ಬೆಂಗಳೂರು:ಲೋಕಸಭಾ ಹಾಗೂ ವಿಧಾನ ಪರಿಷತ್ತು ಚುನಾವಣೆಯ ಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ಒಂದು ವಾರ ಮದ್ಯದಂಗಡಿಗಳನ್ನು ಬಂದ್​ ಮಾಡಲು ಹೊರಡಿಸಿರುವ ಆದೇಶ ಬಗ್ಗೆ ಫೆಡರೇಷನ್​ ಆಫ್ ವೈನ್​ ಮರ್ಚಂಟ್ಸ್​ ಅಸೋಸಿಯೇಷನ್​ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ ಪ್ರಕಾರ ಮತದಾನ ಅಂತ್ಯವಾಗುವ 48 ಗಂಟೆ ಮೊದಲು ಮದ್ಯ ಮಾರಾಟ ನಿಷೇಧಿಸಲಾಗುತ್ತದೆ. ಆದರೆ, ಇತ್ತೀಚಿಗೆ ಮತದಾನ ಮುಗಿದ ಬಳಿಕವೂ ಮದ್ಯ ನಿಷೇಧ ಆದೇಶ ಹೊರಡಿಸಲಾಗುತ್ತಿದೆ.ಮದ್ಯ ನಿಷೇಧಿಸುವ ಹಿನ್ನೆಲೆಯಲ್ಲಿ ಸನ್ನದುದಾರರಿಗೆ ಮಾತ್ರವಲ್ಲದೆ ಸರ್ಕಾರಕ್ಕೂ ಆದಾಯ ನಷ್ಟವಾಗುತ್ತದೆ. ಶಿಕ್ಷಕರ ಮತ್ತು ಪದವೀಧರ ಕ್ಷೇತ್ರಗಳಲ್ಲಿ ಸೀಮಿತ ಸಂಖ್ಯೆಯ ಮತದಾರರು ಇರುವುದರಿಂದ ಮತದಾನದ ದಿನ,ಮತದಾನದ ಸಮಯವರೆಗೆ ಮಾತ್ರ ಮದ್ಯದಂಗಡಿ ಬಂದ್​ ಮಾಡಿ ಮತದಾನ ಮುಗಿದ ನಂತರ ಅಂಗಡಿಗಳನ್ನು ತೆರೆಯಲು ಹಾಗೂ ಮತ ಎಣಿಕೆ ದಿನದಂದು ಎಣಿಕೆ ಕೇಂದ್ರದ 3 ಕಿ.ಮೀ.ವ್ಯಾಪ್ತಿಯೊಳಗೆ ಇರುವ ಸನ್ನದುಗಳನ್ನು ಮಾತ್ರ ಬಂದ್​ ಮಾಡಬೇಕು. ಈ ಬೇಡಿಕೆಗಳನ್ನು ರಾಜ್ಯ ಸರ್ಕಾರ, ಕೇಂದ್ರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ತಂದು ಸಮಸ್ಯೆ ಬಗೆಹರಿಸಬೇಕೆಂದು ಸಂದ ಅಧ್ಯಕ್ಷ ಎಸ್​.ಗುರುಸ್ವಾಮಿ, ಸಿಎಂ ಸಿದ್ದರಾಮಯ್ಯ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಅಭಿವೃದ್ದಿ ಕಾರ್ಯ ಸಂಪೂರ್ಣ ಸ್ಥಗಿತ – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ
ಒಂದು ವಾರ ಮದ್ಯ ಸಿಗಲ್ಲ:ಲೋಕಸಭಾ ಹಾಗೂ ವಿಧಾನ ಪರಿಷತ್ತು ಚುನಾವಣೆಯ ಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಒಂದು ವಾರ ಕಾಲ ಮದ್ಯ ಸಿಗಲ್ಲ. ಜೂ.3ರಂದು ಪದವೀಧರ ಕ್ಷೇತ್ರ ಚುನಾವಣೆಗೆ ಮತದಾನ ನಡೆಯಲಿದೆ. ಜೂ.4ರಂದು ಲೋಕಸಭಾ ಚುನಾವಣೆ ಲಿತಾಂಶ ಪ್ರಕಟವಾಗಲಿದೆ. ಜೂ.6ರಂದು ವಿಧಾನ ಪರಿಷತ್ತಿನ ಚುನಾವಣೆಯ ಮತ ಎಣಿಕೆ ಇದೆ. ಹೀಗಾಗಿ, ಜೂ.1ರ ಸಂಜೆ 4 ಗಂಟೆಯಿಂದ ಜೂ.6ರವರೆಗೆ ಮದ್ಯದಂಗಡಿಗಳು ಬಂದ್​ ಆಗಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seventeen =
Remember me
