ಬೆಂಗಳೂರು:ಫೋಟೊದಲ್ಲಿ ಅಮಾಯಕಿಯ ಹಾಗೆ ಪೋಸ್​ ನೀಡುತ್ತಿರುವ ಈಕೆ, ತಾನು ಮ್ಯಾನೆಜರ್​ ಆಗಿ ಕೆಲಸ ಮಾಡುತ್ತಿದ್ದ ಬ್ಯಾಂಕ್​ನಿಂದಲೇ ಕೋಟಿ ಕೋಟಿ ಹಣ ಕದ್ದಿದ್ದಾಳೆ. ಸಜಿಲಾ ಗುರುಮೂರ್ತಿ ಎನ್ನುವಾಕೆ ಬಂಧಿತ ಆರೋಪಿ.
ಈಕೆ ಮಿಷನ್ ರಸ್ತೆಯ ಐಡಿಬಿಐ ಬ್ಯಾಂಕ್​ನ ಮ್ಯಾನೇಜರ್ ಆಗಿದ್ದಳು. ತನ್ನ ಹುದ್ದೆಯ ಲಾಭವನ್ನು ಬಳಸಿಕೊಂಡು ಈಕೆ, ಗ್ರಾಹಕರ ಅನುಮತಿ ಇಲ್ಲದೆ 4.92 ಕೋಟಿ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾಳೆ. ಈ ಹಿನ್ನೆಲೆಯಲ್ಲಿ ಈಗ ಆಕೆಯನ್ನು ಬಂಧಿಸಲಾಗಿದೆ.
ಆರೋಪಿತೆ ಗ್ರಾಹಕರ ಅನುಮತಿ ಇಲ್ಲದೆ, ಅವರ ಖಾತೆಯಿಂದ ಹಣ ತೆಗೆದು ವಿಮಾ ಬಾಂಡ್​ಗಳ‌ಮೇಲೆ ಹೂಡಿದ್ದಾರೆ. ಈ ಹಿನ್ನಲೆಯಲ್ಲಿ ಆರೋಪಿತೆಯನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿತೆ ಮೇಲೆ ಉಪ್ಪಾರಪೇಟೆ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು ಗಾಂಧಿನಗರದ ಐಡಿಬಿಐ ಬ್ರಾಂಚ್​ನಲ್ಲೂ ಕೋಟಿ ಕೋಟಿ ದೋಖಾ ಮಾಡಿದ್ದಾಳೆ ಎನ್ನುವ ಆರೋಪ ಕೇಳಿಬರುತ್ತಿದೆ.
ಈ ಹಿನ್ನೆಲೆ ಉಪ್ಪಾರಪೇಟೆ ಪೊಲೀಸರು ಆರೋಪಿತೆಯನ್ನ ವಶಕ್ಕೆ ಪಡೆದಿದ್ದು ಸದ್ಯ ಆರೋಪಿತೆಯಿಂದ 23 ಲಕ್ಷ ಮೌಲ್ಯದ ವಿಮಾ ಬಾಂಡ್ ವಶಪಡಿಸಿಕೊಂಡಿದ್ದಾರೆ. ಸದ್ಯಕ್ಕೆ ಪೊಲೀಸರು ಈಕೆ ಎಲ್ಲೆಲ್ಲಿ ವಂಚನೆ ಮಾಡಿದ್ದಾಳೆ ಎನ್ನುವುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
