ಬಳ್ಳಾರಿ:24ರ ಹರೆಯದ ಯುವತಿಯನ್ನು ಮದುವೆಯಾದ ಖುಷಿಯಲ್ಲಿದ್ದ 54 ವರ್ಷದ ಫಾಸ್ಟರ್​ಗೆ ಇದೀಗ ಮತ್ತಿಬ್ಬರು ಮಹಿಳೆಯರಿಂದ ಸಂಕಷ್ಟ ಎದುರಾಗಿದೆ.
ಡಿ.16 ರಂದು ಲಿವಿಂಗ್ ವಾಟರ್ ಚರ್ಚ್ ಫಾಸ್ಟರ್ ರವಿಕುಮಾರ್ ಜತೆ ನಗರದ ಗುಗ್ಗರಹಟ್ಟಿ ಪ್ರದೇಶದ ಇಂಜಿನಿಯರಿಂಗ್ ಪದವೀಧರೆ ಶ್ವೇತಾ ಪರಾರಿಯಾಗಿದ್ದಳು. ಅಲ್ಲದೆ ಪಾಲಕರಿಗೂ ತಿಳಿಯದಂತೆ ಮದುವೆಯನ್ನೂ ಮಾಡಿಕೊಂಡಿದ್ದಾಳೆ. ಫಾಸ್ಟರ್ ಜತೆ ಯುವತಿ ನಾಪತ್ತೆ ಪ್ರಕರಣ ಜಿಲ್ಲೆಯಲ್ಲಿ ತರಹೇವಾರಿ ಚರ್ಚೆಗೆ ಗ್ರಾಸವಾಗಿತ್ತು. ಈ ನಡುವೆ ‘ನಾನು ನಾಪತ್ತೆ ಆಗಿಲ್ಲ ಹಾಗೂ ಅಪಹರಣಕ್ಕೂ ಒಳಗಾಗಿಲ್ಲ. ಸ್ವ ಇಚ್ಛೆಯಿಂದ ಊರು ತೊರೆದಿರುವೆ’ ಎಂದು ಶ್ವೇತಾ ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶ ಕಳಿಸಿದ್ದಳು. ಯುವತಿಯೇ ಇಷ್ಟಪಟ್ಟು ಮದುವೆ ಆಗಿದ್ದಾಗಿ ಹೇಳಿದ್ದರಿಂದ ಫಾಸ್ಟರ್​ ಬಚಾವ್​ ಆಗಿದ್ದ. ಇದೀಗ ಈತನ ವಿರುದ್ಧ ಇಬ್ಬರು ಮಹಿಳೆಯರು ವಂಚನೆ ಹಾಗೂ ಲೈಂಗಿಕ ಕಿರುಕುಳದ ದೂರು ದಾಖಲಾಗಿದ್ದು, ಆರೋಪಿ ಫಾಸ್ಟರ್​ನನ್ನು ಬೆಂಗಳೂರಿನಲ್ಲಿ ಬಂಧಿಸಿ ಬಳ್ಳಾರಿಗೆ ಪೊಲೀಸರು ಕರೆತಂದಿದ್ದಾರೆ.ಇದನ್ನೂ ಓದಿರಿ54ರ ಫಾಸ್ಟರ್ ಜತೆ 24ರ ಯುವತಿ ಮದುವೆ: ಇಲ್ಲಿದೆ ಎಕ್ಸ್​ಕ್ಲೂಸಿವ್​ ಫೋಟೋಸ್​
ಮಗಳು ಶ್ವೇತಾ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಪಾಲಕರು ಕೇಸ್​ ದಾಖಲಿಸಿದ್ದ ಪ್ರಕರಣದಲ್ಲಿ ಫಾಸ್ಟರ್​ ಅರೆಸ್ಟ್​ ಆಗದಂತೆ ಸ್ವತಃ ಶ್ವೇತಾ ಎಚ್ಚರಿಕೆ ವಹಿಸಿದ್ದಳು. ಆದರೆ ಫಾಸ್ಟರ್ ವಿರುದ್ಧ ಶುಕ್ರವಾರ(ಜ.1) ಇಲ್ಲಿನ ಮಹಿಳಾ ಠಾಣೆಯಲ್ಲಿ ಮಹಿಳೆಯರಿಬ್ಬರು ದೂರು ಕೊಟ್ಟಿದ್ದು, ಎರಡು ಪ್ರತ್ಯೇಕ ಎಫ್​ಐಆರ್ ದಾಖಲಾಗಿದೆ. ಇದರ ಬೆನ್ನಲ್ಲೇ ಫಾಸ್ಟರ್ ರವಿಕುಮಾರ್​ನನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ. ಇಂದು ನ್ಯಾಯಾಲಯಕ್ಕೆ ಆರೋಪಿಯನ್ನು ಹಾಜರ್​ ಪಡಿಸುವುದಾಗಿ ಎಸ್ಪಿ ಸೈದುಲ್ ಅಡಾವತ್ ಹೇಳಿದ್ದಾರೆ.
ವರ್ಷಾಚರಣೆಗೆ ಕೇಕ್​ ಕತ್ತರಿಸುತ್ತಿದ್ದ ಯುವಕರ ಹಿಂದೆಯೇ ಹಾದುಹೋದ ದೆವ್ವ! ಭಯಾನಕ ವಿಡಿಯೋ ಇಲ್ಲಿದೆ

ಸಿಂಹಾದ್ರಿಯ ಸಿಂಹ ಸಿನಿಮಾ ಪ್ರೇರಣೆ: ಯುವಕರು ಕಣಕ್ಕಿಳಿಸಿದ್ದ ನಿರ್ಗತಿಕನಿಗೆ ಗೆಲುವೇ? ಸೋಲೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
