ಬೆಂಗಳೂರು:ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ​ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದು, ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಸಿದ್ದರಾಮಯ್ಯನವರೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:Zomato ಮೂಲಕ 60 ರೂ. ಮೌಲ್ಯದ ಫುಡ್‌ ಆರ್ಡರ್ ಮಾಡಿದ ಮಹಿಳೆಗೆ ಕಂಟೇನರ್‌ ಚಾರ್ಜ್‌ಗೂ 60 ರೂ. ಶುಲ್ಕ: ಟ್ವೀಟ್‌ ವೈರಲ್‌
ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಮಂಗಳವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಪಾಲಿಕೆಯ ವ್ಯಾಪ್ತಿಯಲ್ಲಿ ಕಳೆದ 28 ತಿಂಗಳ ಹಿಂದೆ ಪೂರ್ಣಗೊಳಿಸಿರುವ ಕಾಮಗಾರಿಗಳ ಬಿಲ್ ಪಾವತಿ ಬಾಕಿ ಉಳಿದಿದೆ ಎಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಸದ್ಯ ಈ ವಿಷಯವನ್ನು ಪ್ರತ್ಯೇಕವಾಗಿ ಮುಂದಿಟ್ಟ ಬಸನಗೌಡ ಪಾಟೀಲ್ ಯತ್ನಾಳ್, “ಬಿಜೆಪಿ ಸರ್ಕಾರದ ಹಗರಣಗಳನ್ನು ನ್ಯಾಯ ಮೂರ್ತಿಯವರ ನೇತೃತ್ವದ ಆಯೋಗದ ಮೂಲಕ ತನಿಖೆ ಮಾಡಿಸುತ್ತೇವೆ ಎಂದಿದ್ದ ಸಿದ್ದರಾಮಯ್ಯನವರು, ಈಗ ಗುತ್ತಿಗೆದಾರರು ಆರೋಪ ಮಾಡಿರುವ ಅವರ ‘ಬ್ರದರ್’ ವಿರುದ್ಧ ತನಿಖೆ ಮಾಡಿಸುತ್ತಾರಾ?” ಎಂದು ಟ್ವೀಟ್​ನಲ್ಲಿ ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದ ಹಗರಣಗಳನ್ನು ನ್ಯಾಯ ಮೂರ್ತಿಯವರ ನೇತೃತ್ವದ ಆಯೋಗದ ಮೂಲಕ ತನಿಖೆ ಮಾಡಿಸುತ್ತೇವೆ ಎಂದಿದ್ದ ಸಿದ್ದರಾಮಯ್ಯನವರು ಈಗ ಗುತ್ತಿಗೆದಾರರು ಆರೋಪ ಮಾಡಿರುವ ಅವರ "ಬ್ರದರ್" ವಿರುದ್ಧ ತನಿಖೆ ಮಾಡಿಸುತ್ತಾರಾ ?
ಗುತ್ತಿಗೆದಾರರು ನೊಣವಿನಕೆರೆ ಅಜ್ಜಯ್ಯನವರ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲೆಸಿರುವುದು ನೋಡಿದರೆ "ಬ್ರದರ್"…
— Basanagouda R Patil (Yatnal) (@BasanagoudaBJP)August 9, 2023

“ಗುತ್ತಿಗೆದಾರರು ನೊಣವಿನಕೆರೆ ಅಜ್ಜಯ್ಯನವರ ಮಠಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲೆಸಗಿರುವುದು ನೋಡಿದರೆ ‘ಬ್ರದರ್’ ಡಿಮ್ಯಾಂಡ್ ಗುತ್ತಿಗೆದಾರರಿಗೆ ಬಹಳ ಸಂಕಷ್ಟಕ್ಕೆ ದೂಡಿದೆ. ಲೋಕಸಭೆ ಚುನಾವಣೆಗೆ ಎಷ್ಟು ಫಿಕ್ಸ್ ಮಾಡಿದ್ದೀರಿ ಸಿದ್ದರಾಮಯ್ಯನವರೇ? ನಿಮ್ಮ ಗಮನಕ್ಕೆ ಬಾರದೆ ನಿಮ್ಮ ‘ಬ್ರದರ್’ ನಿಮ್ಮನ್ನೂ ಮೀರಿಸಿದ್ದಾರಾ? ಕ್ರಮ ಕೈಗೊಳ್ಳುವಿರಾ? ಅಥವಾ ಅವರು ಗುತ್ತಿಗೆದಾರರೇ ಅಲ್ಲ ಅಂತ ಸರ್ಟಿಫಿಕೇಟ್ ನೀಡುತ್ತೀರಾ” ಎಂದು ಟ್ವೀಟ್​ ಮೂಲಕ ವ್ಯಂಗ್ಯವಾಡಿದ್ದಾರೆ.
ತುಂಬಾ ಚಿಕ್ಕ ವಯಸ್ಸಿನಲ್ಲಿ ಈ ರೀತಿ ಆಗಬಾರದಿತ್ತು; ಎಲ್ಲರೂ ನಿಮ್ಮ ಆರೋಗ್ಯದತ್ತ ಗಮನ‌ಹರಿಸಿ: ಡಿ.ಕೆ. ಶಿವಕುಮಾರ್​​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 2 =
Remember me
