ಬೆಂಗಳೂರು: ಬಜರಂಗದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಬೆಂಗಳೂರಿನ ಎಮ್.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟರು ಎಂದು ಅವರ ಆಪ್ತವಲಯಗಳು ತಿಳಿಸಿವೆ.
ಬಜರಂಗದಳದ ಶಾಖೆಯ ಕರ್ನಾಟಕದ ಕನ್ವೀನರ್ ಆಗಿದ್ದ ಮಹೇಂದ್ರ ಕುಮಾರ್, ಸಂಘ ಪರಿವಾರದ ಪ್ರಭಾವೀ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹಲವು ಹಿಂದುಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು ಕೂಡ. ಅವರು ಉತ್ತಮ ಸಂಘಟಕರಾಗಿ ಸಂಘಪರಿವಾರದಲ್ಲಿ ಹೆಸರುಗಳಿಸಿದ್ದರು.
ಆದರೆ, 2008ರಲ್ಲಿ ದಕ್ಷಿಣ ಕನ್ನಡದಲ್ಲಿನ ಚರ್ಚ್​ ದಾಳಿ ಘಟನೆ ಬಳಿಕ 42 ದಿನ ಮಂಗಳೂರಿನ ಜೈಲಿನಲ್ಲಿದ್ದರು. ಅಲ್ಲದೆ, ತೀವ್ರ ಟೀಕೆಗೂ ಗುರಿಯಾಗಿದ್ದರು. ಈ ಘಟನೆ ಬಳಿಕ ಅವರು ಹಿಂದುಪರ ಸಂಘಟನೆಗಳಿಂದ ದೂರವಾಗಿದ್ದರು. 2018ರಲ್ಲಿ ನಮ್ಮ ಧ್ವನಿ ದೇಶ ರಕ್ಷಣೆಗಾಗಿ ಎಂಬ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದಿದ್ದ ಅವರು, ರಾಷ್ಟ್ರಹಿತಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದರು. ಅವರ ಈ ಚಾನೆಲ್​ಗೆ 59 ಸಾವಿರ ಜನರ ಚಂದಾದಾರರು ಇದ್ದರು. ನಿನ್ನೆಯೂ ಅವರು “ಪೊಲೀಸ್ ಇಲಾಖೆಯ ಜವಾಬ್ದಾರಿಯುತ ಕಾರ್ಯಗಳು ಇತಿಹಾಸದ ಪುಟ ಸೇರಬೇಕು” ಎಂಬ ಎಪಿಸೋಡನ್ನು ಅಪ್ಲೋಡ್​ ಮಾಡಿದ್ದರು. ಬಹುಶಃ ಇದು ಅವರ ಕೊನೆಯ ವಿಡಿಯೋ ಇರಬೇಕು.
ಒಂದೇ ಆಸ್ಪತ್ರೆಯ 31 ಸಿಬ್ಬಂದಿಗೆ COVID19 ಪಾಸಿಟಿವ್​! :ನಿಖರ ಕಾರಣ ಇನ್ನೂ ತಿಳಿದಿಲ್ಲ…

ಆ 22ರ ಯುವತಿ ಕೆಮ್ಮುತ್ತಲೇ ಇದ್ಳು- ಆಸ್ಪತ್ರೆಗೆ ದಾಖಲಾದರೆ ಕೆಮ್ಮಿನ ಇತಿಹಾಸ ಕೇಳಿ, ಕಾರಣ ನೋಡಿ ಅಲ್ಲಿದ್ದವರಿಗೆಲ್ಲ ಶಾಕ್ !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
