ಬೆಂಗಳೂರು:ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಐತಿಹಾಸಿಕ ದಿನ ಇಂದು(ಆ.5). ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದ ಸುಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಐತಿಹಾಸಿಕ ಕಾರ್ಯಕ್ರಮದ ನೆನಪಿನ ಸ್ಮರಣಿಕೆಯಾಗಿ ರಾಮನ ವಿಗ್ರಹ ನೀಡಿ ಗೌರವಿಸಲಾಯಿತು. ಈ ವಿಗ್ರಹ ಕೆತ್ತಿದ ಶಿಲ್ಪಿ ಕರ್ನಾಟಕದವರು ಎಂಬುದು ಮತ್ತೊಂದು ಹೆಮ್ಮೆ.
ಅಯೋಧ್ಯೆ ಹಬ್ಬದಲ್ಲಿ ಬೆಂಗಳೂರಿನ ಶಿಲ್ಪಕಲಾವಿದ ರಾಮಮೂರ್ತಿ ಅವರ ಕೈಚಳಕದಲ್ಲಿ ಮೂಡಿಬಂದ ಕೋದಂಡರಾಮ ವಿಗ್ರಹ ಗಮನ ಸೆಳೆಯಿತು. ‘ಕಳೆದ 42 ವರ್ಷಗಳಿಂದ ಶಿಲ್ಪಕಲೆಯಲ್ಲಿ ತೊಡಗಿಸಿಕೊಂಡಿರುವ ನನಗೆ ಇಂದು ಜನ್ಮ ಸಾರ್ಥಕವಾದ ಅನುಭವ ನೀಡಿದೆ’ ಎಂದು ಕೋದಂಡರಾಮನ ವಿಗ್ರಹದ ಶಿಲ್ಪಿ ಎಂ. ರಾಮಮೂರ್ತಿ ಸಂತಸ ಹಂಚಿಕೊಂಡರು.
ಇದನ್ನೂ ಓದಿರಿಅಯೋಧ್ಯೆಗೆ ಸೇರಬೇಕಿದ್ದ ಶ್ರೀರಾಮ, ಸೀತೆ, ಲಕ್ಷ್ಮಣರ ಪಂಚಲೋಹದ ವಿಗ್ರಹಗಳು ಬೆಳ್ತಂಗಡಿಯ ಕಣಿಯೂರಿನಲ್ಲಿ ಪ್ರತಿಷ್ಠಾಪನೆ
ಎಂ.ರಾಮಮೂರ್ತಿ ಅವರು ರಾಷ್ಟ್ರೀಯ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ಈಹಿಂದೆ ತಯಾರಿಸಿದ್ದ ಏಳೂವರೆ ಅಡಿ ಎತ್ತರದ ಕೋದಂಡರಾಮನ ವಿಗ್ರಹವೇ ಇದಕ್ಕೆಲ್ಲ ಮೂಲ. ಸ್ಪರ್ಧೆಯಲ್ಲಿ ವಿಗ್ರಹದ ಸೌಂದರ್ಯವನ್ನು ಕಂಡ ಅಯೋಧ್ಯಾ ಶೋಧ ಸಂಸ್ಥಾನದ ಪದಾಧಿಕಾರಿಗಳು ರಾಮಮೂರ್ತಿ ಅವರನ್ನು ಸಂಪರ್ಕಿಸಿ ಆ ವಿಗ್ರಹವನ್ನು ಖರೀದಿಸಿದರು. ನಂತರ ಅದೇ ಮಾದರಿಯ ಮೂರು ಅಡಿ ಎತ್ತರದ ಮೂರು ಮೂರ್ತಿಗಳನ್ನು ತಯಾರಿಸಿಕೊಡಲಾಗಿದೆ.
ತೇಗದ ಮರದಿಂದ ನಿರ್ಮಾಣವಾದ ವಿಗ್ರಹ 6-7 ಕೆ.ಜಿ. ತೂಕವಿದೆ. ಲವ- ಕುಶ ವಿಗ್ರಹವನ್ನೂ ತಯಾರಿಸಿಕೊಡಲಾಗಿದೆ. ಸದ್ಯ ಪ್ರಧಾನಿಯವರಿಗೆ ನೀಡಿದ ವಿಗ್ರಹವನ್ನು ಆರು ತಿಂಗಳ ಸಮಯದಲ್ಲಿ ತಯಾರಿಸಲಾಗಿದೆ. ಸಾಂಪ್ರದಾಯಿಕ ಶಿಲ್ಪದ ಜತೆಗೆ ಕರ್ನಾಟಕದ ಶಿಲ್ಪಕಲೆಯ ವೈಭವದ ಅರಿವು ದೇಶಕ್ಕೆ ಅರಿವಿಗೆ ಬಂದಿದೆ. ಜನ್ಮ ಸಾರ್ಥಕವಾದ ಅನುಭವವಾಗುತ್ತಿದೆ ಎಂದು ರಾಮಮೂರ್ತಿ ತಿಳಿಸಿದರು.(ಇನ್ನಷ್ಟು ಮಾಹಿತಿ ನಿರೀಕ್ಷಿಸಿ)
https://www.facebook.com/VVani4U/videos/1145720165797686/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
