|ರಮೇಶ್ ಮೈಸೂರುಬೆಂಗಳೂರು
ಉತ್ತರ ಕರ್ನಾಟಕದ ವಾಣಿಜ್ಯ ರಾಜಧಾನಿ ಎನಿಸಿಕೊಂಡಿರುವ ಹುಬ್ಬಳ್ಳಿ ಹಾಗೂ ಸುತ್ತಲಿನ ರೈಲು ಪ್ರಯಾಣಿಕರಿಗೆ ಮುಂದಿನ ಮಾರ್ಚ್​ಗೆ ಸಿಹಿ ಸುದ್ದಿ ಕಾದಿದೆ. ಹುಬ್ಬಳ್ಳಿ ಹಾಗೂ ರಾಜಧಾನಿ ಬೆಂಗಳೂರು ನಗರಗಳ ನಡುವೆ ರೈಲು ಸಂಚಾರವಿನ್ನು ಸರಾಗವಾಗಲಿದೆ. ಸಮಯ ಉಳಿತಾಯವೂ ಸಾಧ್ಯವಾಗಲಿದೆ. ಏಕೆಂದರೆ, ಜೋಡಿ ಹಳಿ ನಿರ್ಮಾಣ (ಟ್ರಾ್ಯಕ್ ಡಬ್ಲಿಂಗ್) ಹಾಗೂ ರೈಲು ಮಾರ್ಗದ ವಿದ್ಯುದೀಕರಣ ಕಾರ್ಯವನ್ನು 2023ರ ಮಾರ್ಚ್​ಗೆ ಪೂರ್ಣಗೊಳಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ವಿಭಾಗ ಮಾಹಿತಿ ನೀಡಿದೆ. ಈ ಮೂಲಕ ಪ್ರಯಾಣ ಅವಧಿ 45 ನಿಮಿಷಗಳಿಂದ ಒಂದು ಗಂಟೆಯವರೆಗೆ ಕಡಿಮೆಯಾಗಲಿದೆ. ಜತೆಗೆ, ಜೋಡಿ ಹಳಿಗಳಿಂದಾಗಿ ಈಗಿರುವ ಪ್ರಯಾಣಿಕ ಹಾಗೂ ಸರಕು ಸಾಗಣೆ ರೈಲುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಅವಕಾಶವಾಗಲಿದೆ.
ಹುಬ್ಬಳ್ಳಿ- ಬೆಂಗಳೂರು ನಡುವಿನ ರೈಲು ಮಾರ್ಗ 489 ಕಿ.ಮೀ. ಆಗಿದೆ. ಈ ಪೈಕಿ ಬಹುತೇಕ ಜೋಡಿ ಹಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕೇವಲ 45 ಕಿ.ಮೀ ಬಾಕಿ ಉಳಿದಿದೆ. ವಿದ್ಯುದೀಕರಣ ಕಾರ್ಯವೂ ಭರದಿಂದ ಸಾಗಿದೆ. ಎರಡೂ ಕಾರ್ಯಗಳನ್ನು 2023ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ಕಾಮಗಾರಿ?:ಪ್ರಸ್ತುತ ದಕ್ಷಿಣ ಹುಬ್ಬಳ್ಳಿ ಯಿಂದ ಸಂಶಿವರೆಗಿನ ಮಾರ್ಗ, ಹಾವೇರಿ ಹಾಗೂ ದೇವರಗುಡ್ಡವರೆಗಿನ ಮಾರ್ಗದಲ್ಲಿ ಜೋಡಿ ಹಳಿ ಕಾಮಗಾರಿ ನಡೆಯುತ್ತಿದೆ. ಇದನ್ನು ಇದೇ ಡಿಸೆಂಬರ್ ಒಳಗೆ ಪೂರ್ಣಗೊಳಿಸಲಾಗು