ಬೆಂಗಳೂರು:ತಂಬಾಕು ಸೇವನೆ ಹಾಗೂ ಜಾಹೀರಾತಿಗೆ ಕಡಿವಾಣವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ತಂಬಾಕು ಸೇವನೆ ಹಾಗೂ ಮಾರಾಟದ ಬಗ್ಗೆ ರಾಜಾರೋಷವಾಗಿ ಜಾಹೀರಾತು ನೀಡಲಾಗುತ್ತಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಹಾಗೂ ಕನ್ಸ್ಯೂಮರ್ ಲಾ ಆ್ಯಂಡ್​ ಪ್ರಾಕ್ಟಿಸಸ್ ಸಹಯೋಗದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವೆರಿ ಸಿಸ್ಟಮ್ಸ್ (ಇಎನ್‌ಡಿಎಸ್) ಮತ್ತು ಹೀಟೆಡ್ ತಂಬಾಕು ಪದಾರ್ಥ ಇವುಗಳ ಮೇಲೆ ಕೇಂದ್ರ ಸರ್ಕಾರ 2019ರಲ್ಲೇ ಕಾನೂನಾತ್ಮಕವಾಗಿ ನಿಷೇಧ ಹೇರಿದೆ. ಈ ಬಗ್ಗೆ ಎಲ್ಲಿಯೂ ಜಾಹೀರಾತು ನೀಡುವಂತಿಲ್ಲ. ಆದರೆ, ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ಟ್ವಿಟ್ಟರ್, ಇನ್​ಸ್ಟಾಗ್ರಾಂ, ಟೆಲಿಗ್ರಾಂ ಮುಂತಾದವುಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ ಎನ್ನುವುದನ್ನು ಈ ಸಮೀಕ್ಷೆ ಕಂಡುಕೊಂಡಿದೆ.
ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಆನ್‌ಲೈನ್ ಮೂಲಕ ಈ ಸಮೀಕ್ಷೆ ನಡೆಸಲಾಗಿದೆ. ಒಟ್ಟು 23 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳ ಬಾರ್ ಅಸೋಸಿಯೇಷನ್‌ನ ಒಟ್ಟು 4,049 ವಿದ್ಯಾರ್ಥಿಗಳನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಶೇ.46 ಪುರುಷರು ಹಾಗೂ ಶೇ.51 ಮಹಿಳೆಯರು ಈ ಅಧ್ಯಯನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಯೂಕ್ರೇನ್​ನಲ್ಲಿ ಸಿಲುಕಿಕೊಂಡವರಿಗೆ ಮತ್ತೊಂದು ಆತಂಕ; ತಕ್ಷಣವೇ ಖಾರ್ಕಿವ್​ನಿಂದ ತೆರಳಲು ಸೂಚನೆ!
ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಶೇ.38.1ರಷ್ಟು ನಿಷೇಧಿತ ತಂಬಾಕು ಸೇವನೆ ಮಾರಾಟದಲ್ಲಿದ್ದು, ಕರ್ನಾಟಕವೇ ಮುಂಚೂಣಿ ರಾಜ್ಯವಾಗಿದೆ. ಮಹಾರಾಷ್ಟ್ರ ಶೇ.12.4, ತಮಿಳುನಾಡು ಶೇ.9.3, ಉತ್ತರ ಪ್ರದೇಶ ಶೇ.6.7 ಹಾಗೂ ಕೇರಳ ಶೇ.6.5 ಪ್ರಮಾಣದಲ್ಲಿ ನಿಷೇಧಿತ ತಂಬಾಕು ಚಾಲ್ತಿಯಲ್ಲಿದೆ.
ಭಾರತದಲ್ಲಿ ಇ-ಸಿಗರೇಟುಗಳನ್ನು ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್​ಗಳ ಮೂಲಕ ಹೆಚ್ಚಿನ ಜಾಹೀರಾತು ನೀಡಲಾಗುತ್ತಿದೆ. ನಿಷೇಧಿತ ಇ-ಸಿಗರೇಟ್ ಕುರಿತು ಹೆಚ್ಚಾಗಿ ಟೆಲಿಗ್ರಾಮ್​ನಲ್ಲಿ ಜಾಹೀರಾತು ನೀಡಲಾಗುತ್ತಿದೆ ಎಂದು ಶೇ.60 ಮಂದಿ ಹೇಳಿದ್ದಾರೆ. ಉಳಿದಂತೆ ವಾಟ್ಸ್ಆ್ಯಪ್‌ನಲ್ಲಿ ಶೇ.22.6, ಫೇಸ್‌ಬುಕ್‌ನಲ್ಲಿ ಶೇ.17.3, ಟಿಕ್‌ಟಾಕ್‌ನಲ್ಲಿ ಶೇ.14.3 ಹಾಗೂ ಟ್ವಿಟರ್‌ನಲ್ಲಿ ಶೇ.6.8 ಜಾಹಿರಾತು ಕಂಡಿರುವುದಾಗಿ ಸಮೀಕ್ಷೆಗೆ ಒಳಪಟ್ಟವರು ಅಭಿಪ್ರಾಯ ಪಟ್ಟಿದ್ದಾರೆ ಎಂದು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಪ್ರೊ. ಅಶೋಕ್ ಪಾಟೀಲ್ ತಿಳಿಸಿದ್ದಾರೆ. ನಿಷೇಧದ ಬಳಿಕವೂ ಯುವ ಜನತೆಯನ್ನು ದಾರಿ ತಪ್ಪಿಸಲು ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ನೀಡುವವರ ವಿರುದ್ಧ ಸರ್ಕಾರ ಹದ್ದಿನ ಕಣ್ಣಿಟ್ಟು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ರಿಷಬ್​ ಶೆಟ್ಟಿ ಬೇಸರ!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:6 + 9 =
Remember me
