ಬೆಂಗಳೂರು :ಕರೊನಾ ಸೋಂಕಿತರಿಗೆ ಚಿಕಿತ್ಸೆ ಕೊಡುವ ಸೇವೆಯಲ್ಲಿ ಹೆಚ್ಚು ಒತ್ತು ಕೊಡಲಾಗಿತ್ತು. ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಸಂಪತ್‌ರಾಜ್ ಯಾವಾಗ ಡಿಸ್ಚಾರ್ಜ್ ಆಗಿದ್ದಾರೆ ಎಂಬುದು ಎಂಬುದು ಗೊತ್ತಾಗಲಿಲ್ಲ ಎಂದು ಬ್ಯಾಪಿಸ್ಟ್ ಆಸ್ಪತ್ರೆ ವೈದ್ಯರು ಸಿಸಿಬಿಗೆ ಸ್ಪಷ್ಟನೆ ನೀಡಿದ್ದಾರೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸಂಪತ್ ರಾಜ್, ಕರೊನಾ ಸೋಂಕಿಗೆ ಚಿಕಿತ್ಸೆ ಪಡೆಯಲು ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಸಿಸಿಬಿ ಪೊಲೀಸರು, ಮಾಜಿ ಮೇಯರ್ ಡಿಸ್ಚಾರ್ಜ್ ಆಗುವ ಮಾಹಿತಿ ನೀಡುವಂತೆ ನೋಟಿಸ್ ಜಾರಿ ಮಾಡಿದ್ದರು.
ಇದನ್ನೂ ಓದಿ:ಕಾಲಿಗೆ ಗುಂಡು ಹಾರಿಸಿ ರೌಡಿ ಶೀಟರ್ ನನ್ನು ಬಂಧಿಸಿದ ಪೊಲೀಸರು
ಪೊಲೀಸರಿಗೆ ಗಮನಕ್ಕೆ ತರದೆ ಸಂಪತ್ ರಾಜ್ ಡಿಸ್ಚಾರ್ಜ್ ಮಾಡಿದ್ದರು. ಇತ್ತ ವಿಚಾರಣೆಗೆಂದು ತೆರಳಿದ ಸಿಸಿಬಿ ಪೊಲೀಸರು, ಸಂಪತ್ ರಾಜ್ ಇಲ್ಲದಿದ್ದಾಗ ಆಸ್ಪತ್ರೆಗೆ ವೈದ್ಯರಿಗೆ ನೋಟಿಸ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಆಸ್ಪತ್ರೆ ವೈದ್ಯರು ಮತ್ತು ಅಧಿಕಾರಿಗಳು ಬಂದು ತನಿಖಾಧಿಕಾರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಗುಲ್ಟಿ ಈರುಳ್ಳಿ ಈಗ ಕೆಜಿಗೆ 50 ರೂಪಾಯಿ!
ವೈದ್ಯರು, ‘ತಮಗೆ ಸಂಪತ್ ರಾಜ್ ಡಿಸ್ಚಾರ್ಜ್ ಆಗಿರುವ ವಿಚಾರ ಗೊತ್ತಾಗಲಿಲ್ಲ. ಕರೊನಾ ಸೋಂಕಿತರ ಶ್ರುಶೂಷೆಯಲ್ಲಿ ತೊಡಗಿಕೊಂಡಿದ್ದೇವು. ಗಡಿಬಿಡಿಯಲ್ಲಿ ಸಂಪತ್ ರಾಜ್ ಬಗ್ಗೆ ಹೆಚ್ಚು ನಿಗಾವಹಿಸಲು ಸಾಧ್ಯವಾಗಲಿಲ್ಲ ಎಂದು ಸಿಸಿಬಿ ಎಸಿಪಿ ಬಿ.ಆರ್. ವೇಣುಗೋಪಾಲ್ ಮುಂದೆ ವೈದ್ಯರು ನಮ್ಮಿಂದ ತಪ್ಪಾಗಿದೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಗೆ ಬಂತು ಈಜಿಪ್ಟ್ ಉಳ್ಳಾಗಡ್ಡಿ
ಇದರಿಂದ ಗರಂ ಆದ ತನಿಖಾಧಿಕಾರಿಗಳು ಈ ತಪ್ಪಿನಿಂದ ತನಿಖೆಗೆ ಅಡ್ಡಿಯಾಗಿದೆ. ನಿಮಗೆ ಪ್ರಕರಣದ ಗಂಭೀರತೆ ಅರ್ಥವಾಗಬೇಕಿತ್ತು. ಸಾಮಾನ್ಯ ರೋಗಿಯನ್ನು ಡಿಸ್ಚಾರ್ಜ್ ಮಾಡಿದಂತೆ ಸಂಪತ್ ರಾಜ್ ಪ್ರಕರಣದಲ್ಲಿ ಸಹ ನೀವು ನಡೆದುಕೊಂಡಿದ್ದು ಸರಿಯಲ್ಲ. ನಿಮಗೆ ಬಾರಿ ನೋಟಿಸ್ ಸಹ ಕೊಡಲಾಗಿತ್ತು. ಉಡಾಫೆ ಉತ್ತರ ನೀಡಬೇಡಿ ಎಂದು ವೈದ್ಯರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಕೊನೆಗೆ ಮನವಿ ಮಾಡಿಕೊಂಡ ವೈದ್ಯರು ಹಾಗೂ ಸಿಬ್ಬಂದಿ, ಸಿಸಿಬಿ ಅಧಿಕಾರಿಗಳ ಪ್ರಶ್ನೆಗಳಿಗೆ ಕರೊನಾ ಸೋಂಕಿತರ ಚಿಕಿತ್ಸೆ ನೆಪ ಹೇಳಿ ಜಾರಿಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಅಪರಾಧ ಪ್ರಕರಣಗಳಲ್ಲಿ ಸಂಗ್ರಹಿಸಿದ್ದ ಸ್ಯಾಂಪಲ್ 15 ದಿನದೊಳಗೆ ಎಫ್​ಎಸ್​​ಎಲ್ ಕೊಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
