ಬೆಂಗಳೂರು:ಬ್ಯಾಂಕ್​ ನೌಕರನೊಬ್ಬ ಗ್ರಾಹಕರ ಖಾತೆಗೆ ಕನ್ನ ಹಾಕಿ 22 ಲಕ್ಷ ರೂಪಾಯಿ ಲಪಟಾಯಿಸಿದ್ದಾನೆ!
ಜೀವನ್​ಬಿಮಾನಗರದಲ್ಲಿ ವಾಸವಿದ್ದ ಶ್ರೀನಿವಾಸ್​ ಐಡಿಎಫ್​ಸಿ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದ. ಆಂಧ್ರಪ್ರದೇಶ ಮೂಲದ ಈತ ಕೆಲ ದಿನಗಳ ಹಿಂದೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಬೇರೊಂದು ಬ್ಯಾಂಕ್​ನಲ್ಲಿ ಕೆಲಸಕ್ಕೆ ಸೇರಿದ್ದ. ಆದರೆ, ಕೆಲಸದ ವೇಳೆ ಬ್ಯಾಂಕ್​ ಗ್ರಾಹಕರ ಮಾಹಿತಿ ತಿಳಿದುಕೊಂಡಿದ್ದ. ಗ್ರಾಹಕರ ಖಾತೆಯಲ್ಲಿದ್ದ 22 ಲಕ್ಷ ರೂ.ಗಳನ್ನು ಬೇರೊಂದು ಖಾತೆಗೆ ವರ್ಗಾಯಿಸಿಕೊಂಡು ತನಗೇನೂ ಗೊತ್ತಿಲ್ಲ ಎಂಬಂತೆ ಇದ್ದ.
ಇದನ್ನೂ ಓದಿರಿಗೋ ಕಳ್ಳ ಸಾಗಾಟ ತಡೆಗೆ ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದ ಜಿಲ್ಲಾಧಿಕಾರಿ ಸಿಂಧೂ ರೂಪೇಶ್​ಗೆ ಕೊಲೆ ಬೆದರಿಕೆ
ತನ್ನ ಗ್ರಾಹಕರೊಬ್ಬರ ಖಾತೆಗೆ ಕನ್ನ ಹಾಕಿರುವ ಬಗ್ಗೆ ಐಡಿಎಫ್​ಸಿ ಬ್ಯಾಂಕ್​ ಮ್ಯಾನೇಜರ್​ ರಾಜೇಶ್​ ನಂದಾ ದೂರು ನೀಡಿದ್ದರು. ಸಿಐಡಿ ಸೈಬರ್​ ಕ್ರೈಂ ಪೊಲೀಸರು ತನಿಖೆ ಕೈಗೊಂಡಾಗ ಗೊತ್ತಾಯ್ತು ಗ್ರಾಹಕರ ಖಾತೆಗೆ ಕನ್ನ ಹಾಕಿದ್ದ ಖದೀಮ ಆ ಬ್ಯಾಂಕ್​ನ ಮಾಜಿ ನೌಕರ ಶ್ರೀನಿವಾಸ್​ ಎಂದು.
ಬ್ಯಾಂಕ್​ ಗ್ರಾಹಕರ ಮೊಬೈಲ್​ ನಂಬರ್​ ನಿಷ್ಕ್ರಿಯಗೊಳಿಸಿ ತನ್ನ ಮೊಬೈಲ್​ ನಂಬರ್​ಗೆ ಖಾತೆ ಲಿಂಕ್​ ಮಾಡಿಸಿದ್ದ ಶ್ರೀನಿವಾಸ್​, ಆನ್​ಲೈನ್​ ಬ್ಯಾಂಕಿಂಗ್​ ಮೂಲಕ ಒಟಿಪಿ ಪಡೆದು ಅವರ ಖಾತೆಯಲ್ಲಿದ್ದ ಹಣವನ್ನು ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿರುವ ಎನ್​. ಶ್ರೀಕಲ್ಪನಾ ಎಂಬುವರ ಖಾತೆಗೆ ವರ್ಗಾಯಿಸಿದ್ದ. ಹಣ ವರ್ಗಾವಣೆ ಆಗಿರುವ ಕುರಿತು ಆ ಗ್ರಾಹಕ ಬ್ಯಾಂಕ್​ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದರು. ಆರೋಪಿ ಶ್ರೀನಿವಾಸ್​ (39)ನನ್ನು ಪೊಲೀಸರು ಬಂಧಿಸಿದ್ದಾರೆ.
ರಾತ್ರಿಯಿಡೀ ಪರದಾಡಿದ ನಟಿ ಸುಧಾರಾಣಿ, ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 3 =
Remember me
