ರಾಜ್ಯ ಸರ್ಕಾರ ‘ಕನ್ನಡ ಕಾಯಕ ವರ್ಷ’ ಎಂದು ಘೋಷಿಸಿ, ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡದ ಬಳಕೆ ಹೆಚ್ಚುವಂತೆ ಮಾಡಲು ವಿವಿಧ ಸಂಘಸಂಸ್ಥೆಗಳು ಅವುಗಳದ್ದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತಿವೆ. ಆಡಳಿತದಲ್ಲಿ, ಜನಬಳಕೆಯಲ್ಲಿ, ವ್ಯವಹಾರಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ಸಿಗಲೇಬೇಕು. ಹೀಗೆ ಬೇರೆ ಬೇರೆ ರಂಗಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸುವ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ಪರಿಣಾಮಕಾರಿಯಾಗಿ ನಡೆಯುತ್ತಿವೆ. ಅಲ್ಲದೆ, ಕರ್ನಾಟಕ ಅಳವಡಿಸಿಕೊಂಡಿರುವ ತ್ರಿಭಾಷಾ ಸೂತ್ರದ ಅನ್ವಯ, ರಾಜ್ಯದಲ್ಲಿ ಕೆಲಸ ಮಾಡುವ ಕೇಂದ್ರ, ರಾಜ್ಯ ಸರ್ಕಾರಗಳ ಇಲಾಖೆ, ಉದ್ಯಮಗಳು, ಖಾಸಗಿ ಉದ್ಯಮ ಸಂಸ್ಥೆಗಳು ಕನ್ನಡಕ್ಕೆ ಅಗ್ರಸ್ಥಾನ ನೀಡಬೇಕು. ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ಸೇವೆ ಹಾಗೂ ಜಾಹೀರಾತನ್ನು ನೀಡಬೇಕು ಎಂಬುದು ಕಾರ್ವಿುಕ ಇಲಾಖೆ ಕಾನೂನಿನಲ್ಲಿಯೂ ಇದೆ. ಆದರೆ, ಗ್ರಾಹಕರೊಂದಿಗೆ ಕನ್ನಡದಲ್ಲಿ ವ್ಯವಹರಿಸದ ಬ್ಯಾಂಕುಗಳು ಈಗ ಎಟಿಎಂನಿಂದಲೂ ಕನ್ನಡ ಬಳಕೆಯನ್ನೇ ಕೈಬಿಟ್ಟಿವೆ.
ಈ ಕುರಿತಂತೆ ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿದ ಬಳಿಕ, ಬ್ಯಾಂಕುಗಳ ಧೋರಣೆ ವಿರುದ್ಧ ಜನರು ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ‘ಸ್ಮಾರ್ಟ್​ಫೋನ್​ಗಳು ಇಲ್ಲದಿರುವ, ಎಟಿಎಂ ನೆಚ್ಚಿಕೊಂಡಿರುವ, ಕನ್ನಡ ಮಾತ್ರವೇ ಬರುವ ಹಳ್ಳಿಪ್ರದೇಶದ ಜನರು ಏನು ಮಾಡಬೇಕು?’ ಎಂದು ಪ್ರಶ್ನಿಸಿದ್ದಾರೆ. ರಾಜ್ಯದ ಎಲ್ಲ ಎಟಿಎಂಗಳಲ್ಲಿ ಕನ್ನಡವನ್ನು ಕೂಡಲೇ ಅಳವಡಿಸುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬ್ಯಾಂಕುಗಳಿಗೆ ಸೂಚನೆ ನೀಡಿದೆ. ರಾಜ್ಯದ ಮಾರ್ಗದರ್ಶಿ(ಲೀಡ್) ಬ್ಯಾಂಕ್​ಗೆ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಪತ್ರ ಬರೆದು, ಸೂಕ್ತ ಕ್ರಮಕ್ಕಾಗಿ ಸೂಚಿಸಿದ್ದಾರೆ. ನ.11ರಂದು ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯನ್ನು ಆಯೋಜಿಸಿ ಕನ್ನಡ ಬಳಕೆ ಕುರಿತು ನಿರ್ದೇಶನ ನೀಡಿದ್ದರೂ, ಪರಿಸ್ಥಿತಿ ಬದಲಾಗಿಲ್ಲ. ಬ್ಯಾಂಕುಗಳಲ್ಲಿ ಕನ್ನಡದಲ್ಲಿ ಮಾಹಿತಿ, ಎಟಿಎಂನಲ್ಲಿ ಕನ್ನಡದ ಆಯ್ಕೆ ನೀಡುವಂತೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅನ್ಯಭಾಷೆ ತಿಳಿಯದ ಅದೆಷ್ಟೋ ಕನ್ನಡಿಗರು ಎಟಿಎಂ ಬಳಕೆಗೆ ಇತರರ ಸಹಾಯ ಪಡೆಯಬೇಕಾದ ಪರಿಸ್ಥಿತಿ ಇದೆ. ಇದರಿಂದ ವಂಚನೆಯ ಭೀತಿಯೂ ಇಮ್ಮಡಿಗೊಂಡಿದೆ. ಬ್ಯಾಂಕುಗಳು ಬರೀ ವಾಣಿಜ್ಯ ಹಿತಾಸಕ್ತಿಗಳ ಕಡೆಗೆ ಗಮನ ಹರಿಸಿದರೆ ಸಾಕಾಗುವುದಿಲ್ಲ. ಆಯಾ ನೆಲದ ಕಾನೂನು, ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು.
