ವಿಜಯಪುರ:ಲಿಂಗಾಯತ ಡ್ಯಾಂ ಒಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಲಿಂಗಾಯತ ಡ್ಯಾಂನಿಂದ ಒಂದೇ ಒಂದು ಚಿಪ್ಪು ಕಲ್ಲು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ಗುಡುಗಿದ್ದಾರೆ. ಡಿಕೆಶಿ ಮಾತನಾಡುತ್ತಾ, ಲಿಂಗಾಯತ ಡ್ಯಾಂ ಒಡೆಯುತ್ತೇವೆ ಎಂದು ಹೇಳಿದ್ದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಲಿಂಗಾಯತರೆಲ್ಲರೂ ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇವರ ದ್ವೇಷ ಇದ್ದರೆ ವ್ಯಕ್ತಿಗತವಾಗಿ, ವೈಯಕ್ತಿಕವಾಗಿ ಮಾತಾಡಬೇಕು. ಅದು ಬಿಟ್ಟು ಎಲ್ಲಾ ಲಿಂಗಾಯತ ಸಿಎಂ ಭ್ರಷ್ಟರು ಎಂಬುದು ಎಷ್ಟು ಸರಿ ಎಂದು ಶಾಸಕ ಯತ್ನಾಳ್ ಪ್ರಶ್ನಿಸಿದರು.
ಇದನ್ನೂ ಓದಿ:ಸೋಲಿನ ಭಯದ ನಡುವೆ ಸಿದ್ದರಾಮಯ್ಯ ಸಿಎಂ ಕನಸು ಕಾಣುತ್ತಿದ್ದಾರೆ; ಪ್ರತಾಪ್ ಸಿಂಹ
ಧರ್ಮ ಒಡೆಯಲು ನಿಂತವರಿಗೆ ಕಳೆದ ಬಾರಿ ಜನರೇ ಪಾಠ ಕಲಿಸಿದ್ದಾರೆ. ಹೀಗಾಗಿಯೇ ಹೋದ ಚುನಾವಣೆಯಲ್ಲಿ ಲಿಂಗಾಯತರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ಮೂಲಕ ವೀರಶೈವ ಲಿಂಗಾಯತ ಸಮಾಜಕ್ಕೆ ಅಪಮಾನ ಮಾಡಿದ್ದಾರೆ. ಲಿಂಗಾಯತರನ್ನು ಒಡೆಯುವುದು, ಹಿಂದು ಧರ್ಮಕ್ಕೆ ಅಪಮಾನ ಮಾಡುವ ಕೆಲಸ ಆಗಬಾರದು. ಈ ಕೂಡಲೇ ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಯತ್ನಾಳ್ ಒತ್ತಾಯಿಸಿದರು.
ರಾಹುಲ್ ವಿಜಯಪುರಕ್ಕೆ ಆಗಮನ ವಿಚಾರವಾಗಿ ಮಾತನಾಡುತ್ತಾ, ಕಾಂಗ್ರೆಸ್ ನಾಯಕನನ್ನು ಜಿಲ್ಲೆಗೆ ಸ್ವಾಗತಿಸುತ್ತೇನೆ. ರಾಹುಲ್ ಗಾಂಧಿ ಹೋದಲ್ಲೆಲ್ಲಾ ಕಾಂಗ್ರೆಸ್ ಸೋಲುತ್ತದೆ. ಅವರು ಬಿಜೆಪಿ ಪಕ್ಷಕ್ಕೆ ಸ್ಟಾರ್ ಕ್ಯಾಂಪೇನರ್ ಇದ್ದಂತೆ. ಮೊದಲು 15 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇನೆ ಎಂದು ನಿರ್ಧರಿಸಿದ್ದೆ. ಇದೀಗ ರಾಹುಲ್ ಬಂದ ಬಳಿಕ 50 ಸಾವಿರ ಮತಗಳ ಅಂತರ ಬರುತ್ತದೆ ಎಂದರು ಯತ್ನಾಳ್ ವ್ಯಂಗ್ಯವಾಡಿದರು.
ಇದನ್ನೂ ಓದಿ:ರಮ್ಯಾ ಅವರನ್ನು ಪಕ್ಷಕ್ಕೆ ಕರೆಯುವಷ್ಟು ಬಿಜೆಪಿ ಬರಗೆಟ್ಟಿಲ್ಲ; ಕಾಂಗ್ರೆಸ್​ ನಾಯಕಿಗೆ ಟಾಂಗ್ ಕೊಟ್ಟ ಆರ್​​.ಅಶೋಕ್
ನನಗೆ ಪ್ರಧಾನಿ ಮೋದಿ, ಅಮಿತ್ ಷಾ ಮಾತ್ರ ಪ್ರಚಾರಕ್ಕೆ ಸಾಕು. ಯಾವುದೇ ಸಿನಿಮಾ ನಟರು ಬೇಡ ಎಂದು ನಮ್ಮ ನಾಯಕರಿಗೆ ಈಗಾಗಲೇ ಹೇಳಿದ್ದೇನೆ. ಚಿತ್ರ ನಟರಿಗಿಂತ ನಾನೇನು ಕಡಿಮೆ ಇಲ್ಲ. ನಿರ್ದೇಶನ, ನಟನೆ, ಕಥಾ ಸಂಕಲನ ನಾನೇ ಮಾಡುತ್ತೇನೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 16 =
Remember me
