ಬಿಜಾಪುರ ಜಿಲ್ಲೆಯದೇವರ ಹಿಪ್ಪರಗಿ ಎಂಬ ಸಣ್ಣ ಗ್ರಾಮದಿಂದ ರಾಜಧಾನಿಗೆ ಆಗಮಿಸಿ, ಸತತ ಪ್ರಯತ್ನಗಳಿಂದ ಸಾಧನೆಯ ಎತ್ತರ ತಲುಪಿದವರು ಬಾಳಯ್ಯ ಶಿವಶಂಕರಯ್ಯ ಇಂಡಿಮಠ ನೂರಾರು ಮಂದಿಗೆ ಉದ್ಯೋಗ ನೀಡಿರುವ ಇವರು, ಪ್ರತಿ ವರ್ಷ ಕೋಟ್ಯಂತರ ರೂ. ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದ್ದಾರೆ. ಇವರಿಗೆ ಬೆನ್ನೆಲುಬಾಗಿರುವವರು ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು. ಬಾಳಯ್ಯ ಇಂಡಿಮಠ ಸ್ಥಾಪಿಸಿದ ‘ಎವಿಎಸ್ ಪ್ರಾಜೆಕ್ಟ್’ ಎಂಬ ಕಟ್ಟಡ ನಿರ್ಮಾಣ ಸಂಸ್ಥೆ ಮೂರೇ ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆಯಿತು. ಸಮಾಜಸೇವಾ ಕಾರ್ಯದಲ್ಲಿ ಸದಾ ಮುಂದಡಿ ಇಡುತ್ತಿರುವ ಇವರು, ರಾಜಾಜಿನಗರದಲ್ಲಿ ಜಗದ್ಗುರು ರೇಣುಕಾಚಾರ್ಯ ಪ್ರತಿಮೆಯ ಸಿವಿಲ್ ಕೆಲಸವನ್ನು ಉಚಿತವಾಗಿ ಮಾಡಿಕೊಟ್ಟಿದ್ದಾರೆ. ಹಲಸೂರಿನಲ್ಲಿ ನಿರ್ಮಾಣವಾಗುತ್ತಿರುವ ದೇಗುಲಕ್ಕೂ ಸಹಾಯ ಮಾಡಿದ್ದಾರೆ. ಕರೊನಾ ಸಂದರ್ಭದಲ್ಲಿ ಬಡಜನರಿಗೆ ಆಹಾರ ಕಿಟ್ ವಿತರಿಸಿದ್ದಾರೆ. ಇವರ ಅನನ್ನ ಸೇವಾ ಕೈಂಕರ್ಯವನ್ನು ಪರಿಗಣಿಸಿರುವ ‘ವಿಜಯವಾಣಿ’ ಪತ್ರಿಕೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.
‘ಮುಂದೆ ಗುರಿ ಇರಬೇಕು. ಹಿಂದೆ ಗುರು ಇರಬೇಕು-ಆಗಲೇ ಏನು ಬೇಕಾದರೂ ಸಾಧಿಸಬಹುದು’ ಎಂಬ ಮಾತಿದೆ. ಈ ಮಾತು ಸಮಾಜ ಸೇವಕ ಬಾಳಯ್ಯ ಅವರ ಬಾಳಿನಲ್ಲಿ ನಿಜವಾಗಿದೆ. ಇವರ ಸಾಧನೆಯ ಹಿಂದೆ ಬೆನ್ನೆಲುಬಾಗಿ ನಿಂತಿರುವವರು ಬಾಳೆಹೊನ್ನೂರು ಶ್ರೀ. ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು.
ಬಾಳಯ್ಯ ಬಿಜಾಪುರ ಜಿಲ್ಲೆಯ ದೇವರಹಿಪ್ಪರಗಿಯವರು. ದಿ.ಶಿವಶಂಕರಯ್ಯ, ತಂದೆ ಶಾಂತಾಬಾಯಿ, ಇಬ್ಬರು ಗಂಡುಮಕ್ಕಳು ಮತ್ತು ಮೂವರು ಹೆಣ್ಣುಮಕ್ಕಳ ಕುಟುಂಬ. ಇದರಲ್ಲಿ ಬಾಳಯ್ಯ ಅವರೇ ಹಿರಿಮಗ, ದೇವರಹಿಪ್ಪರಗಿಯಲ್ಲಿಯೇ ಬಾಳಯ್ಯ ಶಾಲೆ-ಪಿಯುಸಿ ಮುಗಿಸಿದ್ದಾರೆ. ನಂತರ ಸಿಂದಗಿಯಲ್ಲಿ ಬಿ.ಎ. ವ್ಯಾಸಂಗ ಮಾಡಿದರು. ಮಡದಿ ಶ್ರೀದೇವಿ ಗೃಹಿಣಿ. ಮಗ ಚಂದ್ರಶೇಖರ್ ಪಿಯುಸಿ ಮತ್ತು ಮಗಳು ಚೈತ್ರಾ 9ನೇ ತರಗತಿ ಓದುತ್ತಿದ್ದಾಳೆ.
