ಬೆಂಗಳೂರು:ಈಕೆ ಮದ್ಯಪಾನಿಗಳ ಹೃದಯಬಡಿತ ಏರುಪೇರು ಮಾಡುತ್ತಿದ್ದಳು. ಆದರೆ ಈಗ ಈಕೆಯದ್ದೇ ಹೃದಯಬಡಿತ ನಿಂತುಹೋಗಿದೆ. ಬಾರ್ ಡಾನ್ಸರ್ ಆಗಿದ್ದ ಈಕೆ ತನ್ನ ಮನೆಯಲ್ಲೇ ಕೊಲೆಯಾಗಿ ಹೋಗಿದ್ದಾಳೆ.
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯೊಂದರ ಬಾರ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಜಾರಾ (29) ಎಂಬಾಕೆ ಕೊಲೆಯಾದವಳು. ಆರ್​.ಟಿ. ನಗರದ ನೃಪತುಂಗ ಬಡಾವಣೆಯ ಮನೆಯೊಂದರಲ್ಲಿ ನೆಲೆಸಿದ್ದ ಈಕೆಯನ್ನು ದುಷ್ಕರ್ಮಿಗಳು ಆ ಮನೆಯಲ್ಲೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.
ನಿನ್ನೆ ರಾತ್ರಿ 8ರಿಂದ 12 ಗಂಟೆ ಅವಧಿಯಲ್ಲಿ ಕೊಲೆ ಆಗಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಆರ್​.ಟಿ.ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಪರಿಚಯಸ್ಥನಿಂದಲೇ ಕೊಲೆ ಆಗಿರುವ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಲೆಗೆ ಕಾರಣ ಇನ್ನೂ ನಿಗೂಢವಾಗಿದ್ದು, ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರ್​.ಟಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಚತ್ತೀಸ್‌ಗಢ ಮೂಲದ ಜಾರಾಗೆ ತಂದೆ-ತಾಯಿ ಇಲ್ಲ. ಈಕೆಗೆ ಇಬ್ಬರು ಸಹೋದರರು ಮತ್ತು ಒಬ್ಬ ತಂಗಿ ಇದ್ದಾರೆ. 2016ರಲ್ಲಿ ಒಡಹುಟ್ಟಿದವರ ಜತೆಗೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಜಾರಾ, ಬಾರ್‌ನಲ್ಲಿ ನೃತ್ಯಗಾತಿ ಆಗಿ ಕೆಲಸ ಮಾಡುತ್ತಿದ್ದಳು. 6 ತಿಂಗಳ ಹಿಂದೆ ತಂಗಿಗೆ ಮದುವೆ ಮಾಡಿಸಿದ್ದಳು. ಈಕೆಯ ಸಹೋದರರು ಜಾಲಹಳ್ಳಿಯಲ್ಲಿ ನೆಲೆಸಿದ್ದರು. ಇತ್ತೀಚೆಗೆ ಅಸ್ಸಾಂ ಮೂಲದ ಯುವಕನ ಜತೆಗೆ ಜಾರಾಗೆ ಮದುವೆ ನಿಶ್ಚಯವಾಗಿತ್ತು. ನೃಪತುಂಗ ಲೇಔಟ್‌ನಲ್ಲಿ ಜಾರಾ ಒಂಟಿಯಾಗಿ ನೆಲೆಸಿದ್ದಳು. ಶನಿವಾರ ಬೆಳಗ್ಗೆ ಭಾವಿ ಪತಿ, ಜಾರಾಗೆ ಕರೆ ಮಾಡಿದಾಗ ಸ್ವೀಕರಿಸಿಲ್ಲ. ಎಷ್ಟು ಬಾರಿ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದೆ ಇದ್ದಾಗ ಜಾರಾ ಸಹೋದರ ಮುಸ್ತಾಫಾಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಆತನ ಅಕ್ಕನ ಮನೆ ಬಳಿಗೆ ಬಂದು ನೋಡಿದಾಗ ಗೇಟ್‌ಗೆ ಬೀಗ ಹಾಕಲಾಗಿತ್ತು. ಮನೆ ಡೋರ್ ಒಳಗಿಂದ ಲಾಕ್ ಆಗಿತ್ತು. ಬಾಲ್ಕನಿಯಿಂದ ನೋಡಿದಾಗ ಹಾಲ್‌ನಲ್ಲಿ ಜಾರಾ ಬಿದ್ದಿರುವುದು ಕಂಡು ಮುಸ್ತಾಫಾ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಡೋರ್ ಲಾಕ್ ಒಡೆದು ಒಳಗೆ ಹೋಗಿ ನೋಡಿದಾಗ ರಕ್ತದ ಮಡುವಿನಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪರಿಚಯಸ್ಥರ ಕೈವಾಡ:ಮನೆಯ ಗೇಟ್ ಮತ್ತು ಡೋರ್ ಲಾಕ್ ಆಗಿತ್ತು. ಗೊತ್ತಿರುವ ವ್ಯಕ್ತಿಯೇ ಮನೆಗೆ ಬಂದು ಜಾರಾ ಹತ್ಯೆ ಮಾಡಿರುವುದು ಖಚಿತವಾಗಿದೆ. ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೊಲಕ್ಕೆ ಹೋಗಿದ್ದವ ಬರ್ಬರವಾಗಿ ಕೊಲೆಯಾದ; ಜಮೀನಿನಲ್ಲೇ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು…

ಚಿನ್ನದ ಹುಡುಕಾಟದಲ್ಲಿ ವಜ್ರ ಕಳೆದುಕೊಂಡವರೆಷ್ಟೋ?; ಇಲ್ಲಿವೆ ಆ ಚಿನ್ನ-ವಜ್ರಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 16 =
Remember me