ತ್ತಿದೆ. ಕೇವಲ 45 ಕಿಮೀ ಕಾಮಗಾರಿಯಷ್ಟೇ ಉಳಿದಿದೆ. ಇನ್ನು ವಿದ್ಯುದೀಕರಣ ವಿಚಾರಕ್ಕೆ ಬರುವುದಾದಲ್ಲಿ, ಬೆಂಗಳೂರಿನಿಂದ ತುಮಕೂರು ವರೆಗಿನ ಕಾರ್ಯ ಮುಗಿದಿದೆ. ಇಲ್ಲಿಂದ ಚಿಕ್ಕಜಾಜೂರುವರೆಗಿನ ಕೆಲಸ ಜಾರಿಯಲ್ಲಿದೆ. ಚಿಕ್ಕಜಾಜೂರಿನಿಂದ ಹೊಸದುರ್ಗದವರೆಗಿನ ಮಾರ್ಗವನ್ನು ವಿದ್ಯುದೀಕರಣ ಮಾಡಲಾಗಿದೆ. ನಂತರ ಹುಬ್ಬಳ್ಳಿವರೆಗೆ ವಿದ್ಯುದೀಕರಣ ಕಾಮಗಾರಿ ಚಾಲ್ತಿಯಲ್ಲಿದೆ. ಡಿಸೆಂಬರ್ ನಂತರ ಮುಂದಿನ 2-3 ತಿಂಗಳಲ್ಲಿ ಮುಗಿಸುವ ಗುರಿ ನೈಋತ್ಯ ರೈಲ್ವೆಯದ್ದಾಗಿದೆ. ಒಟ್ಟಾರೆ 370 ಕಿ.ಮೀ. ಮಾರ್ಗ ವಿದ್ಯುದೀಕರಣವಾಗಬೇಕಿದ್ದು, ಮುಂದಿನ ಮಾರ್ಚ್​ನೊಳಗೆ ಪೂರ್ಣಗೊಳಿಸಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸಜ್ಜಾಗಿದೆ.
3,407 ಕೋಟಿ ರೂ. ವೆಚ್ಚ :ಈ ಮಾರ್ಗದ ಜೋಡಿ ಹಳಿ ಕಾಮಗಾರಿ ಕಳೆದೊಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ನಡೆಯುತ್ತಿದೆ. ಪ್ರಮುಖ ಭಾಗವಾಗಿದ್ದ ತುಮಕೂರು- ಅರಸೀಕೆರೆ ಜೋಡಿ ಹಳಿ ಕೆಲಸ ಈ ವರ್ಷ ಮುಗಿದಿದೆ. ಹೀಗಾಗಿ, ಚಿಕ್ಕಜಾಜೂರುವರೆಗೆ ಜೋಡಿ ಹಳಿ ನಿರ್ವಣವಾಗಿದೆ. ಚಿಕ್ಕಜಾಜೂರಿನಿಂದ ಹುಬ್ಬಳ್ಳಿ ವರೆಗಿನ 190 ಕಿ.ಮೀ. ಮಾರ್ಗದಲ್ಲಿ ಹುಬ್ಬಳ್ಳಿ ದಕ್ಷಿಣ- ಸಂಶಿ ಹಾಗೂ ಹಾವೇರಿ- ದೇವರಗುಡ್ಡ ನಡುವಿನ ಕಾಮಗಾರಿ ಇದೇ ವರ್ಷದ ಡಿಸೆಂಬರ್​ಗೆ ಅಂತ್ಯಗೊಳ್ಳಲಿದೆ. ಒಟ್ಟು 489 ಕಿ.ಮೀ. ಮಾರ್ಗದ ಜೋಡಿ ಹಳಿ ನಿರ್ವಣಕ್ಕೆ ಒಟ್ಟಾರೆ 3,407 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಜತೆಗೆ, ಸಿಗ್ನಲಿಂಗ್ ವ್ಯವಸ್ಥೆ ಬಲಪಡಿಸಲಾಗುತ್ತಿದೆ.