ಕನ್ನಡದಲ್ಲಿ ಸೇವೆ ಪಡೆಯುವುದು ಗ್ರಾಹಕರ ಹಕ್ಕು ಕೂಡ ಆಗಿದೆ ಎಂಬುದನ್ನು ಬ್ಯಾಂಕುಗಳು ಅರ್ಥ ಮಾಡಿಕೊಳ್ಳಬೇಕು. ಯಾವುದೋ ಸಲ್ಲದ ನೆಪ ಹೇಳಿ ಸಮಸ್ಯೆಯನ್ನು ನಿರ್ಲಕ್ಷಿಸಬಾರದು. ಗ್ರಾಮೀಣ ಪ್ರದೇಶಗಳ ಬ್ಯಾಂಕುಗಳಲ್ಲಿ ಕನ್ನಡ ಗೊತ್ತಿರದ ಸಿಬ್ಬಂದಿಯನ್ನೇ ಹೆಚ್ಚು ನೇಮಿಸಿರುವುದರಿಂದ ಅಲ್ಲಿನ ಜನರು ವಹಿವಾಟು ನಡೆಸಲು ಸಮಸ್ಯೆ ಎದುರಿಸುವಂತಾಗಿದೆ. ಅದನ್ನು ಪರಿಹರಿಸುವುದನ್ನು ಬಿಟ್ಟು, ಈಗ ಎಟಿಎಂಗಳಲ್ಲೂ ಕನ್ನಡ ತೆಗೆದು ಹಾಕುವ ಮೂಲಕ, ಮತ್ತೊಂದು ಸಮಸ್ಯೆ ಸೃಷ್ಟಿಸಿರುವುದು ಸರಿಯಲ್ಲ. ಜನರಿಗೆ ಸುಲಭವಾಗುವಂಥ ಸೇವೆಯನ್ನು ಬ್ಯಾಂಕುಗಳು ಒದಗಿಸಬೇಕೆ ಹೊರತು ಅವರಿಗೆ ಅನಗತ್ಯ ತೊಂದರೆ ಉಂಟು ಮಾಡಬಾರದು.
ಗ್ರಾಹಕರ ಹಿತರಕ್ಷಣೆ, ಉತ್ತಮ ಸೇವೆ ಮತ್ತು ಆಯಾ ರಾಜ್ಯದ ಕಾನೂನುಗಳ ಸೂಕ್ತ ಅನುಷ್ಠಾನ ಆದ್ಯತೆ ಆಗಬೇಕು. ಈ ನಿಟ್ಟಿನಲ್ಲಿ ಎದುರಾಗಿರುವ ತೊಡಕುಗಳನ್ನು ಅಥವಾ ಕೊರತೆಗಳನ್ನು ನಿವಾರಿಸಿಕೊಳ್ಳಬೇಕು. ತಂತ್ರಜ್ಞಾನದ ಸಹಾಯದಿಂದ ಕನ್ನಡ ಭಾಷೆಯ ಆಯ್ಕೆಯನ್ನು ಎಟಿಎಂಗಳಲ್ಲಿ ಸುಲಭವಾಗಿ ಅಳವಡಿಸಬಹುದು. ಆದರೆ, ನಿರ್ಲಕ್ಷ್ಯ ಧೋರಣೆಯ ಪರಿಣಾಮ ಅದು ಸಾಧ್ಯವಾಗಿಲ್ಲ. ಇನ್ನಾದರೂ ಬ್ಯಾಂಕುಗಳು ಎಚ್ಚೆತ್ತುಕೊಂಡು ಪ್ರಮಾದವನ್ನು ಸರಿಪಡಿಸಬೇಕು ಮತ್ತು ಮುಂದೆ ಕನ್ನಡದ ಬಳಕೆಯನ್ನು ಕಾಳಜಿಯಿಂದ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಈ ಕುರಿತಂತೆ ಸರ್ಕಾರ ಕೂಡ ಬ್ಯಾಂಕ್​ಗಳಿಗೆ ಸ್ಪಷ್ಟ ನಿರ್ದೇಶನ ನೀಡಲಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