ಬಾಳಯ್ಯ ದೇವರಹಿಪ್ಪರಗಿಯಲ್ಲಿ ಪತ್ರಿಕಾ ವಿತರಕ ಕೆಲಸ ಮಾಡಿದ್ದಾರೆ. ಅಲ್ಲಿ ಸಾಲ ಜಾಸ್ತಿಯಾದ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಬೆಂಗಳೂರಿಗೆ ಬಂದರು. ನಂತರ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಕೆಲವು ಸಮಯದ ನಂತರ ಸ್ವಂತ ಉದ್ಯಮ ಆರಂಭಿಸುವ ಅಭಿಲಾಷೆಯಿಂದ ಟ್ರಾನ್ಸ್‌ ಪೋರ್ಟ್ ಬಿಜಿನೆಸ್ ಆರಂಭಿಸಿದರು. ಆ ಉದ್ಯಮದಲ್ಲಿಯೂ ನಷ್ಟ ಉಂಟಾಗಿ ಮತ್ತಷ್ಟು ಸಾಲವಾಯಿತು. ಬಿಜಿನೆಸ್ ಸಹವಾಸವೇ ಬೇಡವೆಂದು ನಿರ್ಧರಿಸಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಉದ್ಯಮ ಆರಂಭಿಸುವ ಅವರ ತುಡಿತ ನಿಲ್ಲಲಿಲ್ಲ. 2018ರಲ್ಲಿ ದನರಾ ದರ್ಬಾರ್ ಸಮಯದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು, ಬಾಳಯ್ಯ ಅವರ ಕನಸ್ಸಿನಲ್ಲಿ ಬಂದರು. ‘ನೀನು ಯಾವುದಕ್ಕೂ ಎದೆಗುಂದಬೇಡ, ನಾನು ನಿನ್ನ ಆಶ್ರಯಕ್ಕೆ ಇರುವೆ ಬಂದು ನನ್ನ ಆಶೀರ್ವಾದ ಪಡೆದು ಹೋಗು’ ಎಂದು ಕನಸಿನಲ್ಲಿ ಆಜ್ಞಾಪಿಸಿದ್ದರು. ಆಗ ಗದಗ ಜಿಲ್ಲೆಯ ಲಕ್ಷ್ಮೀಶ್ವರದಲ್ಲಿ ದಸರಾ ದರ್ಬಾರ್ ನಡೆಯುತ್ತಿತ್ತು. ಅಲ್ಲಿಗೆ ಹೋಗಲು ಇವರ ಬಳಿ ಹಣವಿರಲಿಲ್ಲ. ಈ ವೇಳೆ ಸಣ್ಣದೊಂದು ಕೆಲಸ ಮಾಡಿದ್ದರು, 5 ಸಾವಿರ ರೂ. ಬಂದಿತ್ತು. ಆ ಹಣವನ್ನು ತೆಗೆದುಕೊಂಡು ಜಗದ್ಗುರುಗಳ ಆಶೀರ್ವಾದ ಪಡೆಯಲು ಹೋದರು. ಗುರುಗಳು ಶಾಲು ಹೊದಿಸಿ ಸನ್ಮಾನ ಮಾಡಿ ಆಕ್ಷತೆ ಹಾಕಿ ಆಶೀರ್ವಾದ ಮಾಡಿ ಕಳುಹಿಸಿದ್ದರು. ಅಲ್ಲಿಂದ ಬಂದ ನಂತರ ಒಬ್ಬರ ಬಳಿ ಕೆಲಸಕ್ಕೆ ಸೇರಿಕೊಂಡರು. ಅಲ್ಲಿ ತಮರ್ಷಿಯಲ್ ತಂಪನಿಗೆ ಮೆಟೇರಿಯಲ್ ಸರಬರಾಜು ಮಾಡುತ್ತಿದ್ದರು. ಸ್ವಲ್ಪ ದಿನಗಳ ನಂತರ ಅದರ ಮಾಲೀಕರು ಈ ಕಂಪನಿಯ ಜವಾಬ್ದಾರಿ ವಹಿಸಿಕೊಳ್ಳಿ, ವ್ಯವಹಾರದಲ್ಲಿ ನಿಮಗೂ ಕೆಲವೊಂದು ಪಾಲು ಕೊಡುವುದಾಗಿ ಹೇಳಿದರು. ಆದರೆ ಯಾವುದೇ ಷೇರು ಕೊಡದೆ ಕೇವಲ ಸಂಬಳ ಮಾತ್ರ ಕೊಡುತ್ತಿದ್ದರು. ಇದರಿಂದ ಮನನೊಂದ ಬಾಳಯ್ಯ, ಸೀದಾ ಗುರುಗಳ ಬಳಿ ಬಂದು ತಮ್ಮ ದುಃಖ ತೋಡಿಕೊಂಡರು. ಆಗ ಗುರುಗಳು ಚಿಂತಿಸಬೇಡ ನೀನೆ ಒಂದು ಉದ್ಯಮ ಆರಂಭಿಸು. ನಿನಗೆ ಒಳ್ಳೆಯ ಭವಿಷ್ಯವಿದೆ. ನಿನಗೆ ಬೆನ್ನೆಲುಬಾಗಿ ನಾನಿರುತ್ತೇನೆ’ ಎಂದುಹೇಳಿ 501 ರೂ. ನೀಡಿ ಆಶೀರ್ವಾದ ಮಾಡಿ ಕಳುಹಿಸಿಕೊಟ್ಟರು. ಅಲ್ಲಿಂದ ಬಂದಕೂಡಲೇ ಮರು ಯೋಚಿಸದೆ 2018ರಲ್ಲಿ ಎಚ್‌ಎಎಲ್ ರಸ್ತೆಯಲ್ಲಿರುವ ಮುರುಗೇಶ್ ಪಾಳ್ಯದಲ್ಲಿ ಗುರುಗಳ ನಾಮಾಂಕಿತವಾದ ‘ಅಪ್ರಾಜಿ ವೀರಸೋಮೇಶ್ವರ ಪ್ರಾಜೆಕ್ಟ್’ (ಎವಿಎಸ್) ಕಟ್ಟಡ ನಿರ್ಮಾಣ ಸಂಸ್ಥೆ ಆರಂಭಿಸಿದರು. ಈ ಕಂಪನಿ ಇವರ ಕೈ ಹಿಡಿದಿದ್ದು, ಬಳಿಕ ಇವರು ಮುಟ್ಟಿದ್ದೆಲ್ಲವೂ ಚಿನ್ನವಾಯಿತು.
ಎಲೆಮರೆ ಕಾಯಿಯಾಗಿ ಸೇವೆ ಮಾಡುವ ನಮ್ಮಂಥವರನ್ನು ಗುರುತಿಸಿ ನಮಗೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿರುವ ‘ವಿಜಯವಾಣಿ’ ಬಳಗ ಹಾಗೂ ಡಾ.ವಿಜಯ ಸಂಕೇಶ್ವರ ಸಾಹೇಬರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಈ ಪ್ರಶಸ್ತಿ ಸ್ಫೂರ್ತಿಯನ್ನು ನೀಡಿದೆ.
| ಬಾಳಯ್ಯ ಇಂಡಿಮಠ ಎವಿಎಸ್​ ಪ್ರಾಜೆಕ್ಟ್​ನ ಮಾಲೀಕ
5 ತಿಂಗಳಲ್ಲಿ ಶಾಲಾ ಕಟ್ಟಡ ನಿರ್ಮಾಣಬಾಳಯ್ಯ ಶಿವಶಂಕರಯ್ಯ ಇಂಡಿಮಠ ಅವರ ಕಂಪನಿ ಮತ್ತು ಕೆಲಸ ನೋಡಿ ಸಂತಸಗೊಂಡಿದ್ದ ಜಗದ್ಗುರುಗಳು ಸುಮಾರು 2 ಕೋಟಿ ರೂ. ಮೊತ್ತದ ಶಾಲಾ-ಕಟ್ಟಡ ನಿರ್ಮಾಣದ ಪ್ರಾಜೆಕ್ಟ್ ಹೊಣೆ ನೀಡಿದರು. ಬಾಳೆಹೊನ್ನರಿನ ರಂಭಾಪುರಿ ಪೀಠದಲ್ಲಿ ಗುಣಮಟ್ಟದ ಶಾಲಾ ಕಟ್ಟಡವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಕೊಟ್ಟರು. ಕೇವಲ 5 ತಿಂಗಳಿನಲ್ಲಿ 12 ಕೊಠಡಿಗಳಿದ್ದ ಕಟ್ಟಡ ತಲೆಯೆತ್ತಿ ನಿಂತಿತು. ಇದರ ಉದ್ಘಾಟನೆಯನ್ನು ಸಚಿವರಾದ ಮಧು ಬಂಗಾರಪ್ಪ ಮತ್ತು ಕೆ.ಜೆ. ಜಾರ್ಜ್ ನೆರವೇರಿಸಿದರು. ಬಳಿಕ ಕಟ್ಟಡದ ಬಗ್ಗೆ ಬಾಳಯ್ಯ ಅವರ ಬಳಿ ತುಂಬ ಪ್ರಶಂಸೆ ಮಾತುಗಳನ್ನು ಸಚಿವರು ಮತ್ತು ಗುರುಗಳು ವ್ಯಕ್ತಪಡಿಸಿದ್ದಾರೆ.
