ಬೆಂಗಳೂರು/ನವದೆಹಲಿ :ಪ್ರಧಾನಿ ಮೋದಿ ಆಕಾಶವಾಣಿಯಲ್ಲಿ ನಡೆಸುವ ‘ಮನ್​ ಕಿ ಬಾತ್​’ ಕಾರ್ಯಕ್ರಮದಲ್ಲಿ ಇಂದು ಬೆಂಗಳೂರು ರೈಲ್ವೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿರೀಶಾ ಗಜನಿ ಅವರೊಂದಿಗೆ ಸಂಭಾಷಣೆ ನಡೆಸಿದರು. ಆಕ್ಸಿಜನ್ ಎಕ್ಸ್​ಪ್ರೆಸ್​ನ ಲೋಕೋ ಪೈಲೆಟ್​ ಆಗಿ ಕರೊನಾ ರೋಗಿಗಳ ಚಿಕಿತ್ಸೆಗೆ ಅತ್ಯವಶ್ಯಕವಾದ ಮೆಡಿಕಲ್ ಆಕ್ಸಿಜನ್​ಅನ್ನು ವಿವಿಧ ಪ್ರದೇಶಗಳಿಗೆ ತ್ವರಿತವಾಗಿ ಪೂರೈಸುವ ಕೆಲಸದಲ್ಲಿ ತೊಡಗಿರುವ ಶಿರೀಶಾ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಮನ್​ ಕಿ ಬಾತ್​ನ 77ನೇ ಸಂಚಿಕೆಯಲ್ಲಿ ಕರೊನಾ ವಿರುದ್ಧದ ಹೋರಾಟದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವ ಹಲವು ಮುಂಚೂಣಿ ಕಾರ್ಯಕರ್ತರೊಂದಿಗೆ ಮೋದಿ ವಾರ್ತಾಲಾಪ ನಡೆಸಿದರು. ದೇಶದ ಸಂಕಷ್ಟ ಪರಿಸ್ಥಿತಿಯಲ್ಲಿ ಕರೊನಾ ವಾರಿಯರ್​ಗಳ ಮಹತ್ವಪೂರ್ಣ ಸೇವೆ ಎಲ್ಲರೂ ಹೆಮ್ಮೆ ಪಡುವಂಥದ್ದು ಎಂದರು.
ಇದನ್ನೂ ಓದಿ:ಮೆಡಿಕಲ್ ಆಕ್ಸಿಜನ್ ಉತ್ಪಾದನೆ 10 ಪಟ್ಟು ಹೆಚ್ಚಿದೆ : ಪ್ರಧಾನಿ ಮೋದಿ
“ಮಹಿಳಾ ಸಿಬ್ಬಂದಿಗಳನ್ನೇ ಹೊಂದಿರುವ ಆಕ್ಸಿಜನ್ ಎಕ್ಸ್​ಪ್ರೆಸ್​ಗೆ ನೀವು ಪೈಲೆಟ್​ ಆಗಿದ್ದೀರಿ. ನಾರಿಶಕ್ತಿಯ ಪ್ರತೀಕವಾಗಿ ಇಡೀ ದೇಶಕ್ಕೆ ನೀವು ಮಾದರಿಯಾಗಿದ್ದೀರಿ” ಎಂದು ಶಿರೀಷಾ ಅವರನ್ನು ಪ್ರಶಂಸಿಸಿದ ಪ್ರಧಾನಿ ಮೋದಿ, “ನಿಮ್ಮ ಸೇವೆಗೆ ಸ್ಫೂರ್ತಿ ಏನು?” ಎಂದು ಕೇಳಿದರು. ಆಕೆ ತಮ್ಮ ತಂದೆತಾಯಿಗಳೇ ತಮಗೆ ಸ್ಫೂರ್ತಿ. ತಮ್ಮ ಅಪ್ಪ, ಅಕ್ಕ ಕೂಡ ಸರ್ಕಾರಿ ನೌಕರರಾಗಿರುವುದು, ತಮಗೆ ಈ ಕ್ಷೇತ್ರ ಪ್ರವೇಶಿಸುವಂತೆ ಪ್ರೇರಣೆ ನೀಡಿತು ಎಂದರು.
“ಆಕ್ಸಿಜನ್ ಟ್ಯಾಂಕರ್​ಗಳನ್ನು ಸುರಕ್ಷಿತವಾಗಿ ಸಾಗಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವುದು ನನಗೆ ಸಂತೋಷ ನೀಡಿದೆ. ರೈಲ್ವೆ ಇಲಾಖೆಯು ಆಕ್ಸಿಜನ್ ಎಕ್ಸ್​ಪ್ರೆಸ್​ಗೆ ಗ್ರೀನ್ ಪಾಥ್​ ಒದಗಿಸಿದ್ದು, ಒಂದೂವರೆ ಗಂಟೆಯಲ್ಲಿ 125 ಕಿಲೋಮೀಟರ್​ಗಳಷ್ಟು ದೂರ ಕ್ರಮಿಸಲು ಸಾಧ್ಯವಾಗುತ್ತಿದೆ” ಎಂದು ಶಿರೀಶಾ ಹೇಳಿದರು.
https://twitter.com/drmsbc/status/1398900047731826688?s=20
“ನಮ್ಮ ಬೆಂಗಳೂರು ವಿಭಾಗದಲ್ಲಿ ಆಕ್ಸಿಜನ್ ಎಕ್ಸ್​ಪ್ರೆಸ್​ ರೈಲನ್ನು ಆರಂಭದಿಂದ ನಡೆಸುತ್ತಿರುವ ಶಿರೀಷಾ ಗಜನಿ ಅವರ ಕೊಡುಗೆಯನ್ನು ಪ್ರಧಾನಿಗಳು ಶ್ಲಾಘಿಸಿದ್ದಾರೆ. ಇದು ನಮ್ಮ ತಂಡಕ್ಕೆ ಹೆಮ್ಮೆಯ ಕ್ಷಣ” ಎಂದು ಬೆಂಗಳೂರು ವಿಭಾಗ ರೈಲ್ವೆ ಮ್ಯಾನೇಜರ್​ ಟ್ವೀಟ್ ಮಾಡಿದ್ದಾರೆ.
ಲಾಕ್​ಡೌನ್ ವಿಸ್ತರಣೆ : ಸಿಎಂ ಯಡಿಯೂರಪ್ಪ ಹೇಳಿದ್ದೇನು ?

ರಕ್ಷಿತ್ ಶೆಟ್ಟಿ ಚಿತ್ರ ‘777ಚಾರ್ಲಿ’ಯ ಟೀಸರ್​ ಬಿಡುಗಡೆಗೆ ಡೇಟ್​ ಫಿಕ್ಸ್

ರೆಮ್​ಡೆಸಿವಿರ್​ ಚುಚ್ಚುಮದ್ದು : ಬೇಡಿಕೆಗಿಂತ ಹೆಚ್ಚಿದ ಪೂರೈಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + six =
Remember me
