ಬೆಂಗಳೂರು: ಅನಗತ್ಯವಾಗಿ ಓಡಾಡುತ್ತಿದ್ದ 5,106 ದ್ವಿಚಕ್ರ ವಾಹನ, 181 ಆಟೋರಿಕ್ಷಾ ಹಾಗೂ 263 ನಾಲ್ಕು ಚಕ್ರದ ವಾಹನ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಲಾಕ್​ಡೌನ್ ವೇಳೆ ಅಗತ್ಯ ಸೇವೆ ಪೂರೈಸá-ವವರಿಗೆ ಡಿಸಿಪಿ ಕಚೇರಿಗಳಲ್ಲಿ ನೀಡಲಾಗುತ್ತಿದ್ದ ಸಾಮಾನ್ಯ ಪಾಸ್​ಗಳು ದುರ್ಬಳಕೆಯಾಗುತ್ತಿವೆ ಎಂದು ಟ್ವಿಟರ್​ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಗತ್ಯ ಕಾರಣಕ್ಕೆ ಓಡಾಡುವವರಿಗೆ ಪಾಸ್ ನೀಡಲಾಗಿತ್ತು. ಆದರೆ, ಕೆಲವರು ಇದನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾವು ಲಾಠಿ ಉಪಯೋಗಿಸುತ್ತಿಲ್ಲ. ತುಂಬಾ ತಾಳ್ಮೆಯಿಂದ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.
ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳನ್ನು ವಶಕ್ಕೆ ಪಡೆಯಲು ನಿರ್ಧರಿಸಿದ್ದೇವೆ. ಸಣ್ಣ-ಪುಟ್ಟ ಕಾರಣಗಳಿಗೆ ವಿನಾಯಿತಿ ಕೊಡಲು ಸಾಧ್ಯವಿಲ್ಲ. ದಯವಿಟ್ಟು ನಿಮ್ಮ ಕಾರು ಚಾಲಕರು, ವಾಚ್​ವುನ್, ಮನೆಗೆಲಸಗಾರರನ್ನು ಪ್ರತಿನಿತ್ಯ ಮನೆಯಿಂದ ಹೊರಗೆ ಕಳಿಸಬೇಡಿ. ನಿಮ್ಮ ಮನೆಯಲ್ಲೇ ಇರಲು ವ್ಯವಸ್ಥೆ ಕಲ್ಪಿಸಿ. ಅಂತವರಿಗೆ ಓಡಾಡಲು ಪ್ರತ್ಯೇಕ ಪಾಸ್ ಕೇಳಬೇಡಿ ಎಂಬುದಾಗಿ ಮನೆ ಮಾಲೀಕರಿಗೆ ಭಾಸ್ಕರ್ ರಾವ್ ಮನವಿ ಮಾಡಿದ್ದಾರೆ.
ತಪಾಸಣೆ ಮತ್ತಷ್ಟು ಬಿಗಿಗೊಳಿಸಲು ಸೂಚನೆ: ವಾಯುವಿಹಾರಕ್ಕೆ ತೆರಳುವ ದಿರಿಸಿನಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಭಾಸ್ಕರ್ ರಾವ್ ವಾಹನ ತಪಾಸಣೆ ನಡೆಸಿ, ಕೆಲ ವಾಹನಗಳನ್ನು ಜಪ್ತಿ ಮಾಡಿದರು. ಟೌನ್​ಹಾಲ್ ಬಳಿ ತಪಾಸಣೆ ನಡೆಸಿದ ಭಾಸ್ಕರ್ ರಾವ್, ಎಲ್ಲಿಂದ ಬರ್ತಾ ಇರೋದು, ಗಾಡಿ ಸೈಡ್​ಗೆ ಹಾಕಿ, ಪಾಸ್ ಇದೆಯೇ ಎಂದು ವಾಹನ ಮಾಲೀಕರನ್ನು ತಡೆದು ವಿಚಾರಿಸಿದರು. ತಪಾಸಣೆ ಸರಿಯಾಗಿ ಆಗುತ್ತಿಲ್ಲ. ಮತ್ತಷ್ಟು ಬಿಗಿಗೊಳಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು.
ಐದು ಪ್ರಕರಣ ದಾಖಲು: ಹೋಂ ಕ್ವಾರಂಟೈನ್​ನಲ್ಲಿದ್ದರೂ ಮನೆಯಿಂದ ಹೊರ ಬಂದವರ ವಿರುದ್ಧ ನಗರದಲ್ಲಿ ಇದುವರೆಗೆ ಒಟ್ಟಾರೆ ಐದು ಪ್ರಕರಣಗಳು ದಾಖಲಾಗಿವೆ ಎಂದು ಕಮಾಂಡ್​ಸೆಂಟರ್ ಡಿಸಿಪಿ ಇಶಾ ಪಂತ್ ತಿಳಿಸಿದ್ದಾರೆ.
ನಿಜಾಮುದ್ದೀನ್​ಗೆ ಹೋದವರ ಪಟ್ಟಿ ತಯಾರು: ದೆಹಲಿಯ ನಿಜಾಮುದ್ದೀನ್​ನಲ್ಲಿ ನಡೆದ ಧಾರ್ವಿುಕ ಸಭೆಗೆ ಹೋಗಿ ಬಂದವರ ಪಟ್ಟಿ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಹೋದವರನ್ನು ನಾವೇ ಹೋಗಿ ಕೇಳುತ್ತೇವೆ. ವೈದ್ಯರ ಜತೆ ರ್ಚಚಿಸಿ ಅವರನ್ನು ಹೋಂ ಕ್ವಾರಂಟೈನ್​ಗೆ ಒಳಪಡಿಸಬೇಕೋ ಅಥವಾ ಸರ್ಕಾರಿ ಕ್ವಾರಂಟೈನ್​ಗೆ ಒಳಪಡಿಸಬೇಕೋ ಎಂಬ ಬಗ್ಗೆ ತೀರ್ವನಿಸಲಾಗುವುದು. ನಾವು ಅವರನ್ನು ಹೆದರಿಸಲು ಹೋಗುತ್ತಿಲ್ಲ. ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸುವುದಿಲ್ಲ. ಅವರ ಬಳಿ ಈ ಬಗ್ಗೆ ಮನವಿ ಮಾಡುತ್ತೇವೆ ಎಂದು ಭಾಸ್ಕರ್ ರಾವ್ ತಿಳಿಸಿದ್ದಾರೆ.
ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿ, ಜ್ವರ, ಕೆಮ್ಮು ನಿರ್ಲಕ್ಷ್ಯ ಬೇಡ! ವೈದ್ಯರ ಸಲಹೆ ಪಡೆಯಿರಿ: ಹಿರಿಯ ವೈದ್ಯರ ಸಲಹೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − eight =
Remember me