ಕಷ್ಟಪಟ್ಟು ಮೇಲೆ ಬಂದವರಿಗೆ ಸಮಾಜದ ಬಗ್ಗೆ ಗೌರವ, ಧರ್ಮದ ಬಗ್ಗೆ ಶ್ರದ್ದೆ, ಗುರು-ಹಿರಿಯರ ಬಗ್ಗೆ ಭಕ್ತಿ ಇರುತ್ತದೆ. ಇಂತಹ ವ್ಯಕ್ತಿತ್ವ ಶ್ರೀ ಬಾಳಯ್ಯ ಇಂಡಿಮಠ ಅವರದ್ದು. ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಬಾಳಯ್ಯ ಕಷ್ಟಪಟ್ಟು ಮೇಲೆ ಬಂದವರು. ಅವರು ಇನ್ನೂ ಉನ್ನತ ಸ್ಥಾನವನ್ನೇರಲಿ, ಶ್ರೀಶೈಲ ಭ್ರಮರಾಂಭ ಸಮೇತ ಮಲ್ಲಿಕಾರ್ಜುನ ಸ್ವಾಮಿ, ಜಗದ್ಗುರು ಪಂಡಿತಾರಾಧ್ಯರ ಸನ್ಮಂಗಲಾಶೀರ್ವಾದಗಳು.
| ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಭಗವತ್ಪಾದರು ಶ್ರೀಶೈಲ ಜಗದ್ಗುರುಗಳು
ಬಾಲಯ್ಯ ಇಂಡಿಮಠ ಅವರದು ಬಾಲ್ಯದಿಂದಲೂ ಕ್ರಿಯಾಶೀಲ ವ್ಯಕ್ತಿತ್ವ. ಸಣ್ಣ ಹಳ್ಳಿಯಿಂದ ಬರಿಗೈಯಲ್ಲಿ ಬೆಂಗಳೂರಿಗೆ ಹೋಗಿ ಉದ್ಯಮವನ್ನು ಯಶಸ್ವಿಯಾಗಿ ಕಟ್ಟುವುದು ಕಷ್ಟ. ಆದರೂ ಬಾಳಯ್ಯನವರು ಬಡತನದಲ್ಲೂ ಇಂತಹ ಸಾಧನೆ ಮಾಡಿರುವುದು ಗಮನಾರ್ಹ. ಅವರಿಗೆ ಭಗವಂತ ಹೆಚ್ಚಿನ ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಹಾರೈಸುವೆ.
| ಭೀಮನಗೌಡ (ರಾಜುಗೌಡ) ಬ ಪಾಟೀಲ ದೇವರಹಿಪ್ಪರಗಿ ಶಾಸಕ
ಬಾಳಯ್ಯ ಇಂಡಿಮಠ ಅವರು ಬದುಕಿನಲ್ಲಿ ಅದೃಷ್ಟದಿಂದ ಮೇಲೆ ಬಂದವರಲ್ಲ. ವೃತ್ತಿಯಲ್ಲಿ ಪರಿಕ್ರಮ, ಭಕ್ತಿಯಲ್ಲಿ ಪರಿಶುದ್ಧತೆ, ಆಚಾರದಲ್ಲಿ ವಿನಯಶೀಲತೆ, ಗುರುಭಕ್ತಿಯಲ್ಲಿ ಸಂಪನ್ನತೆ ಇರಿಸಿಕೊಂಡು ಹಂತ ಹಂತವಾಗಿ ಬೆಳೆದಿರುವ ಸಚ್ಛಾರಿತ್ರ್ಯದ ವೃತ್ತಿ. ಶ್ರೀ ರಂಭಾಪುರಿ ಜಗದ್ಗುರುಗಳ ಪರಮಭಕ್ತರಾಗಿ ಉದ್ಯಮ ಮತ್ತು ಸಮಾಜ ಸೇವೆಯ ಮೂಲಕ ರಾಜಧಾನಿ ಬೆಂಗಳೂರಿನಲ್ಲಿ ಗಮನ ಸೆಳೆಯುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಪ್ರತಿಷ್ಠಿತ ವಿಜಯವಾಣಿ ಪತ್ರಿಕೆ ಬಾಳಯ್ಯ ಅವರಿಗೆ ನೀಡಿರುವ ಬೆಂಗಳೂರು ರತ್ನ ಪ್ರಶಸ್ತಿ ಅವರ ಭವಿಷ್ಯದ ದಿಕ್ಯೂಟಿಯಾಗಿದೆ.
