ಕುಣಿಗಲ್:ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಹಂಗರನಹಳ್ಳಿ ಶ್ರೀ ವಿದ್ಯಾಚೌಡೇಶ್ಚರಿ ಮಹಾ ಸಂಸ್ಥಾನ ಮಠದ ಬಾಲ ಮಂಜುನಾಥ ಸ್ವಾಮೀಜಿಗಳನ್ನು ಗುರುವಾರ ತಡರಾತ್ರಿ ಪೊಲೀಸರು ಬಂಧಿಸಿದ್ದಾರೆ. ಚರ್ಮರೋಗ ಚಿಕಿತ್ಸೆ ನೀಡುವ ನೆಪದಲ್ಲಿ ಬೆತ್ತಲೆ ವಿಡಿಯೋ ಮಾಡಿ ತನ್ನನ್ನು ಬ್ಲಾಕ್​ಮೇಲ್ ಮಾಡುತ್ತಿರುವುದಾಗಿ 6 ಮಂದಿ ವಿರುದ್ಧ ದೂರು ದಾಖಲಿಸಿದ್ದ ಸ್ವಾಮೀಜಿಯೇ ಈಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಚರ್ಮ ರೋಗಕ್ಕೆ ಚಿಕಿತ್ಸೆ ಪಡೆಯುವ ನೆಪದಲ್ಲಿ ಮಠದ ಬಾಲಮಂಜುನಾಥ ಸ್ವಾಮೀಜಿ ಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿ, ಬ್ಲಾಕ್ ಮೇಲ್ ಮಾಡಿರುವುದಾಗಿ ಸ್ವಾಮೀಜಿ ಸೇವಕ ಅಭಿಷೇಕ್, ಆತನ ಸಂಬಂಧಿ ಯುವತಿ ಸೇರಿ 6 ಮಂದಿ ವಿರುದ್ಧ ಬ್ಲಾಕ್ ಮೇಲ್ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಪ್ರಕರಣ ತನಿಖೆಗೆ ಮುಂದಾಗಿದ್ದ ಪೊಲೀಸರಿಗೆ ಅಸಲಿ ಸತ್ಯ ತಿಳಿದುಬಂದಿದೆ. ಪೋಕ್ಸೋ ಕಾಯ್ದೆಯಡಿ ಬಾಲ‌ಮಂಜುನಾಥರನ್ನ ಬಂಧಿಸಲಾಗಿದೆ.
ಮಠದ ಸುತ್ತಮುತ್ತ ಪೊಲೀಸ್ ದಂಡು:ಬ್ಲಾಕ್ ಮೇಲ್ ಪ್ರಕರಣ ತನಿಖೆ ಜಾಡು ಹಿಡಿದ ಪೊಲೀಸರು ಗುರುವಾರ ಸಂಜೆಯಿಂದಲೇ ಮಠದಲ್ಲಿ ತನಿಖೆ ಕೈಗೊಂಡಿದ್ದು ರಾತ್ರಿ 11.30 ರವರೆಗೆ ಮುಂದುವರೆಸಿದ್ದರು. ಈ ವೇಳೆ ಸೇವಕ ಅಭಿಷೇಕ್ ಕೊಟ್ಟ ಮಾಹಿತಿ ಆಧರಿಸಿ ಸ್ವಾಮೀಜಿ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಎಸ್ಪಿ ಕೆ.ವಿ‌.ಅಶೋಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು ಸ್ವಾಮೀಜಿ ಬಂಧನ ಪ್ರಕ್ರಿಯೆಯನ್ನು ಪೊಲೀಸರು ಬಹಳ ಎಚ್ಚರಿಕೆಯಿಂದ ಪೂರ್ಣಗೊಳಿಸಿದ್ದಾರೆ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:12 − two =
Remember me
