ಬೆಂಗಳೂರು:ಹಣ ಡಬ್ಲಿಂಗ್ ಆಸೆಗೆ ಬಿದ್ದು ಬ್ಯಾಂಕ್ ಆಫ್​ ಬರೋಡಾಕ್ಕೆ ಸೇರಿದ 1 ಕೋಟಿ ರೂ. ದುರ್ಬಳಕೆ ಮಾಡಿದ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರು ಯಲಹಂಕ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಬ್ಯಾಂಕ್ ಆಫ್​ ಬರೋಡಾ ಶಾಖೆಯ ಮ್ಯಾನೇಜರ್ ಅರುಣ್ ವೀರಮಲ್ಲ, ಕಮಿಷನ್ ಏಜೆಂಟ್ ಬಸವರಾಜ್, ಬ್ಯಾಂಕ್ ಜವಾನ ರಾಮಕೃಷ್ಣ ಹಾಗೂ ಖಾಸಗಿ ವ್ಯಕ್ತಿ ಇಮ್ತಿಯಾಜ್ ಬಂಧಿತರು.
ಸಿದ್ದಯ್ಯ ರಸ್ತೆಯಲ್ಲಿ ಬ್ಯಾಂಕ್ ಆಫ್​ ಬರೋಡಾದ ಕರೆನ್ಸಿ ಚೆಸ್ಟ್ (ನಿಧಿ)ಶಾಖೆ ಇದೆ. ಜ.12ರಂದು ಬ್ಯಾಂಕ್ ಮ್ಯಾನೇಜರ್ ಅರುಣ್ ವೀರಮಲ್ಲಯ್ಯ ತಮ್ಮ ಬ್ಯಾಂಕ್ ಶಾಖೆಯ ಕಾರ್ಯ ಚಟುವಟಿಕೆಗಳಿಗಾಗಿ ಸಿದ್ದಯ್ಯ ರಸ್ತೆಯಲ್ಲಿರುವ ಕರೆನ್ಸಿ ಚೆಸ್ಟ್ ಶಾಖೆಗೆ ಹೋಗಿ 1 ಕೋಟಿ ರೂ. ನೀಡುವಂತೆ ಮನವಿ ಸಲ್ಲಿಸಿದ್ದರು. ನಂತರ ಕರೆನ್ಸಿ ಚೆಸ್ಟ್ ಶಾಖೆಯಿಂದ 1 ಕೋಟಿ ರೂ. ತೆಗೆದುಕೊಂಡು ಆರ್.ಆರ್. ನಗರದಲ್ಲಿರುವ ತಮ್ಮ ಬ್ಯಾಂಕ್‌ಗೆ ಬಂದಿದ್ದರು. ಆದರೆ, ಬ್ಯಾಂಕ್‌ಗೆ ಹಣ ಜಮಾ ಮಾಡದೇ ರಾಮಕೃಷ್ಣ ಎಂಬಾತನ ಜತೆ ಹೊರಟು ಹೋಗಿದ್ದರು. ಸಂಜೆ ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕರಾದ ರಮ್ಯಾ ಶೆಟ್ಟಿಗೆ ಕರೆ ಮಾಡಿದ ಅರುಣ್, ‘ನಾನು ಶಾಖೆಗೆ 1 ಕೋಟಿ ರೂ. ತೆಗೆದುಕೊಂಡು ಬರುತ್ತಿದ್ದೇನೆ. ನೀವು ಹಣವನ್ನು ಡೆಪಾಜಿಟ್ ಮಾಡಿದ ಹಾಗೆ ನಗದು ನಮೂದು ಪಾಸ್ ಮಾಡಿ’ ಎಂದು ಸೂಚಿಸಿದ್ದರು. ಇದರಿಂದ ಅನುಮಾನಗೊಂಡ ರಮ್ಯಾ, ಏನೋ ಅಕ್ರಮ ನಡೆದಿದೆ ಎಂದುಕೊಂಡು ಈ ವಿಚಾರವನ್ನು ಬ್ಯಾಂಕ್ ಆಫ್​ ಬರೋಡಾ ಬೆಂಗಳೂರು ದಕ್ಷಿಣ ವಿಭಾಗದ ರೀಜನಲ್ ಮ್ಯಾನೇಜರ್ ರಿತೇಶ್‌ ಕುಮಾರ್ ಗಮನಕ್ಕೆ ತಂದಿದ್ದರು. ಅರುಣ್ ಸಂಜೆವರೆಗೂ ಬ್ಯಾಂಕ್‌ಗೆ ಬಂದಿರಲಿಲ್ಲ.
ಇದನ್ನೂ ಓದಿ:ತನ್ನನ್ನು ಭೇಟಿಯಾಗಲು ಮಗಳೊಂದಿಗೆ ಬಂದವಳನ್ನು ಅವನು ಚುಚ್ಚಿ ಚುಚ್ಚಿ ಕೊಂದ; ಗಂಡ-ಹೆಂಡತಿ-ಮಗಳು ಮತ್ತು ಅವನು..!!!
