ಉಳ್ಳಾಲ:‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬುದು ಇಂದಿಗೂ ಘೋಷಣೆಯಾಗಿಯೇ ಉಳಿದಿರುವುದಕ್ಕೆ ಪ್ರತ್ಯಕ್ಷ ಉದಾಹರಣೆ ಬಾಳೆಪುಣಿಯ ಕೊರಗ ಕುಟುಂಬ. ಆದಿವಾಸಿ ಕೊರಗ ಜನಾಂಗದ ಸುಶೀಲಾ-ಬಾಬು ದಂಪತಿ ಹಲವು ವರ್ಷಗಳ ಹಿಂದೆ ಕೇರಳದಿಂದ ವಲಸೆ ಬಂದಿದ್ದು, ಆರು ವರ್ಷಗಳಿಂದ ಬಾಳೆಪುಣಿ ಗ್ರಾಪಂ ವ್ಯಾಪ್ತಿಯ ಪಾಂಡಿಕಟ್ಟ ಎಂಬಲ್ಲಿ ಸಣ್ಣ ಮನೆ ನಿರ್ಮಿಸಿ ವಾಸವಿದ್ದಾರೆ. ಆದರೆ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಈ ಕುಟುಂಬ ಮೂಲಸೌಲಭ್ಯ ವಂಚಿತವಾಗಿದೆ.
ದಂಪತಿ ಜೀವನ ನಿರ್ವಹಣೆಗಾಗಿ ಕುಲಕಸುಬಾದ ಬುಟ್ಟಿ ಹೆಣೆಯುವುದು ಮತ್ತು ಕೂಲಿಯನ್ನು ನಂಬಿಕೊಂಡಿದ್ದಾರೆ. ಇವರಲ್ಲಿ ಸರ್ಕಾರದ ಹಕ್ಕುಪತ್ರ, ಮತದಾರರ ಗುರುತು ಚೀಟಿ ಇದೆ. ಮನೆ ನಂಬ್ರ, ಆಧಾರ್ ಕಾರ್ಡ್ ಇಲ್ಲ. ಮನೆಯ ಮೇಲ್ಛಾವಣಿಗೆ ಸಿಮೆಂಟ್ ಶೀಟ್ ಅಳವಡಿಸಲಾಗಿದ್ದು, ಬಾಗಿಲಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಇಲ್ಲ. ಗುರುತಿನ ಚೀಟಿ ವ್ಯವಸ್ಥೆ ಮಾಡಿಕೊಡಲು ಉತ್ಸುಕತೆ ತೋರಿದವರು ಮೂಲ ಸೌಕರ್ಯ ವ್ಯವಸ್ಥೆಯ ಬಗ್ಗೆ ಕಾಳಜಿ ವಹಿಸದಿರುವುದು ನಿರ್ಲಕ್ಷೃಕ್ಕೆ ಸಾಕ್ಷಿ.
ಜನಶಿಕ್ಷಣ ಟ್ರಸ್ಟ್ ಪ್ರಯತ್ನ:ಬಾಳೇಪುಣಿ ಗ್ರಾಮದಲ್ಲಿ 21 ಕೊರಗ ಕುಟುಂಬಗಳಿದ್ದು, ಪಾಂಡಿಕಟ್ಟದಲ್ಲಿ ಆರು ಕುಟುಂಬಗಳಿವೆ. ಆದರೆ ಸುಶೀಲಾ-ಬಾಬು ಅವರ ಮನೆ ಮತ್ತು ವ್ಯವಸ್ಥೆಗಳು ಶತಮಾನಗಳ ಹಿಂದಿನ ಮಾದರಿಯಲ್ಲೇ ಇದೆ. ಇವರತ್ತ ಜನಪ್ರತಿನಿಧಿಗಳೂ ಗಮನಹರಿಸದ ಕಾರಣ ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಜನಶಿಕ್ಷಣ ಟ್ರಸ್ಟ್, ದಾನಿಗಳ ನೆರವು ಪಡೆದು ಸೋಲಾರ್ ದೀಪಗಳನ್ನು ಅಳವಡಿಸಿ ಕತ್ತಲು ತುಂಬಿದ್ದ ಮನೆಗೆ ಬೆಳಕು ನೀಡಿ ದಂಪತಿಯ ಮುಖದಲ್ಲಿ ನಗು ತರಿಸಿದೆ. ಜನ ಶಿಕ್ಷಣ ಟ್ರಸ್ಟ್, ಸೆಲ್ಕೋ ಫೌಂಡೇಶನ್, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಸೋಲಾರ್ ಗ್ರಾಮ ಅಭಿಯಾನದಡಿ ಸೋಲಾರ್ ದೀಪ ಕಲ್ಪಿಸಲಾಗಿದೆ.
ಸೋಲಾರ್ ಬೆಳಕಿನ ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತ ಗುರುವಪ್ಪ ಬಾಳೆಪುಣಿ, ಘನತ್ಯಾಜ್ಯ ನಿರ್ವಾಹಕ ಇಸ್ಮಾಯಿಲ್, ಹೀಲ್ಸ್ ಫೌಂಡೇಶನ್‌ನ ಅಜಿತ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಸುನೀಲ್ ಕುಮಾರ್, ಕೇಶವ, ಮಂಡಲ ಪಂಚಾಯಿತಿ ಮಾಜಿ ಕಾರ್ಯದರ್ಶಿ ಮೌರಿಸ್ ಡಿಸೋಜ, ಮಾಜಿ ಸದಸ್ಯ ಮೈಕಲ್ ಡಿಸೋಜ, ಪಂಚಾಯಿತಿ ನೌಕರ ಸದಾನಂದ, ತಾಪಂ ಸದಸ್ಯ ಹೈದರ್ ಕೈರಂಗಳ, ನರೇಗಾ ಮಾಜಿ ಓಂಬುಡ್ಸ್‌ಮನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಪಂಚಾಯಿತಿ ಮಾಜಿ ಸದಸ್ಯ ಸಿಂಜಿನಾ ವೇಗಸ್, ಸೆಲ್ಕೋ ವ್ಯವಸ್ಥಾಪಕ ರವೀನಾ ಮೊದಲಾದವರು ಭಾಗವಹಿಸಿದ್ದರು.
ಸುಶೀಲಾ- ಬಾಬು ಅವರಿಗೆ ಮೂಲಸೌಕರ್ಯ ಕಲ್ಪಿಸಲು ಜಾತಿ ಪ್ರಮಾಣಪತ್ರ ಸಹಿತ ಬೇಕಾದ ಯಾವುದೇ ದಾಖಲೆಗಳಿಲ್ಲ. ಇತ್ತೀಚೆಗೆ ಹಕ್ಕುಪತ್ರ ಸಿಕ್ಕಿದ್ದು ಶೀಘ್ರ 9/11 ಮಾಡಿ ಮನೆನಂಬ್ರ ನೀಡಲಾಗುವುದು. ಇದೀಗ ದಾನಿಗಳ ನೆರವಿನಿಂದ ಸೋಲಾರ್ ದೀಪ ಅಳವಡಿಸಲಾಗಿದೆ.ಸುನೀಲ್ ಕುಮಾರ್, ಬಾಳೆಪುಣಿ ಪಿಡಿಒ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
