ಬೆಂಗಳೂರು:ವೀಕೆಂಡ್​ ಬಂತು ಎಂದು ಬೆಂಗಳೂರು ಪೊಲೀಸರು ಆಪರೇಷನ್ ಮಾಡಿದ್ದು ಮಧ್ಯರಾತ್ರಿಯ ಹೊತ್ತಲ್ಲಿ ಎಂಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ರೇಡ್ ಮಾಡಿ ಆಫ್ರಿಕನ್ ಪ್ರಜೆಗಳಿಗೆ ಶಾಕ್ ಕೊಟ್ಟಿದ್ದಾರೆ.
ವೇಶ್ಯಾವಾಟಿಕೆ, ಡ್ರಗ್ಸ್ ಸೇರಿದಂತೆ ಇತರ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಶಂಕೆಯಲ್ಲಿ ಆಫ್ರಿಕನ್ ಪ್ರಜೆಗಳ ಮೇಲೆ ದಾಳಿ ಮಾಡಿ ವಶಕ್ಕೆ ಪಡೆದಿದ್ದಾರೆ. ಮಹಿಳೆಯರು ಪುರುಷರು ಸೇರಿ ಒಟ್ಟು 25 ಕ್ಕೂ ಹೆಚ್ವು ಆಫ್ರಿಕನ್ ಪ್ರಜೆಗಳನ್ನು ವಶಕ್ಕೆ ಪಡೆಯಲಾಗಿದ್ದು ಅವರನ್ನು ನಾರ್ಕೋಟಿಕ್ಸ್ ಟೆಸ್ಟ್​ಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:ಡ್ರಗ್ಸ್ ದಂಧೆಗೆ ಖಾಕಿ ಖೆಡ್ಡಾ; ಗಡಿ ಚೆಕ್​ಪೋಸ್ಟ್​ಗಳಲ್ಲಿ ನಿಗಾ
ಪೊಲೀಸರ ದಾಳಿ ವೇಳೆ ಎಂಜಿ ರಸ್ತೆ, ಬ್ರಿಗೆಡ್ ರಸ್ತೆಯಲ್ಲಿ ಹೈಡ್ರಾಮ ನಡೆದಿದ್ದು ಪೊಲೀಸರು ವಶಕ್ಕೆ ಪಡೆಯಲು ಬರುತ್ತಿದ್ದಂತೆಯೇ ಆಫ್ರಿಕನ್ ಮಹಿಳೆಯರು ದಿಕ್ಕಾಪಾಲಾಗಿದ್ದಾರೆ. ಈ ಸಂದರ್ಭ ಓರ್ವ ಆಫ್ರಿಕನ್ ಪ್ರಜೆ ಪೊಲೀಸರ ಕೈ ತಪ್ಪಿಸಿ ಓಡೋಡಿ ಹೋಗಿದ್ದಾನೆ ಎನ್ನಲಾಗಿದೆ.
ಆದರೆ ಅಷ್ಟಕ್ಕೇ ಬಿಡದ ಬೆಂಗಳೂರು ಕೇಂದ್ರ ಪೊಲೀಸರು ಅವರನ್ನು ಅಟ್ಟಾಡಿಸಿ ಹಿಡಿದಿದ್ದಾರೆ. ಪೊಲೀಸರ ದಾಳಿ ವೇಳೆ ಕೆಲ ಯುವತಿಯರು ಹೈಡ್ರಾಮಾ ಮಾಡಿದ್ದು ವಾಗ್ವಾದಕ್ಕೂ ಇಳಿದಿದ್ದಾರೆ. ಇವರು ನಶೆಯಲ್ಲಿ ಪಬ್​ನಿಂದ ಹೊರ ಬರುತ್ತಿದ್ದಂತೆಯೇ ಖಾಕಿ ಜತೆಗೆ ಕಿರಿಕ್ ಮಾಡಿದ್ದರು.
ಈ ‘ಬೇಟೆ’ಯಲ್ಲಿ ಓರ್ವ ಡಿಸಿಪಿ, ಇಬ್ಬರು ಎಸಿಪಿ, 6 ಜನ ಇನ್ಸ್​ಪೆಕ್ಟರ್ ಹಾಗೂ 10 ಜನ ಪಿಎಸ್ಐ ಭಾಗವಹಿಸಿದ್ದರು. ಒಟ್ಟು 20 ಮಹಿಳಾ ಸಿಬ್ಬಂದಿ ಹಾಗೂ 20 ಪುರುಷ ಸಿಬ್ಬಂದಿಗಳು ಸೇರಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.
