ಬೆಂಗಳೂರು:ಭಾರತೀಯ ಕೃಷಿ ವಲಯ ಕಡಿಮೆ ಮೂಲಸೌಕರ್ಯ ಮತ್ತು ಹಳತಾದ ಕೃಷಿ ತಂತ್ರಜ್ಞಾನ, ಇಂತಹ ಹಲವಾರು ಸಮಸ್ಯೆಗಳಿಂದ ಪರದಾಡುತ್ತಿದೆ. ರೈತರು ಬಳಸುವ ಟ್ರ್ಯಾಕ್ಟರ್‌ಗಳು ಮತ್ತು ಇತರ ವಾಹನಗಳು ಡೀಸೆಲ್ ಇಂಜಿನ್‌ಗಳ ಕಾರಣದಿಂದಾಗಿ ಹೆಚ್ಚು ಖರ್ಚಿಗೆ ಕಾರಣವಾಗಿವೆ. ಇವು ಹೆಚ್ಚು ವಾಯು ಮಾಲಿನ್ಯವನ್ನು ಮಾಡುವುದರ ಜೊತೆಗೆ ಕೆಲಸದ ಆಳಿಗೂ ಕೈತುಂಬ ಕೆಲಸ ಕೊಡುತ್ತವೆ. ಟ್ರಾಕ್ಟರ್​ನ ಕಷ್ಟದಿಂದ ಪಾರಾಗಬೇಕು ಎಂದಾದರೆ ಕೈಯಾಳನ್ನು ಅವಲಂಬಿಸಬೇಕು. ಆದರೆ ಕೃಷಿ ಕೆಲಸಕ್ಕೆ ಕಾರ್ಮಿಕರೇ ಸಿಗದಿರುವುದು ಇನ್ನೊಂದು ದೊಡ್ಡ ಸಮಸ್ಯೆ.
ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಬೆಂಗಳೂರು ಮೂಲದಬುಲ್ವರ್ಕ್ ಮೊಬಿಲಿಟಿಹೆಸರಿನ ಸ್ಟಾರ್ಟಪ್​​, ಕೃಷಿ ವಲಯಕ್ಕೆ ಸ್ಮಾರ್ಟ್ ಮತ್ತು ಆಟೊಮ್ಯಾಟಿಕ್​ ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ಅಭಿವೃದ್ಧಿಪಡಿಸುತ್ತಿದೆ. ಈ ಸ್ಟಾರ್ಟಪ್ ಅನ್ನು ಮಹೇಶ್ ಜಿ ಶೆಟ್ಟಿ, ಹೇಮಂತ್ ಕುಮಾರ್, ವಿನಯ್ ರಘುರಾಮ್ ಮತ್ತು ಡಾ ಶ್ರೀಹರ್ಷ ಎಸ್ ಸೇರಿ 2021 ರಲ್ಲಿ ಸ್ಥಾಪಿಸಿದ್ದರು.
“ಎಲೆಕ್ಟ್ರಿಕ್ ವಾಹನಗಳ ದೊಡ್ಡ ಪರಿಣಾಮ ಏನೆಂದರೆ ಅವುಗಳು ಬಹಳ ಅಗ್ಗ. ಇವುಗಳನ್ನು ಬಳಸುವುದರಿಂದ ಪ್ರತಿ ಗಂಟೆಗೆ ಕೇವಲ 50 ರೂ. ಖರ್ಚಲ್ಲಿ ಕೃಷಿ ಕೆಲಸ ಮಾಡಬಹುದು. ಇದನ್ನು ಗಂಟೆಗೆ ಸುಮಾರು 3-4 ಲೀಟರ್ ಡೀಸೆಲ್ ಸುಡುವ ಟ್ರಾಕ್ಟರ್ ಜೊತೆಗೆ ಕಂಪೇರ್​ ಮಾಡಿ. ರೈತರು ಡೀಸೆಲ್ ಗೆ ಪ್ರತಿ ಗಂಟೆಗೆ ಸುಮಾರು 300-400 ರೂ. ಕರ್ಚು ಮಾಡದ ಹಾಗೆ ಆಗುತ್ತೆ. ನಮ್ಮ ಯಂತ್ರಗಳ ಮೂಲಕ ನಾವು ಪ್ರತಿ ಗಂಟೆಗೆ ಈ ವೆಚ್ಚವನ್ನು 50 ರೂ.ಗೆ ಇಳಿಸಬಹುದು” ಎಂದು ಹೇಮಂತ್ ತಮ್ಮ ವಾಹನದ ಬಗ್ಗೆ ಹೇಳುತ್ತಾರೆ.
ಬುಲ್‌ವರ್ಕ್ ಮೊಬಿಲಿಟಿ ಸಂಸ್ಥೆ ಒಟ್ಟು ಎರಡು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಬುಲ್‌ವರ್ಕ್ ವಾರಿಯರ್ ಮತ್ತು ಅನ್​ಮ್ಯಾನ್ಡ್​ ಗ್ರೌಂಡ್ ವೆಹಿಕಲ್ (UGV). ಬುಲ್‌ವರ್ಕ್ ವಾರಿಯರ್ ದೇಶದ ಮೊದಲ ಸಂಪೂರ್ಣ-ಎಲೆಕ್ಟ್ರಿಕ್ ಹೈ-ಕ್ಲಿಯರೆನ್ಸ್ ಬೂಮ್ ಸ್ಪ್ರೇಯರ್‌ಗಳಲ್ಲಿ ಒಂದಾಗಿದೆ. ಇದು ನಾಲ್ಕು ಸ್ವತಂತ್ರ ಡ್ರೈವ್ ಸಿಸ್ಟಮ್‌ಗಳನ್ನು ಹೊಂದಿದ್ದು ಅವು ನೇರವಾಗಿ ಚಕ್ರಗಳಿಗೆ ಶಕ್ತಿಯನ್ನು ಒದಗಿಸುತ್ತದೆ. ಇವು 12-ಮೀಟರ್ ತನಕ ಮದ್ದನ್ನು ಸಿಂಪಡಿಸುವ ಸಾಮರ್ಥ್ಯ ಹೊಂದಿದ್ದು ಗಂಟೆಗೆ ನಾಲ್ಕರಿಂದ ಐದು ಎಕರೆಗಳಿಗೆ ಸಿಂಪಡಣೆ ಮಾಡುತ್ತವೆ.
‘ನಮ್ಮ ಯಂತ್ರಗಳನ್ನು ನಿರ್ವಹಿಸಲು ಕಡಿಮೆ ಖರ್ಚು ಸಾಕು. ಈ ವಾಹನವನ್ನು ರೈತರು ನಿತ್ಯವೂ ಬಳಸಬಹುದು. ಬುಲ್‌ವರ್ಕ್ ವಾರಿಯರ್ ದಿನಕ್ಕೆ 25 ಎಕರೆಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ. ಆದರೆ ಪ್ರಸ್ತುತ ಈ ವಾಹನವನ್ನು ಮಾನವನೇ ಚಲಾಯಿಸಬೇಕು. ಆಟೊಮ್ಯಾಟಿಕ್​ ಟ್ರಾಕ್ಟರ್​ ಸದ್ಯಕ್ಕೆ ಮಾರಾಟಕ್ಕೆ ಲಭ್ಯವಿಲ್ಲ’ ಎಂದು ಮಹೇಶ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 8 =
Remember me
