ಚಾಮರಾಜನಗರ:ಸೂಪರ್​ ಸ್ಟಾರ್​ ರಜನಿಕಾಂತ್​ ಅವರು ವನ್ಯಜೀವಿ ಕುರಿತ ಸಾಕ್ಷ್ಯ ಚಿತ್ರದಲ್ಲಿ ನಟಿಸಲು ಬಂಡೀಪುರ ಅರಣ್ಯಕ್ಕೆ ಆಗಮಿಸಿದ್ದಾರೆ.
ಬೆನಿಜಾಯ್ ಏಷ್ಯಾ ಗ್ರೂಪ್ ನ ಸೆವೆನ್ ಟಾರಸ್ ಸ್ಟುಡಿಯೋ ಚಮನಹಳ್ಳಿಯಲ್ಲಿ ಈ ಸಾಕ್ಷ್ಯ ತಯಾರಿಸುತ್ತಿದೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಚಿತ್ರೀಕರಣಕ್ಕೆ ಅರಣ್ಯ ಇಲಾಖೆ ಜೊತೆ ಸಂಸ್ಥೆ ಒಡಂಬಡಿಕೆ ಮಾಡಿಕೊಂಡಿದೆ.
ಜ.27ರಂದು ಅರ್ಧ ದಿನ ಹಾಗೂ ಜ 28 ಬೆ.10 ರಿಂದ ಸಂಜೆ 6 ಗಂಟೆವರೆಗೆ. ಜ 29 ರಂದು ಅರ್ಧ ದಿನ ಚಿತ್ರೀಕರಣಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿದೆ.
ಶಬ್ದ ಹಾಗೂ ವಾಯು ಮಾಲಿನ್ಯವಾಗದಂತೆ ಚಿತ್ರೀಕರಣ ನಡೆಸಲು ಅರಣ್ಯ ಇಲಾಖೆ ಷರತ್ತು ವಿಧಿಸಿದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲಿ ಚಿತ್ರೀಕರಣ ನಡೆಯುತ್ತಿದೆ.
ಬೇರ್​ ಗ್ರೀಲ್ಸ್​ ಆಗಮನ: ಜನವರಿ 28ರಂದು ನಡೆಯುವ ಚಿತ್ರೀಕರಣಕ್ಕೆ ಮ್ಯನ್​ ವರ್ಸಸ್​ ವೈಲ್ಡ್​ ಕಾರ್ಯಕ್ರಮ ನಡೆಸಿಕೊಡುವ ವನ್ಯ ಜೀವಿ ಸಾಹಸಿ ನಿರ್ದೇಶಕ ಬೇರ್​ ಗ್ರೀಲ್ಸ್​ ಆಗಮಿಸಲಿದ್ದಾರೆ.
ಗುಂಡ್ಲುಪೇಟೆ ಹೆಲಿಪ್ಯಾಡ್​ಗೆ ಹೆಲಿಕಾಪ್ಟರ್​ ಮೂಲಕ ಬಂದು ಇಳಿಯುವ ಅವರು ಅಲ್ಲಿಂದ ವಾಹನದಲ್ಲಿ ಅರಣ್ಯಕ್ಕೆ ತೆರಳಲಿದ್ದಾರೆ. ಇಂದು ಮಧ್ಯಾಹ್ನ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಆಗಮಿಸಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