ರಿತೇಶ್ ಈ ಕುರಿತು ಪರಿಶೀಲಿಸಿದಾಗ, ಅರುಣ್ ಚೆಸ್ಟ್ ನಿಧಿಯಿಂದ ಆರ್‌ಆರ್‌ನಗರ ಶಾಖೆಯ ಪರವಾಗಿ 1 ಕೋಟಿ ರೂ. ತೆಗೆದುಕೊಂಡು ಬ್ಯಾಂಕ್‌ಗೆ ಜಮೆ ಮಾಡದೆ ಇರುವುದು ದೃಢಪಟ್ಟಿತ್ತು. ಸಂಜೆ ಬ್ಯಾಂಕ್‌ಗೆ ಕರೆ ಮಾಡಿದ ಅರುಣ್, ತಾನು ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿರುವುದಾಗಿ ತಿಳಿಸಿದ್ದರು. ‘ಬ್ಯಾಂಕ್‌ಗೆ ಜಮೆ ಮಾಡಲೆಂದು ಕರೆನ್ಸಿ ಚೆಸ್ಟ್‌ನಿಂದ 1 ಕೋಟಿ ರೂ. ತರುತ್ತಿದ್ದಾಗ ಯಾರೋ ದರೋಡೆ ಮಾಡಿದ್ದು, ಎಲ್ಲ ಹಣವನ್ನೂ ಕಳೆದುಕೊಂಡಿರುವುದಾಗಿ ಕತೆ ಕಟ್ಟಿದ್ದರು. ಅರುಣ್ ಗೊಂದಲದ ಹೇಳಿಕೆ ನೀಡುತ್ತಿರುವುದನ್ನು ಕೇಳಿ ಅನುಮಾನಗೊಂಡ ರಿತೇಶ್ ಈ ಕುರಿತು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ವಿಚಾರಣೆ ವೇಳೆ ಸತ್ಯ ಬಯಲು:ಪೊಲೀಸರು ಅರುಣ್ ಹಾಗೂ ರಾಮಕೃಷ್ಣನನ್ನು ಕರೆಸಿ ವಿಚಾರಣೆ ನಡೆಸಿದಾಗ ನಿಜ ಸಂಗತಿ ಬಯಲಾಯಿತು. ಕೆಲ ದಿನಗಳ ಹಿಂದೆ ಮಧ್ಯವರ್ತಿ ಬಸವರಾಜ್ ಮೂಲಕ ಅರುಣ್‌ಗೆ ಇಮ್ತಿಯಾಜ್ ಎಂಬಾತನ ಪರಿಚಯವಾಗಿತ್ತು. 1 ಕೋಟಿ ರೂ. ನೀಡಿದರೆ ಕೆಲವೇ ಗಂಟೆಗಳಲ್ಲಿ 2 ಕೋಟಿ ರೂ. ಕಪ್ಪುಹಣ ಕೊಡುತ್ತೇನೆ ಎಂದು ಇಮ್ತಿಯಾಜ್ ನಯವಾಗಿ ನಂಬಿಸಿದ್ದ. ಅದರಲ್ಲಿ ಬಸವರಾಜ್‌ಗೂ ಕಮಿಷನ್ ಕೊಡುವುದಾಗಿ ಹೇಳಿದ್ದ. ಈತನ ಮಾತನ್ನು ನಂಬಿದ ಅರುಣ್ ಕಡಿಮೆ ಅವಧಿಯಲ್ಲಿ ಕೋಟಿ ರೂ. ಗಳಿಸಬಹುದು ಎಂದುಕೊಂಡಿದ್ದರು. ಅದರಂತೆ ಕರೆನ್ಸಿ ಚೆಸ್ಟ್‌ನಿಂದ 1 ಕೋಟಿ ರೂ. ಪಡೆದು ಇಮ್ತಿಯಾಜ್‌ಗೆ ಕೊಟ್ಟಿದ್ದರು. ಆದರೆ, ಇಮ್ತಿಯಾಜ್ ಹಣ ಹಿಂದಿರುಗಿಸದೆ ಮೋಸ ಮಾಡಿದಾಗ ದರೋಡೆ ಕತೆ ಕಟ್ಟಿದ್ದರು. ಈಗ ಅರುಣ್ ಪರಿಸ್ಥಿತಿ ‘ಅತ್ತ ದುಡ್ಡೂ ಸಿಗಲಿಲ್ಲ, ಇತ್ತ ಕೆಲಸವೂ ಹೋಯಿತು’ ಎನ್ನುವಂತಾಗಿದೆ.
ಒಬ್ಬನಿಗೆ ಒಂದೇ ಸಲಕ್ಕೆ ಅಷ್ಟೆಲ್ಲ ಮಾಡಲಿಕ್ಕೆ ಸಾಧ್ಯವಿಲ್ಲ; ಅತ್ಯಾಚಾರ ಆರೋಪಿಯನ್ನು ಖುಲಾಸೆಗೊಳಿಸಿದ ಹೈಕೋರ್ಟ್​ ಅಭಿಪ್ರಾಯವಿದು…

ಈ ಸಲ ಶಾಲೆಗೆ ಡೊನೇಷನ್​ ನೀಡಬೇಡಿ, ಫೀಸು ಕೂಡ ಪೂರ್ತಿ ಕೊಡಬೇಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
