ಬೆಂಗಳೂರು:ರಾಜ್ಯ ಕಾಂಗ್ರೆಸ್ ಮಾಡಿದ್ದ ಟ್ವೀಟ್​ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagowda Patil Yatnal), ಟವಲ್ ಹಾಕೋದು ನಿಮ್ಮ ಜಾಯಮಾನ, ನಮ್ಮದಲ್ಲ ಎಂದು ಹೇಳುವ ಮುಖೇನ ಕಾಂಗ್ರೆಸ್​​ಗೆ (Congress) ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ 250 ಕೋಟಿ ರೂ. ಹೂಡಿಕೆಗೆ ಎಸ್‌ಎಫ್‌ಎಸ್‌ ಕಂಪನಿ ಪ್ರಸ್ತಾವನೆ ನಡೆಸಿದೆ: ಸಚಿವ ಎಂ.ಬಿ. ಪಾಟೀಲ್
ಈ ಹಿಂದೆ ರಾಜ್ಯ ಕಾಂಗ್ರೆಸ್​​ ಬಸನಗೌಡ ಪಾಟೀಲ್ ಯತ್ನಾಳ್ ಕುರಿತು ಮಾಡಿದ ಟ್ವೀಟ್​​ ಹೀಗಿದೆ, “ಮಾನ್ಯ ನಿರಾಣಿ ಯತ್ನಾಳ್ಅವರೇ, ವಾಟ್ಸಾಪ್ ಯೂನಿವರ್ಸಿಟಿಯಲ್ಲಿ ಬಂದ ಎಡಿಟೆಡ್ ವಿಡಿಯೋ ಹಂಚಿಕೊಳ್ಳುತ್ತಿದ್ದೀರಿ, ಬಿಜೆಪಿ ಐಟಿ ಸೆಲ್ ನಿಮಗೂ 2 ರೂ. ಕೊಡುತ್ತಿದೆಯೇ? ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬೆಲೆ ಏರಿಕೆಯನ್ನು ನಿಯಂತ್ರಿಸುತ್ತೇವೆ ಎಂದಿದ್ದಾರೆ ಸಿದ್ದರಾಮಯ್ಯ ಅವರು. ಬೆಲೆ ಏರಿಕೆ, ಇಳಿಕೆಯ ನಿಯಂತ್ರಣವಿರುವುದು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಎಂಬ ಕನಿಷ್ಠ ಕಾಮನ್ ಸೆನ್ಸ್ ಇಲ್ಲದ ತಾವು, ವಿಪಕ್ಷ ನಾಯಕನ ಸ್ಥಾನಕ್ಕೆ ಟವೆಲ್ ಹಾಕಿದ್ದು ಯಾವ ಅರ್ಹತೆಯಿಂದಲೋ ತಿಳಿಯದು” ಎಂದು ಟ್ವೀಟ್​ (Tweet) ಮಾಡಿ ವ್ಯಂಗ್ಯವಾಡಿತ್ತು.
ಈ ಟ್ವೀಟ್​​ಗೆ ಇದೀಗ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ಅವರು, “ಟವಲ್ ಹಾಕೋದು ನಿಮ್ಮ ಜಾಯಮಾನ, ನಮ್ಮದಲ್ಲ. ನಿಮ್ಮಲ್ಲಿ ಯಾರು ಯಾವುದಕ್ಕೆ ಟವಲ್ ಹಾಕಿದ್ರು ಅನ್ನುವ ದೆಹಲಿ ನಾಟಕವನ್ನು ರಾಷ್ಟ್ರವೇ ನೋಡಿದೆ. ನೀವು ಹೇಳಿರುವ ಪ್ರಕಾರ ರಾಜ್ಯದಲ್ಲೂ ಎಲ್ಲಾ ಕಡಿಮೆ ಮಾಡ್ತೀವಿ ಅಂದಿದ್ದಾರಲ್ವಾ, ಮಾಡೋಕ್ಕೆ ಹೇಳಿ! ಅರ್ಹತೆಯನ್ನು ನೀವು ನಿರ್ಧಾರ ಮಾಡುವುದಲ್ಲ. ನಿಮ್ಮಲ್ಲಿ ಏನು ಬೇಕಾದರೂ ಆಗಬಹುದು, ತಿಹಾರ್ ಇಂದ ಬಂದವರೂ ನಾಯಕರಾಗಬಹುದು” ಎಂದು ಕಾಂಗ್ರೆಸ್​​ ಟ್ವೀಟ್​​ಗೆ ಟ್ವೀಟ್​ ಮೂಲಕವೇ ತಿರುಗೇಟು ನೀಡಿದ್ದಾರೆ.
1 ಕೋಟಿ ರೂ. ಕೊಟ್ಟರೂ ಕುರಿ ಕೊಡುವುದಿಲ್ಲ ಎಂದು ಈ ವ್ಯಕ್ತಿ ಹೇಳಿದ್ಯಾಕೆ?; ಇಲ್ಲಿದೆ ಅಚ್ಚರಿ ಸುದ್ದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