| ಶ್ರೀ ಡಾ. ಗುರುನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಸಂಸ್ಥಾನ ಮಳಲಿಮಠ, ಶಿವಮೊಗ್ಗ ಜಿಲ್ಲೆ
ಮುಂದಿನ ಗುರಿಹುಬ್ಬಳ್ಳಿಯಲ್ಲಿ ಎವಿಎಸ್ ಪ್ರಾಟೆಕ್ಸ್‌ನ ಕಚೇರಿ ತೆರೆದು ಇನ್ನೂ ದೊಡ್ಡ ಮಟ್ಟದಲ್ಲಿ ಸಂಸ್ಥೆಯನ್ನು ಬೆಳೆಸುವುದಾಗಿದೆ. ನಮ್ಮ ಸಂಸ್ಥೆಯನ್ನು ಇನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವುದು. ಜತೆಗೆ ಕಷ್ಟದಲ್ಲಿ ಇರುವವರಿಗೆ ಇನ್ನು ದೊಡ್ಡ ಮಟ್ಟದಲ್ಲಿ ಸಹಾಯ ಮಾಡುವ ಅಭಿಲಾಷೆ ಇದೆ. ಈ ಶಕ್ತಿಯನ್ನು ನನ್ನ ಪಾಲಿನ ದೇವರಾದ ಗುರುಗಳು ಕರುಣಿಸಬೇಕು. ಅವರ ಆಶೀರ್ವಾದ ಮತ್ತು ಸಲಹೆ ಪಡೆದು ಮುಂದುವರಿಯುತ್ತೇನೆ ಎಂದು ಬಾಳಯ್ಯ ಹೇಳುತ್ತಾರೆ.
ಶ್ರೀ ಬಾಳಯ್ಯ ಇಂಡಿಮಠ ಅವರು ಸಾಧನೆ ಪರಿಕ್ರಮ * ಗುರುತಿಸಿ ವಿಜಯವಾಣಿ ದಿನಪತ್ರಿಕೆ ‘ಬೆಂಗಳೂರು ರತ್ನ’ ಪ್ರಶಸ್ತಿ ನೀಡಿರುವುದು ಸಂತೋಷದ ಸಂಗತಿ. ಶ್ರೀಯುತರು ದಕ್ಷತೆ, ಪ್ರಾಮಾಣಿಕತೆ, ನಂಬಿಕೆ ಮತ್ತು ಗುಣಮಟ್ಟದ ಕೆಲಸಗಳಿಂದ ಎಲ್ಲರ ಮನವನ್ನು ಗೆದ್ದವರು. ಭವಿಷ್ಯದ ದಿನಗಳಲ್ಲಿ ಅವರ ಬದುಕು ಮತ್ತಷ್ಟು ಉಜ್ವಲವಾಗಲಿ.
| ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಬಾಳೆಹೊನ್ನೂರು
ನೂರಾರು ಮಂದಿಗೆ ಉದ್ಯೋಗದಾತಎವಿಎಸ್ ಪ್ರಾಜೆಕ್ಟ್ ಕಟ್ಟಡ ನಿರ್ಮಾಣ ಸಂಸ್ಥೆ ಕೇವಲ ಮೂರು ವರ್ಷದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಬೆಳೆಯತೊಡಗಿತು. ಸಂಸ್ಥೆಯು ಕಟ್ಟಡ ನಿರ್ಮಾಣಕ್ಕೆ ಬೇಕಾದ ಎ-ಟು- ಜೆಡ್ ಕೆಲಸ ಮಾಡಿಕೊಡುತ್ತದೆ. ಕಟ್ಟಡ ಕಟ್ಟುವುದು, ಒಳಾಂಗಣ ವಿನ್ಯಾಸ, ವುಡ್‌ವರ್ಕ್, ಟೈಲ್ಸ್, ಪೇಂಟಿಂಗ್ ಸೇರಿ ಇತರೆ ಎಲ್ಲ ಕೆಲಸವನ್ನು ಮಾಡಿಕೊಡಲಾಗುತ್ತದೆ. 200 ಮಂದಿ ಪೇಂಟಸ್ರ್, ಸಿವಿಲ್ (ಕಟ್ಟಡ ಕಾರ್ಮಿಕರು) ಕೆಲಸ ಮಾಡುವ 30 ಮಂದಿ ಇದ್ದಾರೆ. ಈ ಸಂಸ್ಥೆಯಲ್ಲಿ 12 ಮಂದಿ ಕಾಯಂ ಸಿಬ್ಬಂದಿ, 9 ಜನ ಸಿವಿಲ್​ ಇಂಜಿನಿಯರ್, ಅಕೌಂಟೆಂಟ್ ಸೇರಿ ಸುಮಾರು 300 ಮಂದಿ ಕೆಲಸ ಮಾಡುತ್ತಿದ್ದಾರೆ. ಪ್ರತಿವರ್ಷ ಸುಮಾರು 2.5 ಕೋಟಿ ರೂ. ವ್ಯವಹಾರ ನಡೆಯುತ್ತಿದೆ.