ಇದನ್ನೂ ಓದಿ:ಡ್ರಗ್ಸ್​ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಸಹಪಾಠಿಯ ಮೇಲೆ ನಾಲ್ವರು ವಿದ್ಯಾರ್ಥಿನಿಯರಿಂದ ಹಲ್ಲೆ: ವಿಡಿಯೋ ವೈರಲ್​
ವಿದೇಶಿಗರು ಡ್ರಗ್ಸ್ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢವಾಗಿದ್ದು ಹಲವು ವಿದೇಶಿಗರ ರಿಪೋರ್ಟ್ ಪಾಸಿಟಿವ್ ಬಂದಿದೆ. ತಡರಾತ್ರಿ ವಶಕ್ಕೆ ಪಡೆದ 26 ವಿದೇಶಿಗರಿರಲ್ಲಿ ಬಹುತೇಕರು ಡ್ರಗ್ಸ್ ನಶೆಯಲ್ಲೇ ಇದ್ದರು ಎನ್ನಲಾಗಿದೆ.
ರಾತ್ರೋ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದವರನ್ನು ತಡರಾತ್ರಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅಲ್ಲಿ ವೈದ್ಯಕೀಯ ಪರೀಕ್ಷೆ ಮಾಡಲಾಗಿತ್ತು. ಈ ಸಂದರ್ಭ ಅನೇಕರ ಫಲಿತಾಂಶ ಪಾಸಿಟಿವ್ ಬಂದಿದ್ದು ಡ್ರಗ್ಸ್ ಸೇವನೆ ಮಾಡಿದವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.
ಇದನ್ನೂ ಓದಿ:ಅಪ್ರಾಪ್ತರಿಗೆ, ಕಾಲೇಜು ಯುವಕರಿಗೆ ಡ್ರಗ್ಸ್​ ಮಾರುತ್ತಿದ್ದ ರೌಡಿಯ ಬಂಧನ…
ಕಬ್ಬನ್ ಪಾರ್ಕ್ ಠಾಣೆಯಲ್ಲಿ ವಶಕ್ಕೆ ಪಡೆದವರ ವಿಚಾರಣೆ ನಡೆಯುತ್ತಿದ್ದು ಇನ್ಸ್​ಪೆಕ್ಟರ್ ಚೈತನ್ಯ ನೇತೃತ್ವ ವಹಿಸಿಕೊಂಡಿದ್ದಾರೆ. ಸದ್ಯ ವಶಕ್ಕೆ ಪಡೆದ ಎಲ್ಲರ ಪಾಸ್​ಪೋರ್ಟ್ ಹಾಗೂ ವೀಸಾವನ್ನು ತರುವಂತೆ ಪೊಲೀಸರು ಹೇಳಿದ್ದಾರೆ.
ಅವರ ಪರಿಚಯಸ್ಥರ ಮೂಲಕ ಠಾಣೆಗೆ ಅಗತ್ಯ ದಾಖಲೆಗಳನ್ನು ತರಿಸುವಂತೆ ಸೂಚನೆ ನೀಡಲಾಗಿದೆ. ಆದರೆ ಇದುವರೆಗೂ ಯಾರೂ ಪಾಸ್ ಪೋರ್ಟ್ ಹಾಗೂ ವೀಸಾ ತಂದಿಲ್ಲ.
ಇದನ್ನೂ ಓದಿ:ಮೀನುಗಾರರ ದೋಣಿಯಲ್ಲಿ ಸಿಕ್ತು ಬಂದೂಕು-ಬುಲೆಟ್ಸ್​ ಮತ್ತು ಕೋಟ್ಯಾಂತರ ರೂ. ಬೆಲೆ ಬಾಳುವ ಡ್ರಗ್ಸ್​..!
ಒಂದು ವೇಳೆ ವೀಸಾ ಅವಧಿ ಮುಗಿದಿದ್ರೆ ಪ್ರತ್ಯೇಕ ಕೇಸ್ ದಾಖಲು ಆಗಲಿದ್ದು ಈಗಾಗಲೇ ಡ್ರಗ್ಸ್ ಸೇವನೆ ಮಾಡಿರುವವರ ಮೇಲೆ ಎನ್​ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಶಕ್ಕೆ ಪಡೆದ ಯಾರ ಬಳಿಯೂ ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ. ಅವರು ಡ್ರಗ್ಸ್​ ಸೇವನೆ ಮಾಡಿರೋದು ಮಾತ್ರ ಪತ್ತೆಯಾಗಿದೆ. ಹೀಗಾಗಿ ಅವರಿಗೆ ಎಲ್ಲಿಂದ ಡ್ರಗ್ಸ್ ಪೂರೈಕೆ ಆಗುತ್ತಿತ್ತು ಎನ್ನುವ ಕುರಿತಾಗಿಯೂ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ:ಮೊಬೈಲ್​ ಕಳ್ಳನನ್ನು ಹಿಡಿದ ಪೊಲೀಸರಿಗೆ ಫ್ರೀಯಾಗಿ ಸಿಕ್ಕಿಬಿದ್ದ ಡ್ರಗ್ಸ್​ ಪೆಡ್ಲರ್​..!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + thirteen =
Remember me
