ಬೆಂಗಳೂರು:ಚುನಾವಣೆ ಹಿನ್ನಲೆ ಸರಿಯಾಗಿ ವಾಹನ ತಪಾಸಣೆ ಆಗುತ್ತಿಲ್ಲ ಎಂದು ಕಮೀಷನರ್ ಸಿಟ್ಟಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿನಿತ್ಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸುತ್ತಿದ್ದಾರೆ. ಒಂದೊಂದು ದಿನ ಒಂದೊಂದು ಡಿವಿಷನ್​ನ‌ ಪೊಲೀಸರು, ಆಯಾ ವಿಭಾಗದ ಡಿಸಿಪಿ, ಎಸಿಪಿ, ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್​ಗಳ ಜತೆ ಸಭೆ ನಡೆಸುತ್ತಿದ್ದಾರೆ.
ಚುನಾವಣೆಯ ವೇಳೆ ನಗರದಲ್ಲಿ ದಿನದ ಸಮಯದಲ್ಲಿ ಸರಿಯಾಗಿ ವಾಹನ ತಪಾಸಣೆ ಮಾಡದ ಅಧಿಕಾರಿ ಹಾಗೂ ಸಿಬ್ಬಂದಿಯ ಕಾರ್ಯ ವೈಖರಿ ಮೇಲೆ ಕಮಿಷನರ್​ ಸಿಟ್ಟಾಗಿದ್ದು “ಸುಮ್ಮನೆ ವಾಹನಗಳು ಹೋದ್ರೂ ಚೆಕ್ ಪೋಸ್ಟ್ ನಲ್ಲಿ ಕೂತಿರ್ತೀರ, ಇನ್ಮೇಲೆ ಆ ರೀತಿ ಆಗಬಾರದು. ಆದಷ್ಟು ವಾಹನಗಳ ತಪಾಸಣೆ ಆಗಬೇಕು. ಅನುಮಾನ ಬಂದ ಯಾವುದೇ ವಾಹನ ಆಗಲಿ ತಪಾಸಣೆ ಮಾಡಬೇಕು. ಹಣ, ಸೀರೆ, ಕುಕ್ಕರ್ ತವಾ ಹೀಗೆ ಯಾವುದೇ ವಸ್ತುಗಳು ಇದ್ರು ಸೀಜ್ ಮಾಡಬೇಕು. ಜೊತೆಗೆ ಪ್ರತಿಯೊಂದು ಚೆಕ್ ಪೋಸ್ಟ್​ನಲ್ಲಿಯೂ ಮೂರು ಕಡೆ ಕಾಣೋ ಹಾಗೆ ಸಿಸಿ ಕ್ಯಾಮರಾ ಇರಬೇಕು.
ವಾಹನ ತಡೆಯೋದ್ರಿಂದ ಹಿಡಿದು, ತಪಾಸಣೆ ಮಾಡಿ ವಾಹನ ಹೋಗೋವರೆಗೂ ರೆಕಾರ್ಡ್ ಆಗಬೇಕು. ಒಂದು ವೇಳೆ ತಪಾಸಣೆ ವೇಳೆ ನಿರ್ಲಕ್ಷ್ಯ ತೋರಿದ್ರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು” ಎಂದು ನಗರದ ಎಲ್ಲಾ ಪೊಲೀಸರಿಗೂ ಸಭೆಯಲ್ಲಿ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 18 =
Remember me