ಗುರುಗಳ ಕಾಲ್ಗುಣದಿಂದ ಸ್ವಂತ ಕಟ್ಟಡ ಖರೀದಿ2022ರಲ್ಲಿ ಮುರುಗೇಶ್ ಪಾಳ್ಯದಲ್ಲಿರುವ ಡಾ.ಅಪ್ಪಾಜಿ ಶ್ರೀ ವೀರಸೋಮೇಶ್ವರ ಪ್ರಾಜೆಕ್ಟ್ (ಎವಿಎಸ್) ಕಂಪನಿಗೆ ಗುರುಗಳನ್ನು ಬಾಳಯ್ಯ ಪಾದಪೂಜೆಗೆ ಆಹ್ವಾನಿಸಿದರು. ಚಿಕ್ಕ ಕಚೇರಿ ಇದ್ದರೂ ಗುರುಗಳು ಬಂದು ಆಶೀರ್ವಾದ ಮಾಡಿದರು. ಗುರುಗಳು ಬಂದುಹೋದ ಒಂದೇ ತಿಂಗಳಿನಲ್ಲಿ ಬಾಡಿಗೆಗೆ ಇದ್ದ ಕಟ್ಟಡವನ್ನು ಬಾಳಯ್ಯನವರೇ ಖರೀದಿ ಮಾಡಿದರು. ಇದೆಲ್ಲವೂ ಗುರುಗಳ ಕಾಲ್ಗುಣದಿಂದ ಸಾಧ್ಯವಾಗಿದೆ. ನಮ್ಮ ಇಡೀ ಕುಟುಂಬ ನಾವು ಸಾಯುವವರೆಗೂ ಗುರುಗಳಿಗೆ ಚಿರಋಣಿಯಾಗಿರುತ್ತೇವೆ ಎನ್ನುತ್ತಾರೆ ಬಾಳಯ್ಯ.
ಗುರುಗಳು ನನ್ನ ಪಾಲಿನ ದೇವರುಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ನನ್ನ ಪಾಲಿನ ದೇವರು. 25ರ ಹರೆಯದಿಂದಲೂ ನನಗೆ ಗುರುಗಳ ಒಡನಾಟವಿದೆ. 2016ರಿಂದ ಅವರ ಕೃಪಾಕಟಾಕ್ಷ ನನ್ನ ಮೇಲೆ ಬಿತ್ತು. ನಾನು ಇಂದು ಒಂದಿಷ್ಟು ಏನಾದರೂ ಸಾಧನೆ ಮಾಡಿದ್ದೇನೆ ಅಂದರೆ ಅದರ ಶ್ರೇಯಸ್ಸು ಗುರುಗಳಿಗೆ ಸಲ್ಲಬೇಕು. ವ್ಯವಹಾರದಲ್ಲಿ ನಷ್ಟವಾದಾಗ ಈ ಜೀವನವೇ ಬೇಡ ಎಂದು ನಿರ್ಧರಿಸಿದ್ದೆ. ಅದೇ ರಾತ್ರಿ ಗುರುಗಳು ಕನಸಿನಲ್ಲಿ ಬಂದು ಧೈರ್ಯ ತುಂಬಿ ಆಶೀರ್ವಾದ ಮಾಡಿದರು. ಒಂದು ವೇಳೆ ಗುರುಗಳು ನನ್ನ ಕನಸಿನಲ್ಲಿ ಬರದೆ ಹೋಗಿದ್ದರೆ ನಾನು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ನನ್ನ ಕುಟುಂಬ ಅನಾಥವಾಗುತ್ತಿತ್ತು ಎಂದು ಬಾಳಯ್ಯ ಭಾವುಕರಾಗುತ್ತಾರೆ.
