರೇನ್ರಿ? ಯಾರು ಅವನಿಗೆ ಸಹಾಯ ಮಾಡಿದರೋ ಅಂತಹ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಗೃಹ ಸಚಿವರು ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಬೇಕು ಎಂದು ವಿಶ್ವನಾಥ್ ಹೇಳಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × one =
Remember me
