ಬಳ್ಳಾರಿ:ಇತ್ತೀಚಿಗಷ್ಟೇ 54 ವರ್ಷ ವಯಸ್ಸಿನ ಫಾಸ್ಟರ್ ಜತೆ 24 ವರ್ಷದ ಯುವತಿ ನಾಪತ್ತೆಯಾಗಿದ್ದ ಪ್ರಕರಣ ಜಿಲ್ಲೆಯಲ್ಲಿ ಭಾರಿ ಸದ್ದು ಮಾಡಿತ್ತು. ಅಲ್ಲದೆ ಯುವತಿ ಪಾಲಕರು ಮಗಳು ಕಾಣಿಸುತ್ತಿಲ್ಲ ಎಂದು ಕಂಗಾಲಾಗಿ ಪೊಲೀಸ್​ ಠಾಣೆ ಮೆಟ್ಟಿಲನ್ನೂ ಏರಿದ್ದರು. ಇರ ಬೆನ್ನಲ್ಲೇ ಆ ಯುವತಿ ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದಳು. ಇದೀಗ ಆಕೆ ತನಗಿಂತ 30 ವರ್ಷ ದೊಡ್ಡವನ ಜತೆ ಮದುವೆ ಆಗಿರುವ ಫೋಟೋಗಳು ವೈರಲ್​ ಆಗಿವೆ.
ಡಿ.16 ರಂದು ನಗರದ ಗುಗ್ಗರಹಟ್ಟಿ ಪ್ರದೇಶದ ಇಂಜಿನಿಯರಿಂಗ್ ಪದವೀಧರೆ ಶ್ವೇತಾ ಎಂಬಾಕೆ ಲಿವಿಂಗ್ ವಾಟರ್ ಚರ್ಚ್ ಫಾಸ್ಟರ್ ರವಿಕುಮಾರ್ ಜತೆ ಪರಾರಿಯಾಗಿದ್ದಳು. ಮಗಳು ನಾಪತ್ತೆಯಾಗಿರುವ ಕುರಿತು ಡಿ.20ರಂದು ಆಕೆಯ ಪಾಲಕರು ದೂರು ನೀಡಿದ್ದರು.ಇದನ್ನೂ ಓದಿರಿಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ
ಫಾಸ್ಟರ್ ಜತೆಗೆ ಯುವತಿ ನಾಪತ್ತೆ ಪ್ರಕರಣ ಜಿಲ್ಲೆಯಲ್ಲಿ ತರಹೇವಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ‘ನಾನು ನಾಪತ್ತೆ ಆಗಿಲ್ಲ ಹಾಗೂ ಅಪಹರಣಕ್ಕೂ ಒಳಗಾಗಿಲ್ಲ. ಸ್ವ ಇಚ್ಛೆಯಿಂದ ಊರು ತೊರೆದಿರುವೆ’ ಎಂದು ಶ್ವೇತಾ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಕಳಿಸಿದ್ದಳು.‘ನಾನು ಚರ್ಚ್​ಗೆ ಹೋಗುತ್ತಿದ್ದೆ. ನಾನು ಚರ್ಚ್ ಹೋಗೊದು ನನ್ನ ತಂದೆ-ತಾಯಿಗೆ ಇಷ್ಟ ಇರಲಿಲ್ಲ. ಈ ವಿಚಾರವಾಗಿ ನಮ್ಮ ಮನೆಯಲ್ಲಿ ಗಲಾಟೆ ಆಗಿತ್ತು. ಚರ್ಚ್​ಗೆ ಬರದಂತೆ ತಡೆಯಬೇಕೆಂದು ಫಾಸ್ಟರ್ ಜತೆ ನನ್ನ ಪಾಲಕರು ಚರ್ಚಿಸಿದ್ದರು. ಆದರೂ, ನಾನು ಚರ್ಚ್​ಗೆ ಹೋಗುವುದನ್ನು ಬಿಡಲಿಲ್ಲ. ನನ್ನನ್ನು ಮದುವೆಯಾಗುವಂತೆ ಫಾಸ್ಟರ್ ಬಳಿ ಕೇಳಿಕೊಂಡಿದ್ದರೂ ಅವರು ನಿರಾಕರಿಸಿದ್ದರು. ನನ್ನ ಬಲವಂತದ ಮೇರೆಗೆ ಫಾಸ್ಟರ್ ನನ್ನೊಂದಿಗೆ ಅಜ್ಞಾತ ಸ್ಥಳಕ್ಕೆ ಬಂದಿದ್ದಾರೆ. ನಾನು ಚರ್ಚ್​ನಲ್ಲಿ ಅವರ ಜತೆ ಮದುವೆಯಾಗಿದ್ದೇನೆ’ ಎಂದು ಯುವತಿ ಹೇಳಿಕೊಂಡಿದ್ದಳು.ಇದನ್ನೂ ಓದಿರಿಶರವೇಗದ ರೈಲಿನ ಎದುರು ಧರ್ಮೇಗೌಡ ನಿಂತಿದ್ಹೇಗೆ? ರೈಲು ಚಾಲಕ ಬಾಯ್ಬಿಟ್ಟ ಭಯಾನಕ ಸತ್ಯ
ವಯಸ್ಸಿನಲ್ಲಿ ತನಗಿಂತ 30 ವರ್ಷ ದೊಡ್ಡವನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಯುವತಿ, ‘ನನ್ನ ಮತ್ತು ನನ್ನ ಗಂಡನಿಗೆ ನನ್ನ ಕುಟುಂಬದಿಂದ ಪ್ರಾಣ ಬೆದರಿಕೆ ಇದೆ. ನಮಗೆ ರಕ್ಷಣೆ ಕೊಡಿ’ ಎಂದು ಕೋರಿದ್ದಳು. ಇದೀಗ ಅವರಿಬ್ಬರ ಮದುವೆ ಕ್ಷಣದ ಫೋಟೋಗಳು ಜಾಲತಾಣದಲ್ಲಿ ವೈರಲ್​ ಆಗಿವೆ. ಫಾಸ್ಟರ್​ ಜತೆ ಮಗಳು ಮದುವೆ ಆಗಿರುವ ವಿಚಾರ ಕೇಳಿದ ಪಾಲಕರು ಆಘಾತಗೊಂಡಿದ್ದಾರೆ.
24ರ ಯುವತಿ ಜತೆ ಮದುವೆಯಾಗಿ ಖುಷಿಯಾಗಿದ್ದ ಬೆನ್ನಲ್ಲೇ 54ರ ಫಾಸ್ಟರ್​ಗೆ ಶಾಕ್​!

ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?

ಗ್ರಾಪಂ ಚುನಾವಣೆಯಲ್ಲಿ ಗೆದ್ದವರನ್ನು ನಮ್ಮ ಪಕ್ಷದ ಬೆಂಬಲಿತರು ಎಂದು ಹೇಳಿದ್ರೆ ಬೀಳುತ್ತೆ ಕೇಸ್​!

ಪ್ರಣಾಳಿಕೆ ಪತ್ರದಲ್ಲೇ ಮತದಾರರನ್ನು ಬೆದರಿಸಿದ್ದ ಗಂಡೆದೆ ಗಂಗಮ್ಮನಿಗೆ ಬಿದ್ದ ಮತ ಎಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
