ಬೆಂಗಳೂರು:ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ.ಸಿ.ಎನ್ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ. ಅಂತೆಯೇ ಇಂದು ನಾಮಪತ್ರ ಸಲ್ಲಿಕೆ ಮಾಡಿರುವ ಮಂಜುನಾಥ್ ತಮ್ಮ ಆಸ್ತಿ ವಿವರವನ್ನು ಕೂಡ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ:‘ನ್ಯಾಷನಲ್ ಕ್ರಶ್’ ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಸ್ಪೆಷಲ್​ ಗಿಫ್ಟ್​ ಕೊಟ್ಟ ವಿಜಯ್​: ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ!
ನಾಮಪತ್ರ ಸಲ್ಲಿಕೆಗೂ ಮುನ್ನ ನಗರದ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಡಾ.ಸಿ.ಎನ್ ಮಂಜುನಾಥ್ ಕುಟುಂಬದ ಒಟ್ಟು ಆಸ್ತಿ 96.29 ಕೋಟಿಯಾಗಿದ್ದು, ಇವರಿಗಿಂತ ಇವರ ಪತ್ನಿ, ಅನುಸೂಯ ಅವರೇ ಶ್ರೀಮಂತೆಯಾಗಿದ್ದಾರೆ. ಮಂಜುನಾಥ್ ತಮ್ಮ ಹೆಸರಿನಲ್ಲಿ 43.63 ಕೋಟಿ ರೂ. ಮತ್ತು ಪತ್ನಿ ಅನುಸೂಯ ಅವರ ಆಸ್ತಿ ಮೌಲ್ಯ 52.66 ಕೋಟಿ ರೂ. ಇದೆ ಎಂದು ತಿಳಿಸಿದ್ದಾರೆ. ಈ ದಂಪತಿ ಒಟ್ಟು 96.29 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

ಅಭ್ಯರ್ಥಿ ಡಾ.ಮಂಜುನಾಥ್ ಅವರ ಹೆಸರಿನಲ್ಲಿ 43.63 ಕೋಟಿ ರೂ ಆಸ್ತಿ ಇದ್ದರೆ, ಅವರ ಪತ್ನಿ ಅನುಸೂಯ ಅವರು 52.66 ಕೋಟಿ ರೂ. ಆಸ್ತಿಯಿದೆ.ಡಾ. ಮಂಜುನಾಥ್ ಅವರು 6.98 ಕೋಟಿ ರೂ. ಚರಾಸ್ಥಿ, 36.65 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಆನುಸೂಯ ಅವರು 17.36 ಕೋಟಿ ರೂ. ಚರಾಸ್ತಿ, 35.30 ಕೋಟಿ ರೂ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಇವರ ಅವಿಭಕ್ತ ಕುಟುಂಬದ ಹೆಸರಿನಲ್ಲಿ 5 ಲಕ್ಷ ರೂ. ಸಾಲ ಇದೆ. ಡಾ. ಮಂಜುನಾಥ್ ಅವರ ಹೆಸರಿನಲ್ಲಿ 3 ಕೋಟಿ ರೂ. ಸಾಲ ಇದೆ. ಹಾಗೇ ಪತ್ನಿ ಅನುಸೂಯ ಅವರು 11 ಕೋಟಿ ರೂ. ಸಾಲ ಹೊಂದಿರುವುದಾಗಿ ಡಾ. ಸಿಎನ್ ಮಂಜುನಾಥ್ ಅವರು ತಮ್ಮ ಅಫಿಡೆವಿಟ್​ನಲ್ಲಿ ತಿಳಿಸಿದ್ದಾರೆ.
ಮಂಜುನಾಥ್ ಪತ್ನಿ ಬಳಿ ಕೇಜಿಗಟ್ಟಲೇ ಚಿನ್ನ: ಡಾ.ಮಂಜುನಾಥ್ ಬಳಿ ಒಂದು ಮರ್ಸಿಡೀಸ್ ಬೆಂಜ್ ಕಾರು, ಒಂದು ಹುಂಡೈ ವರ್ನಾ, ಕಾರು ಇದ್ದರೆ, ಇವರ ಪತ್ನಿಯ ಬಳಿ ಮಾರುತಿ ಸಿಯಾಜ್ ಕಾರು ಇದೆ. ಪತ್ನಿ ಅನುಸೂಯ ಅವರ ಬಳಿ 5 ಕೆಜಿ ಚಿನ್ನಾಭರಣ, 1ಕೆಜಿ ಚಿನ್ನದ ಗಟ್ಟಿ ಹೊಂದಿದ್ದು, 51 ಕ್ಯಾರೇಟ್ ವಜ್ರ ಇದೆ. ಹಾಗೇ 340 ಗ್ರಾಂ ಬೆಲೆ ಬಾಳುವ ಹರಳುಗಳು ಮತ್ತು 25 ಕೆಜಿ ಬೆಳ್ಳಿಯನ್ನು ಹೊಂದಿದ್ದಾರೆ. ಹಾಗೇ ಅನುಸೂಯ ಮಂಜುನಾಥ್ ಹೆಸರಿನಲ್ಲಿ 4 ವಾಸದ ಮನೆಗಳು ಇದ್ದರೆ, ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಮನೆ ಇಲ್ಲ.
ಡಾ.ಮಂಜುನಾಥ್ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರಿ ನಮ್ರತಾಗೆ, ಪತ್ನಿ ಅನುಸೂಯಗೆ, ಪುತ್ರ ಸಾತ್ವಿಕ್​ಗೆ ಸಾಲ ನೀಡಿದ್ದಾರೆ. ಡಾ.ಮಂಜುನಾಥ್ ಹೆಸರಿನಲ್ಲಿ ಯಾವುದೇ ಕ್ರಿಮಿನಲ್‌ ಪ್ರಕರಣಗಳಿಲ್ಲ.
ಬಾಲಕಿ ದತ್ತು ಪ್ರಕರಣ: ಸೋನು ಶ್ರೀನಿವಾಸ್ ಗೌಡಗೆ ಜಾಮೀನು ಮಂಜೂರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 4 =
Remember me