ಎದೆಗುಂದಬೇಡಿ…ಕಷ್ಟ ಬಂದಿದೆ ಎಂದು ಯಾರೊಬ್ಬರೂ ಎದೆಗುಂದಬೇಡಿ. ಆ ಕಷ್ಟದ ದಿನಗಳನ್ನು ನಾವು ಎದುರಿಸಿ ನಿಂತರೆ ಮುಂದೆ ಒಂದಲ್ಲ ಒಂದು ದಿನ ಸಾಧನೆಯೆಂಬ ಶಿಬಿರವನ್ನು ಬರಬಹುದು. ಇದು ನನ್ನ ಅನುಭವದ ಮಾತು. ನಾನು ಒಂದು ಹಂತದಲ್ಲಿ ‘ಈ ಜೀವನವೇ ಬೇಡ’ ಎಂಬ ನಿರ್ಧಾರಕ್ಕೆ ಬಂದಿದ್ದೆ. ಆಗ ಜೀವ ಕಳೆದುಕೊಂಡಿದ್ದಿದ್ದರೆ ನನ್ನ ಮಕ್ಕಳು ಅನಾಥರಾಗುತ್ತಿದ್ದರು. ಗುರುಗಳ ಆಶೀರ್ವಾದದಿಂದ ಸಾಧನೆಯತ್ತ ಹೆಜ್ಜೆ ಇಟ್ಟಿದ್ದೇನೆ ಎನ್ನುತ್ತಾರೆ ಬಾಳಯ್ಯ ಇಂಡಿಮಠ,
ದುಡಿಯುವ ಛಲಹೊತ್ತು ಬೆಂಗಳೂರು ನಗರಕ್ಕೆ ಕಾಲಿಟ್ಟ ಸಹೋದರ ಬಾಳಯ್ಯ ಅಂಡಿಮಠ ಜೀವನದ ಹಾದಿಯಲ್ಲಿ ಸಾಕಷ್ಟು ಸೋಲು ಮತ್ತು ನೋವುಗಳನ್ನು ತಂಡವರು. ವ್ಯವಹಾರದಲ್ಲಿ ಏರಿಳಿತಗಳು ಹೆಚ್ಚಾದರೂ ಧೃತಿಗೆಡದೆ ಉದ್ದಿಮೆ ಕಟ್ಟಿ ಉನ್ನತ ಸ್ಥಾನ ಪಡೆದಿದ್ದಾರೆ. ಇವರಿಗೆ ಜಗದ್ಗುರು ರೇಣುಕರ ಆಶೀರ್ವಾದವಿದೆ. ವಿಜಯ ಸಂಕೇಶ್ವರ ಅವರ ಸಂಸ್ಥೆಯಿಂದ ಬೆಂಗಳೂರು ರತ್ನ ಪ್ರಶಸ್ತಿ ಪಡೆದಿದ್ದು, ದೇವರಹಿಪ್ಪರಗಿಯ ಜನತೆಗೆ, ವೀರಶೈವ ಲಿಂಗಾಯತ ಸಮುದಾಯಕ್ಕೆ ಹಾಗೂ ಕುಟುಂಬದವರಿಗೂ ಮತ್ತು ವಾಣಿಜ್ಯ ಉದ್ದಿಮೆದಾರರಿಗೂ ಹೆಮ್ಮೆಯ ವಿಷಯವಾಗಿದೆ.
| ಪ್ರಭಾವತಿ ಬೆಳವಣಕಿಮನ ಈಶ್ವರಿ ಮಹಿಳಾ ಫೌಂಡೇಶನ್
ಪ್ರತಿಷ್ಠಿತ ಕಂಪನಿಗಳ ಒಡಂಬಡಿಕೆಬಾಗ್ಯನೆ ಇಂಡಿಯಾ ಪ್ರೈ.ಲಿ. ಬೊಯಿಂಗ್ ಇಂಡಿಯಾ ಪೈ.ಲಿ., 315 ವರ್ಕ್ ಅವೆನ್ಯೂ ಸ್ಪೇಸಸ್ ಪ್ರೈ.ಲಿ., ಕ್ಯಾಪಿಟಲ್ ಒನ್ ಸರ್ವಿಸಸ್ ಇಂಡಿಯಾ ಪ್ರೈ.ಲಿ., ಕಂಮೋಲ್ಡ್ ಸಿಸ್ಟಮ್ಸ್ ಇಂಡಿಯಾ ಪ್ರೈ.ಲಿ., ಎಸ್ ಬ್ಯಾಂಕ್ ಲಿ., ನಹರಾಸ್ ಇಂಜಿನಿಯರಿಂಗ್ ಇಂಡಿಯಾ ಪ್ರೈ.ಲಿ., ಸೊನಾಟ ಸಾಫ್ಟ್‌ವೇರ್, ಗ್ರಾಂಟ್ ತೊರಾಟಂನ್, ಇಂಟುಬಟ್, ಕಾಂಪೆಟ್ಯೂಸ್, ಎನ್‌ಡಿಎ ಬಿಲ್ಡ್ ಟಚ್ ಇನೋವೇಷನ್ ಪ್ರೈ. ಲಿ., ಕಲರ್ ಟೋಕನ್ಸ್, ಪ್ರಗತಿ ಕಾನ್ಸೆಪ್ಸ್, ಡ್ರಿಂಕ್ ಪೈಮ್, ಟೆಕ್ಸಟೀ ಮತ್ತು ಪಿಡಿಲೈಟ್ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಕಟ್ಟಡ ಕಾಮಗಾರಿಗಳನ್ನು ಎವಿಎಸ್ ಕಂಪನಿ ಮಾಡಿಕೊಡುತ್ತಿದೆ.
