ಡಿಸ್ಕವರಿ ಚಾನೆಲ್​ನ ಸಾಹಸಮಯ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ ಚಿತ್ರೀಕರಣಕ್ಕೆ ಸೂಪರ್ ಸ್ಟಾರ್, ತಲೈವಾ ರಜನಿಕಾಂತ್ ಅವರೇ ಬಂಡೀಪುರ ಆಯ್ಕೆ ಮಾಡಿದ್ದರು ಎಂಬ ವಿಷಯ ತಿಳಿದು ಬಂದಿದೆ.
ದೇಶದ ಪ್ರಥಮ ರಾಷ್ಟ್ರೀಯ ಉದ್ಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರಾಖಂಡ್​ನ ಜಿಮ್ ಕಾರ್ಬೆಟ್​ನಲ್ಲಿ ನಡೆದಿದ್ದ ‘ಮ್ಯಾನ್ ವರ್ಸಸ್ ವೈಲ್ಡ್’ ಚಿತ್ರೀಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಜಗತ್ತಿನಾದ್ಯಂತ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಅವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ಬಂದಾಗ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯದಲ್ಲಿ ಚಿತ್ರೀಕರಣ ನಡೆಸಲು ರಜನಿ ಸಲಹೆ ನೀಡಿದ್ದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದರು.
ಬಂಡೀಪುರದ ಮೇಲೆ ಒಲವು:ರಜನಿಕಾಂತ್​ಗೆ ಬಂಡೀಪುರ ಹೊಸ ಸ್ಥಳವೇನಲ್ಲ. ಈಗಾಗಲೇ ಅವರು ಸಿನಿಮಾವೊಂದರ ಚಿತ್ರೀಕರಣಕ್ಕೆ ಇಲ್ಲಿಗೆ ಆಗಮಿಸಿದ್ದರು. ಜತೆಗೆ ತಮಿಳುನಾಡು ಗಡಿಭಾಗಕ್ಕೆ ಬಂಡೀಪುರ ಹೊಂದಿಕೊಂಡಂತಿರುವ ಕಾರಣಕ್ಕೆ ಈ ಸ್ಥಳದ ಪರಿಚಯವನ್ನು ಚೆನ್ನಾಗಿಯೇ ಬಲ್ಲರು. ಹೀಗಾಗಿ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮ ನಡೆಸಲು ರಜನಿ ಮುಂದಿದ್ದ ಅನೇಕ ಅರಣ್ಯ ಪ್ರದೇಶಗಳಲ್ಲಿ ಮನಸ್ಸಿಗೆ ಹತ್ತಿರವಾಗಿರುವ ಬಂಡೀಪುರವೇ ಆಯ್ಕೆಯಾಯಿತು.
ಕರ್ತವ್ಯಕ್ಕೆ ಮೆಚ್ಚುಗೆ:ಚಿತ್ರೀಕರಣದಲ್ಲಿ ಭಾಗವಹಿಸುವ ಮೂಲಕ ಕೇವಲ ಅಡವಿಯೊಳಗೆ ಒಂದು ದಿನ ಅಲೆದಾಡಿದ ರಜನಿ ಕರ್ತವ್ಯದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಎದುರಿಸಬಹುದಾದ ಕಷ್ಟಗಳ ಕುರಿತು ಮಾತನಾಡಿದರು. ಚಿತ್ರೀಕರಣದ ವೇಳೆಯೂ ಸಿಬ್ಬಂದಿ ಶ್ರಮದ ಕುರಿತು ಪ್ರಸಂಸೆ ವ್ಯಕ್ತಪಡಿಸಿದರು. ಕಾಡಿನ ಸಂರಕ್ಷಣೆ ಸುಲಭದ ಮಾತಲ್ಲ. ಅದನ್ನು ಸಾಧ್ಯವಾಗಿಸುವಲ್ಲಿ ಅರಣ್ಯಾಧಿಕಾರಿಗಳ ಪಾತ್ರ ಬಹುಮುಖ್ಯ ಎಂದು ಹೇಳಿದರು ಎನ್ನಲಾಗಿದೆ.
