ಬಾಗಲಕೋಟೆ:ಮಹಿಳೆಯೊಬ್ಬರು ಖಾಸಗಿ ಬ್ಯಾಂಕ್​ನಿಂದ ಪಡೆದುಕೊಂಡ ಹಣವನ್ನು ಹಿಂತಿರುಗಿಸಲು ವಿಫಲವಾಗಿದ್ದಾರೆ. ಈ ವಿಚಾರವನ್ನು ಆಕೆಯ ಮನೆಯ ಬಾಗಿಲಿಗೆ ತಂದ ಬ್ಯಾಂಕ್​ನ ರಿಕವರಿ ಸಿಬ್ಬಂದಿ ಈ ಕೂಡಲೇ ಹಣ ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು, ತೀವ್ರ ವಾಗ್ವಾದಕ್ಕೆ ತಿರುಗಿದೆ. ಏಕಾಏಕಿ ಮಹಿಳೆಯ ಕಪಾಳಕ್ಕೆ ಹೊಡೆದ ಆತ, ನಂತರದಲ್ಲಿ ಜನರು ಸೇರುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಇದನ್ನೂ ಓದಿ:ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳ! ಜೈಲಿನಲ್ಲೇ ಅರವಿಂದ್ ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡಲಾಗಿದೆ: ಎಎಪಿ
ಸಾಲ ವಸೂಲಿಗೆ ಬಂದ ಖಾಸಗಿ ಬ್ಯಾಂಕ್ ರಿಕವರಿ ಸಿಬ್ಬಂದಿ, ಮಹಿಳೆ ಸಾಲ ಕಟ್ಟದ ಕಾರಣ ಆಕೆಯ ಕಪಾಳಕ್ಕೆ ಹೊಡೆದು ದುರ್ವರ್ತನೆ ತೋರಿದ್ದಾನೆ. ಮಹಿಳೆಯನ್ನು ರುಕ್ಸಾನಾ ಎಂದು ಹೇಳಲಾಗಿದ್ದು, ಬ್ಯಾಂಕ್ ರಿಕವರಿ ಸಿಬ್ಬಂದಿಯನ್ನು ರಾಜೇಸಾಬ್ ಎಂದು ಗುರುತಿಸಲಾಗಿದೆ. ಘಟನೆ ಬಾಗಲಕೋಟೆಯ ಜಮಖಂಡಿ ನಗರದ ಜೋಗಿಮಡ್ಡಿ ಕಾಲೋನಿಯಲ್ಲಿ ವರದಿಯಾಗಿದೆ.
ವಸೂಲಿಯ ಜಟಾಪಟಿ ವೇಳೆ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ಆಕೆಯ ಮೊಬೈಲ್‌ ಕಸಿದುಕೊಂಡಿದ್ದಾನೆ. ಹಣ ಕೊಟ್ಟರೆ ಮಾತ್ರ ಮೊಬೈಲ್ ಕೊಡೋದಾಗಿ ಬ್ಯಾಂಕ್ ಸಿಬ್ಬಂದಿ ಎಚ್ಚರಿಸಿದ್ದಾನೆ. ಘಟನೆ ಸೋಮವಾರ ಸಂಭವಿಸಿದ್ದೇ ಆದರೂ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
