ಬೆಂಗಳೂರು:ಚುನಾವಣೆಗೂ ಮುನ್ನ, ಬಿಜೆಪಿ ಅಧಿಕಾರದಲ್ಲಿದ್ದಾಗ ಹಾಲಿನ ದರ ಏರಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಾಲಿನ ದರ ಏರಿಸದಂತೆ ಸೂಚನೆ ನೀಡಿದ್ದರು. ಕೆಲ ತಿಂಗಳು ಕಾಲ ನಿಶ್ಚಿಂತರಾಗಿದ್ದ ಜನತೆ, ಇದೀಗ ಮತ್ತೊಮ್ಮೆ ಹಾಲಿನ ದರದ ಹೆಚ್ಚಳದ ಬಗ್ಗೆ ಯೋಚನೆ ಮಾಡುವ ಕ್ಷಣ ಬಂದಿದೆ ಎಂದೇ ಹೇಳಬಹುದು.
ಇದನ್ನೂ ಓದಿ:ಹಾಲಿನ ದರ ಏರಿಕೆ ಯಾಕಾಯ್ತು? ಎಷ್ಟಾಯ್ತು? ಇಲ್ಲಿದೆ ಫುಲ್​ ಡೀಟೇಲ್ಸ್​
ಇದೀಗ ಹಾಲಿನ ದರ ಏರಿಸಲು ಬಮೂಲ್ (BaMUL, Bangalore Milk Union Limited) ಚಿಂತನೆ ನಡೆಸುತ್ತಿದ್ದು ದರ ಪರಿಷ್ಕರಿಸುವಂತೆ ಪಟ್ಟು ಹಿಡಿದಿದೆ. ನಂದಿನಿ ಹಾಲಿನ ದರ ಹೆಚ್ಚಳಕ್ಕೆ ಒಕ್ಕೂಟ ಪಟ್ಟು ಹಿಡಿದಿದ್ದು ಇದೀಗ ಪಶು ಸಂಗೋಪನೆ ಸಹಕಾರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದೆ.
ಇದನ್ನೂ ಓದಿ:ಹಾಲಿನ ದರ ಏರಿಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಸಿಎಂ: ಸಚಿವ ಸೋಮಶೇಖರ್
ಆದರೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲು ಇನ್ನೂ ಸಮಯ ಸಿಗದ ಕಾರಣ ನಾಳೆ ಅಥವಾ ನಾಡಿದ್ದು ಭೇಟಿ ಮಾಡಿ ಸಲ್ಲಿಸಲು ಬಮೂಲ್ ಅಧ್ಯಕ್ಷ ಚಿಂತನೆ ಮಾಡಿದ್ದಾರೆ.
ಪ್ರತೀ ಲೀಟರ್ ಹಾಲಿನ ದರವನ್ನು 5 ರೂ. ಏರಿಕೆ ಮಾಡುವಂತೆ ಪ್ರಸ್ತಾವನೆ ಇದ್ದು ಈ ಬಗ್ಗೆ ಹಾಲು ಒಕ್ಕೂಟ ಪಟ್ಟು ಹಿಡಿದು ಕೆಲಸ ಮಾಡುತ್ತಿದೆ. ಈ ವಿಚಾರದ ಕುರಿತಾಗಿ ಬಮೂಲ್ ಅಧ್ಯಕ್ಷ ನರಸಿಂಹ ಮೂರ್ತಿ ದಿಗ್ವಿಜಯ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + twenty =
Remember me
