ಬೆಂಗಳೂರು:ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಚಿತ್ರತಂಡವು ಸದ್ಯದಲ್ಲೇ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ.
ಅಲ್ಲಿ ಚಿತ್ರಕ್ಕೆ ಒಂದಿಷ್ಟು ಮಹತ್ವದ ದೃಶ್ಯಗಳನ್ನು ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಸಜ್ಜಾಗಿದೆ. ಅದ್ಕಕೂ ಮುನ್ನ, ಸದ್ಯ ಮಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ವಾಟರ್ ಗೇಮ್ಸ್​ ಸೇರಿದಂತೆ ಹಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿದೆ.
ಗಣೇಶ್ ಮೊದಲ ಬಾರಿಗೆ ಕ್ರಿಕೆಟಿಗನಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ನಾಯಕಿ ರುಕ್ಮಿಣಿ ವಸಂತ್ ಈಜುಗಾರ್ತಿಯಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿದ್ದು, ಗಣೇಶ್ ಮತ್ತು ಪ್ರೀತಂ ಜೋಡಿಯ ನಾಲ್ಕನೇ ಚಿತ್ರ ಇದಾಗಿದೆ.
ಇದುವರೆಗೂ ತಮ್ಮದೇ ಕಥೆ ನಿರ್ದೇಶಿಸುತ್ತಿದ್ದ ಪ್ರೀತಂ, ಈ ಬಾರಿ ಛಾಯಾಗ್ರಾಹಕಿ ಪ್ರೀತಾ ಜಯರಾಂ ಅವರ ಕಥೆಯನ್ನಾಧರಿಸಿ ಚಿತ್ರಕಥೆ ಬರೆದಿದ್ದಾರೆ. ಮಾಸ್ತಿ ಮಂಜು ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ, ಅಭಿಲಾಷ್ ಕಲ್ಲತ್ತಿ ಛಾಯಾಗ್ರಹಣವಿದೆ.
ಅಪ್ರಾಪ್ತನಿಗೆ ಬಲವಂತವಾಗಿ ಶಸ್ತ್ರಚಿಕಿತ್ಸೆ ನಡೆಸಿ ಲಿಂಗಪರಿವರ್ತನೆ: ವೈದ್ಯೆ ವಿರುದ್ಧದ ಕೇಸ್​ ರದ್ದು ಮಾಡಲು ಹೈಕೋರ್ಟ್​ ನಕಾರ

ನಾನು ಬಿಗ್​ಬಾಸ್​ಗೆ ಹೋಗ್ತಿಲ್ಲ: ನಟ ಅನಿರುದ್ಧ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 11 =
Remember me
