ಬೆಂಗಳೂರು:ನಗರ ಮತ್ತು ಹೊರವಲಯದಲ್ಲಿ ದಿನೇ ದಿನೇ ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿದೆ. ಇನ್ನೇನು ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಈ ವರ್ಷ ಕುಡಿಯುವ ನೀರಿಗೂ ಹಲವೆಡೆ ಸಮಸ್ಯೆ ಎದುರಾಗಿದೆ.
ಇದನ್ನೂ ಓದಿ:IPL ಆರಂಭಕ್ಕೂ ಅಂಬಾಟಿ ರಾಯಡು ಮಹತ್ವದ ಹೇಳಿಕೆ..! ಸಿಎಸ್​ಕೆಗೆ ರೋಹಿತ್ ಶರ್ಮ ಕ್ಯಾಪ್ಟನಾ?
ಇತ್ತೀಚಗಷ್ಟೇ ರೈತ ಮಕ್ಕಳಿಗೆ 30 ವರ್ಷವಾಗಿದ್ದರೂ ಮದುವೆಯಾಗಿಲ್ಲ‌ ಎಂದು ಮಂಡ್ಯದ ಬ್ರಹ್ಮಚಾರಿ ಹೈಕ್ಲು ಮಾದಪ್ಪನ ಸನ್ನಿಧಿಗೆ ಪಾದಯಾತ್ರೆ ಮಾಡಿದ್ದರು. ಆದರೆ ಡಬಲ್​ ಡಿಗ್ರಿ, ಕೈ ತುಂಬ ಸಂಬಳ ಬಂದರೂ ಹೆಣ್ಣು ಕೊಡ್ತಿಲ್ಲ ಎಂದು ರಾಜಕೀಯದ ರಂಗದ ಪ್ರಮುಖ ವ್ಯಕ್ತಿಗೆ ಟ್ಟೀಟ್​ ಮೂಲಕ ಪತ್ರ ಬರೆದಿದ್ದಾರೆ.

ಹೌದು ಬೆಂಗಳೂರಿನಲ್ಲಿ ನೀರಿನ ಬಿ ಕ್ಕಟ್ಟು ದಿನೇ ದಿನೇ ಹೆಚ್ಚಾಗುತ್ತಿದೆ. ಕುಡಿಯುವ ನೀರಿಗಾಗಿ ಗಂಟೆಗಟ್ಟಲೇ ಕ್ಯೂನಲ್ಲಿ ಕಾಯಬೇಕಿದೆ. ಇನ್ನೂ ಕೆಲವರು ಶೌಚಾಲಯಕ್ಕೆಂದು ಮಾಲ್​ಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಂದು ಕಡೆಯಾದರೆ ಇತ್ತ ವಯಸ್ಸಿಗೆ ಬಂದ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಹೀಗಂತ ನರೇಂದ್ರ ಎಂಬ ನನ್ನ ಸ್ನೇಹಿತನ ಸಮಸ್ಯೆ ಬಗೆಹರಿಸಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿಗೆ ಎಕ್ಸ್​ ಖಾತೆಯಲ್ಲಿ ಸ್ನೇಹಿತ ಮನವಿ ಮಾಡಿದ್ದಾನೆ.

ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರಿಗೆ ಟ್ಯಾಗ್ ಮಾಡಿ ನೀರಿನ ಸಮಸ್ಯೆ ಮುಕ್ತಗೊಳಿಸಿ ಎಂದು ಮನವಿ ಮಾಡಿದ್ದಾರೆ. ಎಕ್ಸ್​ನಲ್ಲಿ ಸ್ನೇಹಿತನಿಗೆ ಸಿಗದ ಶಾದಿ ಭಾಗ್ಯದ ನೋವು ಹೊರ ಹಾಕಿದ್ದಾರೆ. ಜಲ ಕಂಟಕ ಎದುರಿಸುತ್ತಿರುವ ಬೆಂಗಳೂರಿನ ಉದ್ಯೋಗಿ ಬೇಡ ಎಂದು ಹೆಣ್ಣು ಮಕ್ಕಳು ನಿರಾಕರಿಸುತ್ತಿದ್ದಾರಂತೆ. ಈ ಮೂಲಕ ಗೆಳೆಯನಿಗೆ ಮದುವೆಯಾಗಲು ಹುಡುಗಿ ಸಿಗುವಂತೆ ಮಾಡಿ ಎಂದು ರಾಗಾಗೆ ಟ್ಯಾಗ್‌ ಮಾಡಿ ಮನವಿ ಮಾಡಿಕೊಂಡಿದ್ದಾರೆ.
ಯುವಕನ ಪೋಸ್ಟ್​ನಲ್ಲಿ ಏನಿದೆ?:ರಾಹುಲ್ ಗಾಂಧಿಯವರೇ ದಯವಿಟ್ಟು ಗಮನಿಸಿ.. ಆದ್ಯತೆಯ ಮೇರೆಗೆ ಬೆಂಗಳೂರಿನ ನೀರಿನ ಸಮಸ್ಯೆ ಬಗೆಹರಿಸಿ. ನನ್ನ ಗೆಳೆಯ ಮದುವೆಯಾಗಲು ಸಿದ್ಧವಿದ್ದು, ವಧುವಿನ ಹುಡುಕಾಟದಲ್ಲಿದ್ದಾರೆ. ಎಷ್ಟೇ ಹುಡುಕಿದರೂ ವಧು ಸಿಗುತ್ತಿಲ್ಲ. ನೀರಿನ ಸಮಸ್ಯೆಯಿಂದಾಗಿ ಯಾವುದೇ ಹುಡುಗಿಯರು ಬೆಂಗಳೂರು ಉದ್ಯೋಗಿಯೊಂದಿಗೆ ಮದುವೆಯಾಗಲು ಸಿದ್ಧರಿಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ರಾಹುಲ್ ಗಾಂಧಿಗೆ ಟ್ಯಾಗ್ ಕೂಡ ಮಾಡಿದ್ದಾರೆ.
IPL ಆರಂಭಕ್ಕೂ ಅಂಬಾಟಿ ರಾಯಡು ಮಹತ್ವದ ಹೇಳಿಕೆ..! ಸಿಎಸ್​ಕೆಗೆ ರೋಹಿತ್ ಶರ್ಮ ಕ್ಯಾಪ್ಟನಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 7 =
Remember me
