ಧಾರವಾಡ:ಧಾರವಾಡ-ಬೆಂಗಳೂರು ನಡುವಣ ವಂದೇ ಭಾರತ್ ರೈಲು ಪ್ರಯಾಣಕ್ಕೆ ಚಾಲನೆ ಹಿನ್ನೆಲೆ, ಕಲಾವಿದರೊಬ್ಬರು ರೈಲಿನ ಕಲಾಕೃತಿಯೊಂದನ್ನು ತಯಾರಿಸಿದ್ದಾರೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ರೈಲಿಗೆ ಹಸಿರು ನಿಶಾನೆ ತೋರಿಸುತ್ತಿರುವ ಕಲಾಕೃತಿ ಗಮನಸೆಳೆಯುತ್ತಿದೆ.
ಧಾರವಾಡ ಕಲಾವಿದ ಮಂಜುನಾಥ ಹಿರೇಮಠ ಪುಟ್ಟ ವಂದೇ ಭಾರತ್ ರೈಲಿನ ಮಾದರಿಯೊಂದನ್ನು ಸಿದ್ಧಪಡಿಸಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಪುಟ್ಟ ಪ್ರತಿಮೆ ಕೂಡ ತಯಾರಿಸಿದ್ದಾರೆ. ರೈಲಿನ ಕಲಾಕೃತಿ ‘ಪುಟಾಣಿ ವಂದೇ ಭಾರತ್​ ರೈಲು’ ಎಂದು ಕರೆಸಿಕೊಳ್ಳುತ್ತಿದೆ.
ಪರಿಸರ ಸ್ನೇಹಿ ಮೂರ್ತಿ ಕಲಾವಿದ ಮಂಜುನಾಥ ಹಿರೇಮಠ ಥರ್ಮಾಕೋಲ್, ಫ್ಲೈವುಡ್ ತುಂಡು ಸೇರಿ ವಿವಿಧ ತ್ಯಾಜ್ಯಗಳನ್ನು ಬಳಸಿ, ಮೂರು ಇಂಚು ಎತ್ತರ, ಎರಡೂವರೆ‌ ಅಡಿ ಉದ್ದದ ರೈಲಿನ ಕಲಾಕೃತಿ ರಚನೆ ಮಾಡಿದ್ದಾರೆ. ಸದ್ಯ ಕಲಾಕೃತಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eighteen =
Remember me
