ಬೆಂಗಳೂರು:ರಾಜಧಾನಿಯಲ್ಲಿ ತಡರಾತ್ರಿ ನಂತರವೂ ಹೋಟೆಲ್​ಗಳನ್ನು ತೆರೆಯಲು, ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅವಕಾಶ ನೀಡಲಾಗಿರುವುದರಿಂದ ಬೆಂಗಳೂರು ‘ಸಿಟಿ ನೆವರ್ ಸ್ಲೀಪ್ಸ್’ ಎಂಬ ಅಭಿದಾನಕ್ಕೂ ಪಾತ್ರವಾಗಿದೆ. ಆದರೆ, ಉಗ್ರರ ಪಾಲಿಗೆ ‘ಸ್ಲೀಪರ್ ಸೆಲ್’ ಆಗಿ ಮಾರ್ಪಡುತ್ತಿರುವುದು ಕಳವಳಕಾರಿ ವಿಚಾರ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಶಂಕಿತ ಉಗ್ರ ಹಾಗೂ ಅಲ್​ಖೈದಾ ಶಂಕಿತ ಉಗ್ರನ ಬಂಧನದ ಬೆನ್ನಲ್ಲೇ ಭಾನುವಾರ ಸಂಜೆ ಮತ್ತೊಬ್ಬ ಅಲ್​ಖೈದಾ ಸಂಘಟನೆಯ ಶಂಕಿತ ಉಗ್ರನನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಈತನ ಸಂಪರ್ಕದಲ್ಲಿದ್ದ ಇನ್ನೋರ್ವನನ್ನೂ ವಶಕ್ಕೆ ಪಡೆದಿದ್ದಾರೆ.
ಅಸ್ಸಾಂ ಮೂಲದ ಅಖ್ತರ್ ಹುಸೇನ್ ಬಂಧಿತ. ಈತನ ಸಂಪರ್ಕದಲ್ಲಿದ್ದ ತಮಿಳುನಾಡಿನ ಸೇಲಮ್ಲ್ಲಿ ಜುಬೇರ್ ಎಂಬಾತನನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಾಗುತ್ತಿದೆ. ಸೋಮವಾರ ಎನ್​ಐಎ ವಿಶೇಷ ಕೋರ್ಟ್​ಗೆ ಬಂಧಿತ ಅಖ್ತರ್ ಹುಸೇನ್​ನನ್ನು ಹಾಜರುಪಡಿಸಿದ ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ಜುಬೇರ್​ನನ್ನು ಕೋರ್ಟ್​ಗೆ ಹಾಜರುಪಡಿಸುವ ಸಾಧ್ಯತೆ ಇದೆ.
ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ಮತ್ತು ಮೂಲಭೂತವಾದಿಯಾಗಿ ಕೆಲಸ ಮಾಡುತ್ತಿದ್ದ 24 ವರ್ಷದ ಅಖ್ತರ್ ಹುಸೇನ್ ಬಗ್ಗೆ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳಿಂದ ಖಚಿತ ಮಾಹಿತಿ ಲಭ್ಯವಾಗಿತ್ತು. ಸಿಸಿಬಿ ಡಿಸಿಪಿ ಡಾ.ಎಸ್.ಡಿ. ಶರಣಪ್ಪ ನೇತೃತ್ವದ ತಂಡವು ಭಾನುವಾರ ರಾತ್ರೋರಾತ್ರಿ ತಿಲಕನಗರದಲ್ಲಿ ಶಂಕಿತ ಉಗ್ರನ ಅಡಗುತಾಣದ ಮೇಲೆ ದಾಳಿ ನಡೆಸಿ ಬಂಧಿಸಿದೆ ಎಂದು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ತಿಲಕನಗರದ ಬಿಟಿಎಂ ಲೇಔಟ್ ಕಟ್ಟಡದ 3ನೇ ಮಹಡಿಯಲ್ಲಿ ಬಾಡಿಗೆ ಮನೆಯಲ್ಲಿ ಶಂಕಿತ ಅಖ್ತರ್ ಹಲವು ದಿನಗಳಿಂದ ವಾಸವಾಗಿದ್ದ. ಅಖ್ತರ್ ಹುಸೇನ್ ಮತ್ತು ಆತನ ಜತೆಯಲ್ಲಿದ್ದ ಮೂವರು ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ಶಂಕಿತ ಉಗ್ರನ ವಾಸ್ತವ್ಯ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಸಿಸಿಬಿಯ 30ಕ್ಕೂ ಹೆಚ್ಚು ಸಿಬ್ಬಂದಿ ಭಾನುವಾರ ಸಂಜೆ 5 ಗಂಟೆಗೆ ಮನೆ ಬಳಿ ನಿಗಾ ವಹಿಸಿತ್ತು. ರಾತ್ರಿ 7 ಗಂಟೆಗೆ ಅಖ್ತರ್ ಹುಸೇನ್ ಮನೆಗೆ ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ಜಮಾವಣೆಗೊಂಡ ಸಿಸಿಬಿ ತಂಡ ದಾಳಿ ನಡೆಸಿ ಬಂಧಿಸಿದೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದೆ.
ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಯಾವ ಉಗ್ರಗಾಮಿ ಸಂಘಟನೆ ಜತೆ ಕೈಜೋಡಿಸಿ ಕೆಲಸ ಮಾಡುತ್ತಿದ್ದ? ನಗರದಲ್ಲಿ ಇನ್ನಾರ ಜತೆಗೆ ಸಂಪರ್ಕ ಹೊಂದಿದ್ದ ಎನ್ನುವುದರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಶಂಕಿತ ಉಗ್ರ ಮೂಲಭೂತವಾದಿ ಆಗಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ಯಾವ ಸಂಘಟನೆ ಜತೆ ಸಂಪರ್ಕ ಹೊಂದಿದ್ದ. ಈತನ ಜತೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.
|ಸಿ.ಎಚ್. ಪ್ರತಾಪ್ ರೆಡ್ಡಿನಗರ ಪೊಲೀಸ್ ಆಯುಕ್ತ
ಬಂಧಿತ ಶಂಕಿತ ಹುಸೇನ್ ಒಂದು ವರ್ಷದಿಂದ ನಗರದಲ್ಲಿ ಸ್ವಿಗ್ಗಿ, ಝೋಮಾಟೋ ಫುಡ್ ಡೆಲಿವರಿ ಬಾಯ್ ಆಗಿದ್ದ. ಈತನ ಜತೆಗೆ ಕಿರಿಯ ಸೋದರ ಮತ್ತು ಇಬ್ಬರು ಸ್ನೇಹಿತರು ನೆಲೆಸಿದ್ದರು. ದೇಶದಲ್ಲಿ ಮುಸ್ಲಿಂ ಸಮುದಾಯದ ಮೇಲೆ ದೌರ್ಜನ್ಯ ನಡೆದಿದೆ ಎಂದು ಹುಸೇನ್, ಟೆಲಿಗ್ರಾಮ್ ಫೇಸ್​ಬುಕ್​ನಲ್ಲಿ ಕಾಶ್ಮೀರ ಆಜಾದಿ ಮತ್ತು ದೇಶವ್ಯಾಪಿ ಷರಿಯತ್ ಕಾನೂನು (ಮುಸ್ಲಿಂ ವೈಯಕ್ತಿಕ ಕಾನೂನು) ಜಾರಿಯಾಗಬೇಕು ಎಂದು ನಿರಂತರವಾಗಿ ಪೋಸ್ಟ್ ಹಾಕುತ್ತಿದ್ದ. ಇದನ್ನು ಗಮನಿಸಿದ ಅಲ್​ಖೈದಾ ಸಂಘಟನೆ ಉಗ್ರರು ಅಖ್ತರ್ ಹುಸೇನ್​ಗೆ ಗಾಳ ಹಾಕಿದ್ದರು. ಆನಂತರ ಧಾರ್ವಿುಕ ಮೂಲಭೂತವಾದ (ಜೆಹಾದಿ) ಬೋಧಿಸಿ, ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ಆತಂಕವಿದೆ ಎಂದು ತಲೆಗೆ ತುಂಬಿದ್ದರು. ಇದರಿಂದ ಪ್ರಚೋದನೆಗೆ ಒಳಗಾದ ಶಂಕಿತ, ಕಾಶ್ಮೀರ ವಿಚಾರ ಕುರಿತು ಮತ್ತಷ್ಟು ಪೋಸ್ಟ್​ಗಳನ್ನು ಹಾಕುತ್ತಿದ್ದ. ಮತ್ತೊಂದೆಡೆ, ಸಮಾಜಘಾತುಕ ಶಕ್ತಿಗಳ, ವಿವಿಧ ಸಂಘಟನೆಗಳ ಸದಸ್ಯರ ಜಾಲತಾಣದ ಚಟುವಟಿಕೆ ಮೇಲೆ ನಿಗಾವಹಿಸಿದ್ದ ಹೈದರಾಬಾದ್ ಪೊಲೀಸರ ಅಕ್ಟೋಪಸ್ ತಂಡಕ್ಕೆ ಹುಸೇನ್ ಖಾತೆ ಮೇಲೆ ಅನುಮಾನ ಮೂಡಿದೆ.
ಕೂಡಲೇ ಹುಸೇನ್ ಹಿನ್ನೆಲೆ ಜಾಲಾಡಿದಾಗ ಬೆಂಗಳೂರಿನಲ್ಲಿ ಹುಸೇನ್ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಇದರ ಬೆನ್ನೆಲ್ಲೆ ಜಾಲತಾಣದಲ್ಲಿ ‘2 ತಿಂಗಳು ನಾನು ಇರುವುದಿಲ್ಲ. ನಾನು ಎಲ್ಲದ್ದಕ್ಕೂ ಸಿದ್ಧನಾಗಿದ್ದೇನೆ’ ಎಂದೂ ಹುಸೇನ್ ಪೋಸ್ಟ್ ಮಾಡಿದ್ದ. ಇದನ್ನು ಗಮನಿಸಿದ ಅಕ್ಟೋಪಸ್ ತಂಡ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್. ಪ್ರತಾಪ್ ರೆಡ್ಡಿಗೆ ಮಾಹಿತಿ ನೀಡಿತ್ತು.
ಕಮಿಷನರ್ ಸೂಚನೆ ಮೇರೆಗೆ ಎಚ್ಚೆತ್ತ ಸಿಸಿಬಿ ಅಧಿಕಾರಿಗಳು, ಶಂಕಿತ ಉಗ್ರನ ಮೇಲೆ ನಿಗಾವಹಿಸಿ ಎರಡು ವಾರಗಳ ಕಾಲ ಹುಸೇನ್ ಚಲನವಲನದ ಮೇಲೆ ನಿಗಾವಹಿಸಿ ಬಂಧಿಸಿದೆ. ಈತನ ಮೊಬೈಲ್​ನಲ್ಲಿ ನೂರಾರು ಜೆಹಾದಿ ಬೋಧನೆ, ಕಾಶ್ಮೀರದ ಗಲಾಟೆ ಸಂಬಂಧ ವಿಡಿಯೋಗಳು ಪತ್ತೆಯಾಗಿವೆ.
ಮಲಗಿದ್ದವರ ಮೇಲೇ ಸಾಗಿದ ಟೆಂಪೋ; ಒಬ್ಬನ ಸಾವು, ಮೂವರಿಗೆ ಗಂಭೀರ ಗಾಯ..

ಪೊಲೀಸರ ಮೇಲಿನ ಸಿಟ್ಟಿಗೆ ಹೊಯ್ಸಳ ವಾಹನಕ್ಕೇ ಪೆಟ್ರೋಲ್ ಸುರಿದು ಬೆಂಕಿ ಇಟ್ಟ…

Sign in to your account
Please enter an answer in digits:eleven + 10 =
Remember me