ಸಂದೇಶ ಕೋರಿದ ಇಲಾಖೆ:ಅರಣ್ಯ ಸಂಪತ್ತಿನ ಉಳಿವಿನಲ್ಲಿ ಕೇವಲ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರವೇ ಮುಖ್ಯವಲ್ಲ ಎಂಬುದನ್ನು ಅರಿತಿರುವ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಬಾಲಚಂದ್ರ ಅವರು, ಸೂಪರ್ ಸ್ಟಾರ್ ರಜನಿಕಾಂತ್ ಅವರಲ್ಲಿ ಕಾಡಿನ ಸಂರಕ್ಷಣೆಗೆ ಸಾರ್ವಜನಿಕರೂ ಕೈ ಜೋಡಿಸಬೇಕೆಂದು ಸಂದೇಶ ನೀಡಬೇಕೆಂದು ಕೋರಿದ್ದಾರೆ. ಈ ಪ್ರಕಾರ ರಜನಿಕಾಂತ್ ಅವರು ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಜನರಿಗೆ ಕಾಡಿನ ರಕ್ಷಣೆಯ ಸಂದೇಶವನ್ನು ವಿಶೇಷವಾಗಿ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಕಲ್ಕೆರೆಯಲ್ಲಿ ಇಂದು ಶೂಟಿಂಗ್
ಗುರುವಾರ ಅಕ್ಷಯ್ ಮತ್ತು ಗ್ರಿಲ್ಸ್ ಬಂಡೀಪುರದ ಹೃದಯ ಭಾಗವಾದ ಕಲ್ಕೆರೆ ವಲಯದಲ್ಲಿ ಹಾಗೂ ನೆರೆಯ ವೈನಾಡಿನ ಅರಣ್ಯದಂಚಿನಲ್ಲಿ ಶೂಟಿಂಗ್ ನಡೆಸಲಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರ ರಜನಿಕಾಂತ್ ಮೂಲೆಹೊಳೆ ವಲಯದ ಚಮ್ಮನಹಳ್ಳ ಮತ್ತು ಹೆಬ್ಬಹಳ್ಳಿ ಬಳಿ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು.
ಚಿತ್ರೀಕರಣಕ್ಕೆ ಬಂದ ಅಕ್ಕಿ
‘ಮ್ಯಾನ್ ವರ್ಸಸ್ ವೈಲ್ಡ್’ಗಾಗಿ ಬಂಡೀಪುರದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಬುಧವಾರ ಬಾಲಿವುಡ್ ನಟ ಅಕ್ಷಯ್ಕುಮಾರ್ ಭಾಗಿಯಾಗುತ್ತಿದ್ದು, ಬುಧವಾರ ಸಂಜೆ ಇಲ್ಲಿನ ಖಾಸಗಿ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಿದರು. ಕಳೆದ ಎರಡು ದಿನಗಳ ಹಿಂದೆ ಬಂಡೀಪುರದಲ್ಲಿ ಬೇರ್​ಗ್ರಿಲ್ಸ್ ನೇತೃತ್ವದಲ್ಲಿ ಶೂಟಿಂಗ್ ಆರಂಭಗೊಂಡಿತು. ಜ.28ರಂದು ಸೂಪರ್​ಸ್ಟಾರ್ ರಜನಿಕಾಂತ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.
ಬೇಸಿಗೆ ಶುರುವಾಗುತ್ತಿರುವ ಸಂದರ್ಭದಲ್ಲಿ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡುವುದು ಸೂಕ್ತವಲ್ಲ ಎಂದು ಕೆಲ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆ ಅಕ್ಷಯ್ಕುಮಾರ್ ಶೂಟಿಂಗ್​ನಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂಬ ಚರ್ಚೆಗಳು ದಟ್ಟವಾಗಿ ಹಬ್ಬಿತ್ತು. ಆದರೆ, ಅಕ್ಷಯ್ಕುಮಾರ್ ಬಂಡೀಪುರಕ್ಕೆ ಬುಧವಾರ ಸಂಜೆ 4 ಗಂಟೆಗೆ ಆಗಮಿಸಿದರು. ನಂತರ ಬೇರ್​ಗ್ರಿಲ್ಸ್ ಜತೆ ಗುರುವಾರದ ಶೂಟಿಂಗ್ ಬಗ್ಗೆ ರ್ಚಚಿಸಿದರು. ಬೇರ್​ಗ್ರಿಲ್ಸ್ ಜ.29ರಂದು ಚಿತ್ರೀಕರಣ ನಡೆಯದ ಕಾರಣ ಬಂಡೀಪುರದಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿದ್ದರು.
ಮ್ಯಾನ್ ವರ್ಸಸ್ ವೈಲ್ಡ್ ಚಿತ್ರೀಕರಣದ ಸ್ಥಳಗಳ ಆಯ್ಕೆಯ ಚರ್ಚೆ ನಡೆದಾಗ ರಜನಿಕಾಂತ್ ಬಂಡೀಪುರ ಆರಿಸಿಕೊಂಡಿದ್ದಾರೆ. ವನ್ಯಜೀವಿಗಳ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯ. ಈ ಕುರಿತು ಜನರಲ್ಲಿ ಅರಣ್ಯದ ಉಳಿವಿನ ಸಂದೇಶ ನೀಡಿ ಎಂದು ಚಿತ್ರೀಕರಣದ ವೇಳೆಯಲ್ಲಿ ರಜನಿ ಅವರಲ್ಲಿ ಕೇಳಿದಾಗ ಖುಷಿಯಿಂದ ಒಪ್ಪಿಕೊಂಡರು.
| ಬಾಲಚಂದ್ರ ಬಂಡೀಪುರ ಹುಲಿ ಯೋಜನೆ ನಿರ್ದೇಶಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 14 =
Remember me
