ಬೆಂಗಳೂರು:ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ನಕಲಿ ಎಂದು ಸಹೋದರ ಹಾಗೂ ಬಿಜೆಪಿ ನಾಯಕ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮದವರ ಜತೆ ಮಾತನಾಡಿ, ರಮೇಶ್ ಜಾರಕಿಹೊಳಿ ಸಿಎಂ ಬಿಎಸ್​ವೈ ಅವರನ್ನು ಭೇಟಿಯಾಗುತ್ತಾರೆ. ಸಿಡಿ ವಿಚಾರ ತನಿಖೆಯಾಗಲೇಬೇಕು. ಯೂಟ್ಯೂಬ್​ನಲ್ಲಿ ದುಬೈನಲ್ಲಿ ಅಪ್​ಲೋಡ್ ಆಗಿದೆ ಎಂದು ಹೇಳುತ್ತಾರೆ. ಇದು ಸಿಐಡಿ, ಸಿಒಡಿ ತನಿಖೆಗೆ ಕೊಡಬೇಕೆಂದು ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದರು.
ಇದನ್ನೂ ಓದಿರಿ:ಸಿಡಿ ಸುಳಿಯಲ್ಲಿ ಸಾಹುಕಾರ: ರಮೇಶ್​ ಜಾರಕಿಹೊಳಿ ಮಾತಿನಿಂದ ಅಡಕತ್ತರಿಯಲ್ಲಿ ಸಿಲುಕಿದ ಸಿಎಂ
ಸಂತ್ರಸ್ತೆ ಯಾರು ಎನ್ನುವುದು ಗೊತ್ತಾಗಬೇಕು. ಹಾದಿ ಬೀದಿಯಲ್ಲಿ ಇದ್ದವರು ಬಂದು ವೀಡಿಯೋ ಬಿಡುಗಡೆ ಮಾಡಿದ್ದಾರೆ. ವೀಡಿಯೋ ಫೇಕ್ ಆಗಿದೆ. ಒಂದು ವೇಳೆ ತನಿಖೆಯಲ್ಲಿ ರಮೇಶ್ ಅನ್ನೋದು ಗೊತ್ತಾದ್ರೆ, ಅವರನ್ನೇ ನಿವೃತ್ತಿ‌ ನೀಡಲು ತಿಳಿಸುತ್ತೇನೆಂದು ಹೇಳಿದರು.
ವಿಡಿಯೋವನ್ನು ಬಿಜೆಪಿಯವರು ಬಿಡುಗಡೆ ಮಾಡಿಸಿಲ್ಲ. ಬದಲಾಗಿ ಪ್ರಭಾವಿ ರಾಜಕಾರಣಿ ಇದ್ದಾರೆ. ಸಿಡಿ ಬಿಡುಗಡೆ ಮಾಡಿದವರ ವಿರುದ್ಧ ನೂರು ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಲು ನಿರ್ಧರಿಸುತ್ತೇವೆ. ತನಿಖೆ ಆಗಲೇಬೇಕು. ಯಾವುದೇ ಕಾರಣಕ್ಕೂ ರಮೇಶ್ ರಾಜೀನಾಮೆ ಕೊಡಬಾರದು ಎಂದರು.
ತನಿಖೆಯಾದ ನಂತರ ರಾಜೀನಾಮೆ ಕೊಟ್ಟು ಹೊರ ಹೋಗಲಿ. ಮೇಟಿಯ ವಿಚಾರದಲ್ಲಿ ಅನ್ಯಾಯವಾದವರು ನೇರವಾಗಿ ಬಂದು ಮಾತನಾಡಿದ್ರು. ಯುವತಿಯ ಹೆಸರು? ಯಾರು? ಏನು? ಎಂದು ಗೊತ್ತಾಗಬೇಕು. ರಮೇಶ್ ದೆಹಲಿಗೆ ಹೋಗಲ್ಲ. ಬೆಂಗಳೂರಿನಲ್ಲೇ ಇರುತ್ತಾರೆ. ನಮ್ಮ ಮನೆಯ ಮರ್ಯಾದೆಯನ್ನು ಹಾಳು ಮಾಡಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.(ದಿಗ್ವಿಜಯ ನ್ಯೂಸ್​)
ಇದನ್ನೂ ಓದಿರಿ:ರಾಸಲೀಲೆ ವಿಡಿಯೋ ಬಹಿರಂಗ: ಸಚಿವ ರಮೇಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ
ಜಾರಕಿಹೊಳಿ ಸೆಕ್ಸ್ ಸಿಡಿ ಬಹಿರಂಗ: ಪಕ್ಷಕ್ಕೆ ತೀವ್ರ ಮುಜುಗರ ಆಗಿದೆ ಎಂದ ಪ್ರಲ್ಹಾದ್ ಜೋಶಿ

ದೇಶದಲ್ಲಿ ಅತಿಯಾದ ಲಿಂಗ ತಾರತಮ್ಯ; ಏಷ್ಯಾ-ಪೆಸಿಫಿಕ್ ವಲಯದಲ್ಲಿ ಭಾರತದಲ್ಲೇ ಹೆಚ್ಚು ಪಕ್ಷಪಾತ

ಲಿವ್​ಇನ್ ಸಂಬಂಧ ರೇಪ್ ಆದೀತೇ? ಸುಪ್ರೀಂ ಕೋರ್ಟ್ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 18 =
Remember me