ಪ್ರಶಸ್ತಿ ಸನ್ಮಾನಗಳುಬಾಳಯ್ಯ ಅವರಿಗೆ ಹಲವು ಮಠ- ಮಾನ್ಯಗಳಿಂದ ಗೌರವ ಸನ್ಮಾನ ದೊರೆತಿವೆ. ಇವರ ಸಂಸ್ಥೆಯ ಉತ್ತಮ ಕಾರ್ಯಕ್ಕೆ ಏಷ್ಯನ್ ಪೇಂಟ್ಸ್ ‘ರೈಸಿಂಗ್ ಸ್ಟಾರ್’ ಪ್ರಶಸ್ತಿ ನೀಡಿದೆ. ಅನೇಕ ಸಂಸ್ಥೆಗಳು ಅತ್ಯುತ್ತಮ ಲೀಡಿಂಗ್ ಸಂಸ್ಥೆ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ. 2022ರಲ್ಲಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರ್ ಪ್ರತಿಷ್ಠಾನ ಟ್ರಸ್ಟ್ ಆಯೋಜಿಸಿದ್ದ ಅಖಿಲ ಕರ್ನಾಟಕ ಕವಿಗಳ 10ನೇ ಸಮ್ಮೇಳನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಾಳಯ್ಯ ‘ಕರ್ನಾಟಕ ವಿಭೂಷಣ ಪ್ರಶಸ್ತಿ’ಗೆ ಭಾಜನರಾದರು. 2022ರಲ್ಲಿ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಳಲಿ ಸಂಸ್ಥಾನ ಮಠದಲ್ಲಿ ಶ್ರೀರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಜರುಗಿದ ಕಾರ್ತಿಕ ದೀಪೋತ್ಸವದ ಶುಭ ಸಂದರ್ಭದಲ್ಲಿ ಗುರುಸೇವಾನಿಷ್ಠ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2022ರಲ್ಲಿ ಬೆಳಗಾವಿ ಜಿಲ್ಲೆ ಅಥಣಿಯ ಚಮಕೇರಿಯ ಕನ್ನಡಿಗರ ಸಾಹಿತ್ಯ ಮತ್ತು ಸಾಂಸ್ಕೃತಿಕ ಟ್ರಸ್ಟ್ 4ನೇ ಗಡಿನಾಡು ಕನ್ನಡ ಸಾಂಸ್ಕೃತಿಕ ಸಂಭ್ರಮದಲ್ಲಿ ಗಡಿನಾಡು ತಿರೋಮಣಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2023ರಲ್ಲಿ ಬೆಂಗಳೂರಿನ ಎಕತಾ ಟ್ರಸ್ಟ್ ಶ್ರೀ ಡಾ. ಬಸವಯೋಗಿ ಗುರೂಜಿ ಸಾರಥ್ಯದಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಶ್ರೇಷ್ಠ ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ವ್ಯಕ್ತಿ ಜೀವನದಲ್ಲಿ ಸದೃಡ ನಿಲುವು ಮತ್ತು ಪ್ರಾಮಾಣಿಕ ಭಲ ಹೊಂದಿದ್ದರೆ ಏನಾದರೂ ಸಾಧಿಸಬಲ್ಲ ಎಂಬುದಕ್ಕೆ ನಿದರ್ಶನ ಬಾಳಯ್ಯ ಇಂಡಿಮಠ, ವೃತ್ತಿ ಆರಂಭದಿಂದಲು ಹಲವಾರು ಏರುಪೇರು ಕಂಡವರು ಬಾಳೆ ಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ ಆಶೀರ್ವಾದದಿಂದ ಬೆಂಗಳೂರಿನಲ್ಲಿ ಎವಿಎಸ್ ಎಂಟರ್ ಪ್ರೈಸಸ್ ಕಚೇರಿ ಆರಂಭಿಸಿ ಇಂದು ಉತ್ತುಂಗಕ್ಕೆ ಬೆಳೆದಿದ್ದಾರೆ. ಇದಕ್ಕೆ ಅವರ ಪರಿಶ್ರಮವೇ ಕಾರಣ. ಗುರುವಿಗರ್ಪಣಾ ಮನೋಭಾವದಲ್ಲಿ ನಡೆಯುತ್ತಿರುವ ಇವರು ಬದುಕು ಮತ್ತು ವ್ಯವಹಾರ ಕ್ಷೇತ್ರದಲ್ಲಿ ಮತ್ತಷ್ಟು ಬೆಳೆಯಲೆಂದು ಹಾರೈಸುತ್ತೇನೆ.
| ಡಾ.ಗುರುಪಾದಯ್ಯ ವೀ. ಸಾಲಿಮಠ ಸವಣೂರು
ದಂತ ಚಿಕಿತ್ಸೆ ಖುಷಿ ಪಸರಿಸಿದ ಡಾ.ನಿರಂಜನ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + fourteen =
Remember me
