
ಬೆಂಗಳೂರು:ಬೆಂಗಳೂರು ಹಬ್ಬದಂತಹ ಆಚರಣೆಗಳ ಮೂಲಕ ಬೆಂಗಳೂರಿನ ಇತಿಹಾಸ, ಕಲೆ, ಸಂಸ್ಕೃತಿ , ಪರಂಪರೆಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಗೃಹಕಚೇರಿ ಕೃಷ್ಣಾದಲ್ಲಿ ಪ್ರಶಾಂತ್ ಪ್ರಕಾಶ್ ಹಾಗೂ ಮಾಲಿನಿ ಗೋಯಲ್ ಅವರು ಬರೆದಿರುವ ಖ್ಞಿಚಿಟ್ಡಜ್ಞಿಜ ಆಛ್ಞಿಜಚ್ಝ್ಠ್ಟ್ಠ, ಛಿ ಇಜಿಠಿ ಟ್ಛ ಘೆಛಿಡಿ ಆಛಿಜಜ್ಞ್ಞಿಜ್ಞಿಜ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದರು.ಖ್ಞಿಚಿಟ್ಡಜ್ಞಿಜ ಆಛ್ಞಿಜಚ್ಝ್ಠ್ಟ್ಠ, ಛಿ ಇಜಿಠಿ ಟ್ಛ ಘೆಛಿಡಿ ಆಛಿಜಜ್ಞ್ಞಿಜ್ಞಿಜ ಪುಸ್ತಕವನ್ನು ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿಯೂ ಹೊರತಂದಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು. ಪ್ರಶಾಂತ್ ಪ್ರಕಾಶ್ ಹಾಗೂ ಮಾಲಿನಿ ಗೋಯಲ್ ಅವರು ಬೆಂಗಳೂರು ಹಬ್ಬ ಆಯೋಜಿಸುತ್ತಿರುವುದು ಸಂತೋಷ. ಬೆಂಗಳೂರು ಹಬ್ಬಕ್ಕೆ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಾಗುವುದು ಎಂದರು.ಐತಿಹಾಸಿಕ ಮಹತ್ವವಿರುವ ಬೆಂಗಳೂರು ನಗರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಯೋಜನಾಬದ್ಧವಾಗಿ ಬೆಳೆಸಬೇಕಾಗಿತ್ತು. ನಗರದಲ್ಲಿ ಸುಮಾರು ಒಂದೂವರೆ ಕೋಟಿ ಜನರಿದ್ದಾರೆ. ಇಲ್ಲಿನ ಸಂಸ್ಕೃತಿ, ಕಲೆ, ಜನಜೀವನ, ನಾಗರೀಕತೆಗಳನ್ನು ಉಳಿಸಿಕೊಂಡು ಬರಲಾಗಿದೆ. ದೇಶ ವಿದೇಶಗಳಿಂದ ಉದ್ಯೋಗವರಿಸಿ ಜನ ನಗರದಲ್ಲಿ ನೆಲೆಸಿದ್ದರೂ ಕೂಡ ಎಲ್ಲರೂ ಕನ್ನಡಿಗರಾಗಿ ಬಾಳಬೇಕು. ನಾವೆಲ್ಲಾ ಕನ್ನಡಿಗರಾಗಿ , ಪರಸ್ಪರ ಪ್ರೀತಿ ವಿಶ್ವಾಸಗಳೊಂದಿಗೆ ಸೌಹಾರ್ದತೆಯಿಂದ ಬಾಳಬೇಕೆಂದರು.ಬೆಂಗಳೂರಿಲ್ಲಿ ಬಹಳ ಹಿಂದಿನಿಂದಲೂ ಕಡ್ಲೆಕಾಯಿ ಪರಿಷೆಯಂತಹ ಸಾಂಪ್ರಾದಾಯಿಕ ಆಚರಣೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಈ ಜಾತ್ರೆಯಲ್ಲಿ ಬೆಂಗಳೂರಿಗರು ಬಹಳ ಸಂಭ್ರಮದಿಂದ ಭಾಗವಹಿಸುತ್ತಾರೆ. ಅಂತೆಯೇ ತಾವು ಆಯೋಜಿಸುವ ಬೆಂಗಳೂರು ಹಬ್ಬದಲ್ಲಿ, ನಗರದ ಜನರೆಲ್ಲ ಸಂಭ್ರಮದಿಂದ ಭಾಗವಹಿಸುವಹಿಸಬೇಕು ಎಂದರು.ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮತ್ತಿತರರುಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 5 =
Remember me
