ಬೆಂಗಳೂರು:ಬನಶಂಕರಿ ದೇವಸ್ಥಾನದ ಬ್ರಹ್ಮ ರಥೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ ಹಿನ್ನೆಲೆಯಲ್ಲಿ ಜ.6ರ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ಕನಕಪುರ ಮುಖ್ಯರಸ್ತೆಯಲ್ಲಿ ಸಂಚಾರ ಮಾರ್ಗದಲ್ಲಿ ಮಾರ್ಪಾಡು ಮಾಡಿ ನಗರ ಸಂಚಾರ ಪೊಲೀಸರು ಆದೇಶಿಸಿದ್ದಾರೆ.
ಸಾರಕ್ಕಿ ಮಾರ್ಕೆಟ್ ಜಂಕ್ಷನ್‌ನಿಂದ ಬನಶಂಕರಿ ಬಸ್ ನಿಲ್ದಾಣ ಜಂಕ್ಷನ್​ವರೆಗೆ ಎಲ್ಲ ಮಾದರಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಪರ್ಯಾಯ ಮಾರ್ಗ ಕಲ್ಪಿಸಿದ್ದಾರೆ.
ಕನಕಪುರ ಮುಖ್ಯರಸ್ತೆಯಿಂದ ನಗರ ಪ್ರವೇಶಿಸುವ ಕೆಎಸ್‌ಆರ್‌ಟಿಸಿ/ಬಿಎಂಟಿಸಿ ಬಸ್‌ಗಳು ಸಾರಕ್ಕಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಇಲಿಯಾಸ್‌ನಗರ ಜಂಕ್ಷನ್ ಮೂಲಕ ಕೆಎಸ್ ಲೇಔಟ್‌ನ ಜಂಕ್ಷನ್‌ಗೆ ಬಂದು ಸರ್ವಿಸ್ ರಸ್ತೆ ಮೂಲಕ ಬೇಂದ್ರೆ ಸರ್ಕಲ್ ಪ್ರವೇಶಿಸಿ ಯಾರಬ್ ನಗರ ಜಂಕ್ಷನ್ ಮೂಲಕ ನೇರವಾಗಿ ಬನಶಂಕರಿ ಬಸ್ ನಿಲ್ದಾಣಕ್ಕೆ ಬರಬಹುದು.
ದ್ವಿಚಕ್ರ ವಾಹನ, ಲಘು ವಾಹನಗಳು ಸಾರಕ್ಕಿ ಜಂಕ್ಷನ್ ಮೂಲಕ ಸಾರಕ್ಕಿ ಮಾರ್ಕೆಟ್ ಜಂಕ್ಷನ್​ವರೆಗೆ ಪ್ರವೇಶಿಸಿ ಬಲ ತಿರುವು ಪಡೆದು ಇಂದಿರಾಗಾಂಧಿ ಸರ್ಕಲ್‌ನಲ್ಲಿ ನಗರದ ಒಳ ಪ್ರವೇಶ ಮಾಡಬಹುದು. ನಗರದಿಂದ ಕನಕಪುರದ ಕಡೆಗೆ ಸಾಗುವ ವಾಹನಗಳು ಬನಶಂಕರಿ ಬಸ್ ನಿಲ್ದಾಣ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಯಾರಬ್‌ನಗರ ಜಂಕ್ಷನ್ ಮೂಲಕ ಕೆ.ಎಸ್.ಲೇಔಟ್ ಜಂಕ್ಷನ್‌ಗೆ ಬಂದು ಎಡತಿರುವು ಪಡೆದು ರಿಂಗ್ ರಸ್ತೆಯಲ್ಲಿ ಸಾಗಿ ಇಲಿಯಾಸ್ ನಗರ ಜಂಕ್ಷನ್ ಮೂಲಕ ಸಾರಕ್ಕಿ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ಕನಕಪುರ ಮುಖ್ಯರಸ್ತೆಗೆ ಸೇರಬೇಕು. ಸಾರ್ವಜನಿಕರು ತಾತ್ಕಾಲಿಕ ಸಂಚಾರ ಮಾರ್ಗ ಮಾರ್ಪಾಡಿಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಮಂಗಳಮುಖಿಯಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡ ಬಂಟ್ವಾಳ ಮೂಲದ ಮುಸ್ಲಿಂ ಯುವಕ! ಆಡಿಯೋ ವೈರಲ್​ ಬೆನ್ನಲ್ಲೇ ಆಘಾತಕಾರಿ ವಿಷಯ ಚರ್ಚೆ

ಸಂತನೆಂದರೆ ಯಾರು.. ದಿವ್ಯತೆ ಅರಿತವರು… ಸಖತ್​ ವೈರಲ್ ಆಗ್ತಿದೆ ಸಿದ್ದೇಶ್ವರ ಸ್ವಾಮೀಜಿ ಕುರಿತ ಈ ಹಾಡು!

ಮಂಡ್ಯದಲ್ಲಿ ಜಮೀನು ವಿವಾದ: ಹೊಲದಲ್ಲೇ ದಂಪತಿ ಮೇಲೆ ಕಾರು ಹರಿಸಿದ ದುಷ್ಕರ್ಮಿಗಳು! ಪತ್ನಿ ಸಾವು, ಪತಿ ಸ್ಥಿತಿ ಚಿಂತಾಜನಕ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fifteen + 20 =
Remember me
