ಬೆಂಗಳೂರು:ಬಾರ್​ನಲ್ಲಿ ಈ ಎರಡು ತಂಡಗಳು ಮದ್ಯಪಾನ ಮಾಡುವಾಗ ಕಿರಿಕ್​ ಆಗಿದ್ದು ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಈ ಸಂದರ್ಭ ಕಿಡ್ನಾಪ್ ಸೇಡಿಗೆ ಸಿನಿಮಾ ಸ್ಟೈಲ್ ನಲ್ಲಿ ಚೇಸ್ ಮಾಡಿ ಹಲ್ಲೆ ಮಾಡಿದ ಘಟನೆ ಇದೇ ತಿಂಗಳ 9ರಂದು ನಡೆದಿದೆ.
ಈ ಪ್ರಕರಣದಲ್ಲಿ ರೌಡಿಶೀಟರ್ ಸಹಚರರು ಹಾಗೂ ಸಿದ್ದಾಪುರ ಯುವಕರ ನಡುವೆ ಗಲಾಟೆ ನಡೆದಿದೆ. ಮನೋಜ್ ಹಾಗೂ 17 ವರ್ಷದ ಬಾಲಕ ಬಾರ್​ನಲ್ಲಿದ್ದಾಗ ಈ ಪ್ರಕರಣ ನಡೆದಿದೆ. ಅಲ್ಲೇ ಕುಡಿಯಲು ಬಂದಿದ್ದ ಸಿದ್ಧಾಪುರ ಯುವಕರ ಜತೆ ಗಲಾಟೆ ನಡೆದಿದೆ. ಗಲಾಟೆಯ ನಡುವೆ ಮನೋಜ್ ಹಾಗೂ ಬಾಲಕನನ್ನು ಕಿಡ್ನಾಪ್ ಮಾಡಿ ಸಿದ್ಧಾಪುರಕ್ಕೆ ಯುವಕರು ಕರೆದೊಯ್ದಿದ್ದರು.
ಈ ವಿಚಾರ ತಿಳಿದ ರೌಡಿಶೀಟರ್ ಹ್ಯಾಂಡ್ರೋ ಹರೀಶ್‌, ತನ್ನ 15 ಸಹಚರರ ಜೊತೆ ಬೈಕ್ ನಲ್ಲಿ ಬಂದು ಅಟ್ಯಾಕ್ ಮಾಡಿ ಸಿದ್ದಾಪುರ ಯುವಕರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಸಿದ್ಧಾಪುರ ಯುವಕರು ಪೊಲೀಸರಿಗೆ ದೂರು ನೀಡಿದ್ದು ಈ ಸಂದರ್ಭ ಸಿದ್ದಾಪುರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಹಲ್ಲೆಗೆ ಸಂಬಂಧಿಸಿದಂತೆ 6 ಜನ ಯುವಕರು, 4 ಮಂದಿ ಕಾನೂನು ಸಂಘರ್ಷಕ್ಕೊಳಗಾದವರನ್ನು ಬಂಧಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 1 =
Remember me
