ಬೆಂಗಳೂರು:ನಿರ್ಭಯಾ ನಿಧಿಯ ಮಹಿಳಾ ಸುರಕ್ಷತಾ ಯೋಜನೆ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಸರ್ಕಾರ ತನಿಖೆಗೆ ಆದೇಶಿಸಿದೆ. ಈ ವಿಷಯದ ಬಗ್ಗೆ ಕೂಲಂಕಷ ತನಿಖೆ ನಡೆಸಿ ವರದಿಯನ್ನು ಒಳಾಡಳಿತ ಇಲಾಖೆಗೆ ಸಲ್ಲಿಸಲು ಬೆಂಗಳೂರು ಪೊಲೀಸ್ ಆಯುಕ್ತರನ್ನು ತನಿಖಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಆದೇಶಿಸಿದ್ದಾರೆ.
ಟೆಂಡರ್ ವಿಚಾರ ಹಿರಿಯ ಐಪಿಎಸ್ ಅಧಿಕಾರಿಗಳಾದ ಡಿ.ರೂಪಾ ಹಾಗೂ ಹೇಮಂತ್ ನಿಂಬಾಳ್ಕರ್ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿತ್ತು. ಟೆಂಡರ್ ಪಡೆದ ದೆಹಲಿ ಮೂಲದ ಕಂಪನಿಗೆ ಗೃಹ ಇಲಾಖೆ ಕಾರ್ಯದರ್ಶಿ ಎಂದೇಳಿಕೊಂಡು ಕರೆ ಮಾಡಿದ್ದ ಮಹಿಳೆ, ಟೆಂಡರ್​ಗೆ ಸಂಬಂಧಿಸಿದ ದಾಖಲಾತಿ ಕೊಡುವಂತೆ ಕೇಳಿದ್ದಾರೆ. ದಾಖಲೆ ಏಕೆ ಬೇಕು? ಇದರಲ್ಲಿ ಉತ್ಸಾಹ ತೋರುತ್ತಿರುವುದು ಏಕೆ? ಅನಗತ್ಯವಾಗಿ ಹಸ್ತಕ್ಷೇಪ ಮಾಡಿರುವವರ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್​ಗೆ ಹೇಮಂತ್ ನಿಂಬಾಳ್ಕರ್ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರೂಪಾ, ನಿಯಮ ಉಲ್ಲಂಘಿಸಿ ಟೆಂಡರ್ ಕೊಡಲಾಗಿದೆ. ಟೆಂಡರ್ ಪಡೆಯಲು ಅರ್ಹತೆ ಹೊಂದಿರದ ಕಂಪನಿಗೆ ನೀಡಲಾಗಿದೆ. ಸಾರ್ವಜನಿಕ ಹಣ ಪೋಲಾಗಬಾರದು ಎಂಬ ಕಾರಣಕ್ಕೆ ದಾಖಲೆ ನೀಡುವಂತೆ ಕಂಪನಿಗೆ ಕರೆ ಮಾಡಿದ್ದು ನಿಜವೆಂದು ದಾಖಲೆಸಹಿತ ತಮ್ಮ ವಿರುದ್ಧದ ಆರೋಪವನ್ನು ತಳ್ಳಿಹಾಕಿದ್ದಾರೆ. 10 ಕೋಟಿ ರೂ. ಗಿಂತ ಮೇಲ್ಪಟ್ಟ ಯಾವುದೇ ಯೋಜನೆ ಟೆಂಡರ್​ಗೆ ಸಂಪುಟದಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ. ಆದರೆ, ಈ ಯೋಜನೆಗೆ ಅನುಮತಿ ಪಡೆದಿಲ್ಲ ಎಂದು ರೂಪಾ ಆರೋಪಿಸಿದ್ದಾರೆ.
ಟೆಂಡರ್ ಕಳ್ಳಾಟ : ಮಹಿಳಾ ಸುರಕ್ಷತೆಯ 1,067 ಕೋಟಿ ರೂ. ಯೋಜನೆ ಪೈಕಿ 700 ಕೋಟಿ ರೂ. ಕೇಂದ್ರ ಸರ್ಕಾರ ಹಾಗೂ 367 ಕೋಟಿ ರೂ. ಗಳನ್ನು ರಾಜ್ಯ ಸರ್ಕಾರ ನೀಡಲಿದೆ. ಆದರೆ, ಈ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ಸರ್ಕಾರ ಸಂಸ್ಥೆಯಾದ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಪ್ರಧಾನಿಗೆ ಈ ಕುರಿತು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ನಿರ್ಭಯಾ ಯೋಜನೆಯ ಹಣ ಬಳಕೆ ಕುರಿತಾಗಿ ಗೃಹ ಇಲಾಖೆಗೆ ತನಿಖೆ ನಡೆಸಿತ್ತು.
