ಬೆಂಗಳೂರು:ರೈಲು ಟಿಕೆಟ್​ಗಳಿಗೆ ನಕಲಿ ದಾಖಲೆ ನೀಡಿ ವಂಚನೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದ್ದು ಈ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ.
ಬಂಧಿತನ ಬಳಿ ಇದ್ದ ದಾಖಲೆಗಳು ಮತ್ತು ಸಂಪರ್ಕ ಮಾಹಿತಿ ಕಂಡು ಭಯೋತ್ಪಾದನೆ ಚಟುವಟಿಕೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಗುಲಾಮ ಮುಸ್ತಾಪ್ ಬಂಧಿತ ಆರೋಪಿ.
ರಾಜಗೋಪಾಲನಗರದ ಮಸೀದಿಯೊಂದರಲ್ಲಿ ಇದ್ದುಕೊಂಡು ಕೃತ್ಯ ನಡೆಸುತ್ತಿದ್ದ. ನಕಲಿ ಎಎನ್​ಎಂಎಸ್ ಸಾಫ್ಟ್‌ವೇರ್ ಡೆವಲಪ್ ಮಾಡಿಕೊಂಡಿದ್ದ ಆರೋಪಿ, ಆ ಮೂಲಕ ಐಆರ್​ಸಿಟಿಸಿ ವೆಬ್​ಸೈಟ್​ನಲ್ಲಿ ನಕಲಿ ಐಡಿ ಸೃಷ್ಟಿ ಮಾಡಿಕೊಂಡಿದ್ದ.
ಇ-ಟಿಕೆಟ್ ಬುಕ್ ಮಾಡಿಕೊಡುವ ನೆಪದಲ್ಲಿ ನಕಲಿ ಐಡಿ ಸೃಷ್ಟಿಸಿಕೊಂಡು, ರೈಲ್ವೆ ಇಲಾಖೆಯ ಕೆಲ ಮಾಹಿತಿ ಸಂಗ್ರಹಿಸಿದ್ದ. ಇದೇ ವೇಳೆ ಹಲವು ನಕಲಿ ದಾಖಲೆಯುಳ್ಳ ಟಿಕೆಟ್ ಮಾರಾಟ ಮಾಡಿದ್ದ ಬಗ್ಗೆ ಪತ್ತೆಯಾಗಿದೆ. 2018ರಿಂದಲೂ ಇಲ್ಲಿಯವರೆಗೂ ಕೃತ್ಯ ನಡೆಸಿದ್ದಾನೆ.
ಈ ಬಗ್ಗೆ ತನಿಖೆ ಕೈಗೊಂಡಿದ್ದ ರೈಲ್ವೆ ಪೊಲೀಸರು, ಆರೋಪಿಯನ್ನು ಜನವರಿ 8ರಂದು ಬಂಧಿಸಿದ್ದರು. ಬಳಿಕ ಆತನ ಬಳಿ ಇದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಗಳಲ್ಲಿ ಉಗ್ರ ಚಟುವಟಿಕೆಯ ಬಗ್ಗೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.(ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + five =
Remember me
