ಬೆಂಗಳೂರು:ರಾಜಧಾನಿಯ ಹಲವೆಡೆ ಸತತ 2ನೇ ದಿನವೂ ಮಳೆ ಮುಂದುವರಿದಿದೆ.ಶುಕ್ರವಾರ ನಾಯಂಡಹಳ್ಳಿ, ಕೆಂಗೇರಿ, ಹಂಪೆನಗರ, ರಾಜರಾಜೇಶ್ವರಿನಗರ, ಕೊಡಿಗೆಹಳ್ಳಿ, ಕಡಬಗೆರೆ, ಚಂದಾಪುರ,ಹಂಪೆನಗರ, ವಿದ್ಯಾಪಿಠ, ಬೊಮ್ಮನಹಳ್ಳಿ, ಮಾರುತಿಮಂದಿರ ಸೇರಿ ನಗರದ ವಿವಿಧೆಡೆ ಬಿರುಸಾಗಿ ಮಳೆ ಬಿದ್ದಿದೆ ಎಂದು ವರುಣ ಮಿತ್ರ ಮಾಹಿತಿ ನೀಡಿದೆ.
ಸರಾಗವಾಗಿ ನೀರು ಹರಿಯದ ಪರಿಣಾಮ ರಸ್ತೆಯಲ್ಲೇ ನೀರು ನಿಂತಿತ್ತು.ಇದರಿಂದಾಗಿ ವಾಹನ ಸವಾರರಿಗೆ ಅಡಚಣೆಯಾಯಿತು. ಮಳೆಯಿಂದಾಗಿ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು. ವಾಹನ ದಟ್ಟಣೆ ಉಂಟಾಯಿತು. ಕೆಲವರು ಮಳೆ ರಕ್ಷಣೆಗಾಗಿ ಬಸ್​ ನಿಲ್ದಾಣದಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಕೆಲ ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಇದ್ದರೂ ಮಳೆ ದರ್ಶನವಾಗಲಿಲ್ಲ. ಮಳೆ ಬೀಳುತ್ತಿರುವ ದೃಶ್ಯವನ್ನು ಕೆಲವರು ಸೆರೆ ಹಿಡಿದು ತಮ್ಮ ವಾಟ್ಸಾಪ್​ ಸ್ಟೇಟಸ್​ನಲ್ಲಿ ಹಾಕಿಕೊಂಡರು. ನಗರದಲ್ಲಿ ಸುರಿಯುತ್ತಿರುವ ಮಳೆ ಮೇ 8ರಿಂದ ಮೇ 10ರವರೆಗೆ ಬಿರುಸಾಗಿ ಸುರಿಯಲಿದೆ.ಮೇ 4ರಂದು ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾದರೆ ಮೇ 5ರಿಂದ ಮೇ 6ರವರೆಗೆ ಒಣಹವೆ ಇರಲಿದೆ. ನಂತರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ.
ರಾಜ್ಯದ ಕೆಲವೆಡೆ ಆಲಿಕಲ್ಲು ಮಳೆ:8ರಿಂದ ದಕ್ಷಿಣ ಕರ್ನಾಟಕ ಭಾಗದಲ್ಲಿ ಬಿರುಸು
40ರ ಗಡಿ ದಾಟಿದ ಉಷ್ಣಾಂಶಬೆಂಗಳೂರಿನಲ್ಲಿ ಸತತ 3ನೇ ದಿನವೂ ಉಷ್ಣಾಂಶ 40ರ ಗಡಿ ದಾಟಿದೆ. ಮೇ 1ರಂದು 41.3, ಮೇ 2ರಂದು 41.1, ಮೇ 3ರಂದು 40.9 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ಸತತ ಎರಡು ದಿನವೂ ನಗರದ ಕೆಲವೆಡೆ ಮಳೆ ಬಿದ್ದರೂ ಬಿಸಿಲಿನ ಪ್ರಖರತೆ ಹೆಚ್ಚಿದೆ. ವಾಡಿಕೆಯಂತೆ 34 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಆದರೆ, ವಾಡಿಕೆಗಿಂತ 6.6 ಡಿ.ಸೆ.ಹೆಚ್ಚು ತಾಪಮಾನ ದಾಖಲಾಗಿದೆ. ಮಳೆ ಸುರಿದರೂ ಹಾಗೂ ಮೋಡ ಕವಿದ ವಾತಾವರಣ ಇದ್ದರೂ ಉಷ್ಣಾಂಶ ಇಳಿಮುಖವಾಗಿಲ್ಲ. ಬಿಸಿಲಿನ ಪ್ರಖರತೆ ಹೆಚ್ಚಾಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + six =
Remember me