ಅಲ್ಲದೇ ಅಖಿಲ ಭಾರತ ಭ್ರಷ್ಟಾಚಾರ ವಿರೋಧಿ ಸಂಘದ ಶರದ್ ಆಜಾದ್ ಸಹ ರಾಜ್ಯ ಸರ್ಕಾರದ ಡಿಪಿಎಆರ್​ಗೆ ಈ ಕುರಿತು ದೂರು ಸಲ್ಲಿಸಿದ್ದರು. ಈ ವಿಚಾರ ರೂಪಾ ಗಮನಕ್ಕೆ ಬಂದು ಟೆಂಡರ್ ಪಡೆದಿದ್ದ ಕಂಪನಿ ಮುಖ್ಯಸ್ಥರಿಗೆ ಕರೆ ಮಾಡಿ ಪ್ರಶ್ನಿಸಿದ್ದರು.
ನಿರ್ಭಯಾ ನಿಧಿ ಮಹಿಳಾ ಸುರಕ್ಷತಾ ಯೋಜನೆಯಡಿ ಬೆಂಗಳೂರು ಸುರಕ್ಷಿತ ನಗರ ಕಾರ್ಯಕ್ರಮದಡಿ ಸಿಸಿ ಕ್ಯಾಮರಾ ಅಳವಡಿಸಲು ಟೆಂಡರ್ ಕರೆಯಲಾಗಿತ್ತು. ಬಿಇಎಲ್, ಎಲ್ ಅಂಡ್ ಟಿ, ಮ್ಯಾಟ್ರಿಕ್ಸ್ ಸೆಕ್ಯುರಿಟಿ ಹಾಗೂ ಸರ್ವೆಲೆನ್ಸ್ ಪ್ರೖೆ.ಲಿ. ಮತ್ತು ಎನ್​ಸಿಸಿ ಕಂಪನಿಗಳು ಬಿಡ್ಡಿಂಗ್​ನಲ್ಲಿ ಭಾಗವಹಿಸಿದ್ದವು. ಮ್ಯಾಟ್ರಿಕ್ಸ್ ಹಾಗೂ ಸರ್ವೆಲೆನ್ಸ್ ಮತ್ತು ಎನ್​ಸಿಸಿ ಕಂಪನಿಯ ನಿರ್ದೇಶಕರು ಒಬ್ಬರೇ ವ್ಯಕ್ತಿಯಾಗಿದ್ದರಿಂದ ಸ್ವಹಿತಾಸಕ್ತಿ ವಿಚಾರ ಕಂಡಿತ್ತು. ಈ ಕಂಪನಿಗಳು ಒಳ ಒಪ್ಪಂದ ಮಾಡಿ ಕೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಟೆಂಡರ್ ಕರಡು ನಿಯಮಕ್ಕೆ ಇದು ವಿರುದ್ಧವಾಗಿದೆ. ಮ್ಯಾಟ್ರಿಕ್ಸ್ ಕಂಪನಿ ಚೀನಾ ವಸ್ತು ಬಳಸಿ ಕಳಪೆ ಸಿಸಿ ಕ್ಯಾಮರಾ ಅಳವಡಿಸಲು ಮುಂದಾಗಿದೆ. ಇದು ಭದ್ರತೆಗೆ ಸಮಸ್ಯೆಯಾಗಬಹುದು. ಈ ಎರಡೂ ಕಂಪನಿಗಳನ್ನು ಟೆಂಡರ್ ಪ್ರಕ್ರಿಯೆಯಿಂದ ಹೊರಗಿಡುವಂತೆ ಕೇಳಿಕೊಂಡಿದ್ದೇವೆ ಎಂದು ಬಿಇಎಲ್ ಸಂಸ್ಥೆಯು ಪ್ರಧಾನಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿತ್ತು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