ಜೋಡಿ ಹಳಿ ನಿರ್ವಣದಿಂದ ಹಳಿಗಳ ಸಾಮರ್ಥ್ಯವು ಹೆಚ್ಚಾಗಲಿದೆ. ಅಲ್ಲದೆ, ತಿರುವು ಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತಿರುವ ಕಾರಣ ಹೆಚ್ಚಿನ ವೇಗದಲ್ಲಿ ರೈಲುಗಳ ಸಂಚಾರ ಸಾಧ್ಯವಾಗಲಿದೆ. ಈ ಮೂಲಕ ಪ್ರಯಾಣ ಅವಧಿ ಕಡಿಮೆಯಾಗಲಿದೆ. ಸದ್ಯ ಹುಬ್ಬಳ್ಳಿ- ಬೆಂಗಳೂರು ನಡುವೆ ಒಟ್ಟು 24 ರೈಲುಗಳು ಸಂಚರಿಸುತ್ತಿದ್ದು, ಈ ಪೈಕಿ 9 ರೈಲುಗಳು ದೈನಂದಿನ ರೈಲುಗಳಾಗಿವೆ. ಎಕ್ಸ್​ಪ್ರೆಸ್ ರೈಲುಗಳ ಪ್ರಯಾಣಕ್ಕೂ ಕನಿಷ್ಠ 7 ತಾಸು ಬೇಕಾಗುತ್ತಿದೆ. ಹೆಚ್ಚು ನಿಲುಗಡೆಯಿರುವ ರೈಲುಗಳು ಹಾಗೂ ವಿಳಂಬದ ಸಂದರ್ಭದಲ್ಲಿ ಈ ಅವಧಿ ಎಂಟು ಗಂಟೆಯನ್ನೂ ಮೀರುತ್ತಿದೆ. ಜೋಡಿ ಹಳಿ, ವಿದ್ಯುದೀಕರಣ ಪೂರ್ಣವಾದರೆ 6 ತಾಸಿಗಿಂತಲೂ ಕಡಿಮೆ ಅವಧಿಯಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ತಲುಪಬಹುದು.
ಹೈಸ್ಪೀಡ್ ರೈಲು ಪ್ರಸ್ತಾವನೆಯಿಲ್ಲ:ಹುಬ್ಬಳ್ಳಿ- ಬೆಂಗಳೂರು ನಡುವೆ ಯಾವುದೇ ಹೈಸ್ಪೀಡ್ ರೈಲು ಯೋಜನೆ ಪ್ರಸ್ತಾವನೆಯಿಲ್ಲ. ಪ್ರಸ್ತುತ ಮೈಸೂರು- ಚೆನ್ನೈ ನಡುವೆ ಈ ರೈಲು ಯೋಜನೆಯ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈಗ ನಡೆಯುತ್ತಿರುವ ಜೋಡಿ ಹಳಿ, ವಿದ್ಯುದೀಕರಣಕ್ಕೆ ಹೆಚ್ಚಿನ ವೇಗ ನೀಡಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಸ್ಪಷ್ಟಪಡಿಸಿದೆ. ಜೋಡಿ ಹಳಿ ಕಾರ್ಯ ಡಿಸೆಂಬರ್​ನಲ್ಲಿ ಪೂರ್ಣವಾಗಲಿದೆ. ನಂತರದ 2-3 ತಿಂಗಳಲ್ಲಿ ವಿದ್ಯುದ್ದೀಕರಣವನ್ನು ಮಾಡಲಾಗುತ್ತದೆ. ಎರಡೂ ಕಾಮಗಾರಿಗಳು ಭರದಿಂದ ಸಾಗಿವೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರಕುಸಾಗಣೆಯೂ ಹೆಚ್ಚಾಗಲಿದೆ.
ಲಂಡನ್​ನಲ್ಲಿ ಅದ್ಧೂರಿಯಾಗಿ ನಡೆದ ಬಸವೇಶ್ವರ ಜಯಂತಿ- ಅಂಬೇಡ್ಕರ್​ ಪ್ರತಿಮೆಗೆ ಪುಷ್ಪ ನಮನ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
