ಗದಗ:ಮದ್ಯ ಸಿಗದೆ ಹತಾಶೆಗೊಳಗಾಗಿ ಕುಡುಕರು ಮದ್ಯದಂಗಡಿಗಳಿಗೆ ಕನ್ನ ಹಾಕುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಎಂಎಸ್​ಐಎಲ್ ಮದ್ಯದಂಗಡಿಯವರು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ. ಮುಳಗುಂದ ರಸ್ತೆಯಲ್ಲಿರುವ ಎಂಎಸ್​ಐಎಲ್ ಮದ್ಯದಂಗಡಿಯವರು ತಮ್ಮ ಅಂಗಡಿಯ ಶೆಟರ್ಸ್​ಗೆ ಎರಡೂ ಕಡೆಗೆ ಬೀಗದ ಜತೆಗೆ ಶೆಟರ್ಸ್ ಮೇಲೆ ಎಕ್ಸ್ ಆಕಾರದಲ್ಲಿ ಕಬ್ಬಿಣದ ಬಾರ್​ಗಳನ್ನು ಅಳವಡಿಸಿ ಮತ್ತಷ್ಟು ಬಂದೋಬಸ್ತ್ ಮಾಡಿಕೊಂಡಿದ್ದಾರೆ.
ವ್ಯಸನಕ್ಕೆ ಬಿದ್ದಿರುವ ಕುಡುಕರು ಮದ್ಯದಂಗಡಿಗಳಿಗೆ ಕನ್ನ ಹಾಕಲು ಮುಂದಾಗಿರುವುದರಿಂದ ಅಂಗಡಿಯವರು ಮುಂಜಾಗ್ರತೆ ವಹಿಸಿದ್ದಾರೆ. ಇತ್ತೀಚೆಗೆ ಎಂಎಸ್​ಐಎಲ್ ಮದ್ಯದಂಗಡಿಯ ಶೆಟರ್ಸ್​ಗೆ ಹಾಕಿದ್ದ ಬೀಗ ಮುರಿದು ಮದ್ಯ ಕಳವು ಮಾಡಲಾಗಿತ್ತು. 1.5 ಲಕ್ಷ ರೂ. ನಗದು ಇದ್ದರೂ ಅದನ್ನು ಮುಟ್ಟದೆ ಬರೀ ಮದ್ಯದ ಪೌಚ್​ಗಳನ್ನಷ್ಟೇ ಕಳ್ಳತನ ಮಾಡಿ ಪರಾರಿಯಾಗಿದ್ದರು. ಹಣ ಬಿಟ್ಟು ಕೇವಲ ಮದ್ಯ ಕದ್ದಿದ್ದಾರೆ ಎಂದರೆ ಇದು ಕುಡುಕರ ಕರಾಮತ್ತು ಎಂದು ಪೊಲೀಸರು ಅಂದಾಜಿಸಿದ್ದರು.
1.50 ಲಕ್ಷ ರೂ. ಮೌಲ್ಯದ ಮದ್ಯ ಕಳವು
ಶ್ರೀನಿವಾಸಪುರ: ತಾಲೂಕಿನ ವಳಗೇರನಹಳ್ಳಿ ಕ್ರಾಸ್ ಬಳಿ ಇರುವ ಲಕ್ಷ್ಮೀ ಬಾರ್ ಆಂಡ್ ರೆಸ್ಟೋರೆಂಟ್ ಬೀಗ ಮುರಿದಿ ರುವ ದುಷ್ಕರ್ವಿುಗಳು ಸುಮಾರು 1.50 ಲಕ್ಷ ರೂ. ಮೌಲ್ಯದ ಮದ್ಯ ಕಳವು ಮಾಡಿದ್ದಾರೆ.
ಮದ್ಯ ನೀಡುವಂತೆ ಪತ್ರಕರ್ತರ ಬೆದರಿಕೆ
ವಿಜಯಪುರ: ಮದ್ಯ ನೀಡುವಂತೆ ಬೆದರಿಕೆ ಹಾಕಿದ ನಾಲ್ವರು ಪತ್ರಕರ್ತರ ವಿರುದ್ಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ. ವಿಜಯಪುರ ತಾಲೂಕು ಹೊನ್ನುಟಗಿ ಗ್ರಾಮದ ಸೌರಬ ಜನರಲ್ ಸ್ಟೋರ್​ಗೆ ಏ.2ರ ಸಂಜೆ 4.30ಕ್ಕೆ ಹೋಗಿದ್ದ ನಾಲ್ವರು, ನಾವು ಸ್ಥಳೀಯ ಪತ್ರಿಕೆ ವರದಿಗಾರರು ಹಾಗೂ ಖಾಸಗಿ ವಾಹಿನಿಯ ಕ್ಯಾಮರಾಮನ್. ನಮಗೆ ಮದ್ಯಕೊಡಿ. ಇಲ್ಲದಿದ್ದರೆ ಪತ್ರಿಕೆ, ಸುದ್ದಿ ವಾಹಿನಿಯಲ್ಲಿ ನಿಮ್ಮ ಬಗ್ಗೆ ಸುದ್ದಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಈ ಕುರಿತು ಅಂಗಡಿ ಮಾಲೀಕ ಸುರೇಶ ರಾಮಪ್ಪ ತೇರದಾಳ ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.
ಕ್ವಾರಂಟೈನ್​ ಕ್ಯಾಂಪ್​ ವಿಚಾರವಾಗಿ ಗ್ರಾಮಸ್ಥರ ನಡುವಿನ ಗಲಭೆಯಲ್ಲಿ ಓರ್ವ ವ್ಯಕ್ತಿಯ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
