ಬೆಂಗಳೂರು:ಪೊಲೀಸರೆಂದರೆ ರಕ್ಷಕರು ಎನ್ನುತ್ತಾರೆ. ಆದರೆ ಅದೇ ಪೊಲೀಸರು ಪ್ರಾಣ ತೆಗೆಯುವವರಾಗಿ ಬದಲಾಗಿಬಿಟ್ಟರೆ? ಆ ರೀತಿಯ ಘಟನೆ ನಿಜವಾಗಿಯೂ ಬೆಂಗಳೂರಿನಲ್ಲಿ ನಡೆದಿದೆ. ನಗರದ ನಿವೃತ್ತ ಪೊಲೀಸ್​ ಅಧಿಕಾರಿಯೊಬ್ಬರು ಮುಖ ಪ್ರಾಣಿಯೊಂದರ ಮೇಲೆ ಅಮಾನವೀಯವಾಗಿ ಕಾರು ಹತ್ತಿಸಿ ದುಷ್ಕೃತ್ಯ ಮೆರೆದಿದ್ದಾರೆ.
ಇದನ್ನೂ ಓದಿ:ಸಿನಿಮಾ ಮಂದಿರಗಳಿಗೆ ರಿಲೀಫ್​; ಹೆಚ್ಚು ಮಂದಿ ಸೇರುವುದಕ್ಕೆ ಅವಕಾಶ ಕೊಟ್ಟ ಸರ್ಕಾರ
ದೊಡ್ಡಕಮ್ಮನಹಳ್ಳಿಯ ನಿವಾಸಿ 65 ವರ್ಷದ ನಿವೃತ್ತ ಸಬ್​ಇನ್ಸ್​ಪೆಕ್ಟರ್ ನಾಗೇಶಯ್ಯ, ತಮ್ಮ ನಿವಾಸದ ಬಳಿ ತಮ್ಮ ಮಗನೊಂದಿಗೆ ಕಾರಿನಲ್ಲಿ ಹೋಗುತ್ತಿದ್ದರು. ರಸ್ತೆಯಲ್ಲಿ ನಾಯಿಯೊಂದು ನಡೆಯಲಾಗದೆ, ಕುಟುಂತಾ ಬಿದ್ದಿತ್ತು. ಅದನ್ನು ಕಂಡರೂ ಕಾಣದಂತೆ ನಾಗೇಶಯ್ಯ ನಾಯಿಯ ಮೇಲೇ ಕಾರು ಹತ್ತಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ತುಣುಕು ಸಾಮಾಜಿಕ ಜಾಲಗಳಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಪ್ರಾಣಿಪ್ರೇಮಿಗಳ ಮನ ಕಿವುಚಿದೆ.
ನಡೆಯಲು ಕಷ್ಟ ಪಡುತ್ತಿದ್ದ ಬೀದಿನಾಯಿಯ ಮೇಲೆ ಕಾರಿನ ಟೈರ್ ಹತ್ತಿಸಿ ಹೋದ ಮೇಲೆ ನಾಯಿ ಅರೆಜೀವವಾಗಿ ನರಳುವುದನ್ನು ವೀಡಿಯೋದಲ್ಲಿ ಕಾಣಬಹುದು. ಬೀದಿಯಲ್ಲಿ ನರಳುತ್ತಾ ಬಿದ್ದಿದ್ದ ನಾಯಿಯನ್ನು ದಾರಿಹೋಕರೊಬ್ಬರು ಬೆಂಗಳೂರು ಮಹಾನಗರ ಪಾಲಿಕೆಯ ಪಶುಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡೊಯ್ದಿದ್ದಾರೆ.
ಇದನ್ನೂ ಓದಿ:30 ನಿಮಿಷದಲ್ಲಿ 30 ಕೆಜಿ ಕಿತ್ತಳೆ ತಿಂದ ಸ್ನೇಹಿತರು! ಕಾರಣ ಕೇಳಿದರೆ ನೀವೂ ನಗುತ್ತೀರ
ಪಾಲಿಕೆಯ ಪಶುವೈದ್ಯ ಡಾ.ರಮೇಶ್ ಅವರ ದೂರಿನ ಮೇಲೆ ನಾಗೇಶಯ್ಯ ಅವರ ಮೇಲೆ ಪ್ರಿವೆಂಶನ್ ಆಫ್ ಕ್ರುಯೆಲ್ಟಿ ಟು ಅನಿಮಲ್ಸ್​ ಆ್ಯಕ್ಸ್ ಮತ್ತು ಐಪಿಸಿ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.
ದೇವರ ದಯೆ, ನಾಯಿ ಇನ್ನೂ ಬದುಕಿದೆ. ಬೊಜೊ ವಾಗ್ಸ್ ವೆಟರ್ನರಿ ಆಸ್ಪತ್ರೆಯಲ್ಲಿ ನಾಯಿಯ ಆರೈಕೆ ನಡೆಯುತ್ತಿದೆ. (ಏಜೆನ್ಸೀಸ್​)
VIDEO| ಬೀದಿನಾಯಿಯ ಮೇಲೆ ಕಾರು ಹತ್ತಿಸಿ ದುಷ್ಕೃತ್ಯ ಮೆರೆದ ಪೊಲೀಸಪ್ಪ!pic.twitter.com/lWFFnl7nef
— Vijayavani (@VVani4U)January 27, 2021

ನಾವಲ್ಲ, ಅಕ್ಕನೇ ತಂಗಿಯನ್ನ ಕೊಂದಿದ್ದು! ಆಮೇಲೆ ನನ್ನನ್ನೂ ಕೊಂದುಬಿಡಿ ಎಂದು ಬೇಡಿಕೊಂಡಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 2 =
Remember me
