ಬೆಂಗಳೂರು:ಹುಚ್ಚುಚ್ಚಾಗಿ ಮಾತಾಡಿದ್ರೆ ಜನ ಒಪ್ಪಲ್ಲ. ಜನರ ದೃಷ್ಟಿಯಲ್ಲಿ ವಿಲನ್ ಆಗ್ತೀರಾ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ರನ್ನು ಎಚ್ಚರಿಸಿರುವ ಎಂ.ಪಿ.ರೇಣುಕಾಚಾರ್ಯ, ಯತ್ನಾಳ್​ ದುರಂತ ನಾಯಕ ಎಂದು ವಿಶ್ಲೇಷಿಸಿದ್ದಾರೆ.
ಉಪಚುನಾವಣೆ ನಂತರ ಯಾವುದೇ ಸಂದರ್ಭದಲ್ಲಾದರೂ ನಾಯಕತ್ವ ಬದಲಾವಣೆಯಾಗಲಿದೆ. ಬಿ.ಎಸ್​. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಇರುವುದಿಲ್ಲ ಎಂದು ಮಂಗಳವಾರ ಯತ್ನಾಳ್​ ಹೇಳಿಕೆ ನೀಡಿದ್ದರು. ಆ ಮೂಲಕ ಬಿಎಸ್​ವೈ ನಾಯಕತ್ವ ಬದಲಾವಣೆಯ ಸುದ್ದಿ ಭಾರಿ ಕೋಲಾಹಲ ಎಬ್ಬಿಸಿದ್ದು, ಬಸನಗೌಡ ಪಾಟೀಲ್​ ಯತ್ನಾಳ್​ರನ್ನು ಯಾವುದೇ ಕಾರಣ ಕೇಳದೆ ಪಕ್ಷದಿಂದಲೇ ಉಚ್ಛಾಟಿಸಬೇಕು ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಆಗ್ರಹಿಸಿದ ಬೆನ್ನಲ್ಲೇ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ರೇಣುಕಾಚಾರ್ಯ, ಯಡಿಯೂರಪ್ಪರನ್ನು ಶಾಸಕಾಂಗ ಪಕ್ಷ ಸಿಎಂ‌ ಮಾಡಿದೆ. ತನ್ನನ್ನು ಮಂತ್ರಿ ಮಾಡಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಯತ್ನಾಳ್​ ಹೀಗೆಲ್ಲ ಮಾತಾಡ್ತಿದ್ದಾರೆ ಎಂದು ಕಿಡಿಕಾರಿದರು.
ಮಾತಾಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು. ಅವರ ಭಾಷೆಯಂತೆ ನನಗೂ ಬಳಸಲು ಬರುತ್ತೆ ಎಂದು ಮಾತಿನಲ್ಲೇ ಚಾಟಿ ಬೀಸಿದ ರೇಣುಕಾಚಾರ್ಯ, ಚುನಾವಣೆ ವೇಳೆ ಇಂತಹ ಹೇಳಿಕೆಗಳಿಂದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತೆ. ಯತ್ನಾಳ್​ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ತಾವು ನೀಡಿದ ಹೇಳಿಕೆ ಬಗ್ಗೆ ಯತ್ನಾಳ್​ ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಿಎಂ ವಿರುದ್ಧ ಅಗೌರವವಾಗಿ ಮಾತನಾಡಿದರೆ ನಾನು ಸುಮ್ಮನಿರಲ್ಲ. ನೀವೊಬ್ಬರೇ ಬಿಎಸ್​ವೈ ಅವರನ್ನು ಸಿಎಂ ಮಾಡಿದ್ದಾ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಯತ್ನಾಳ್​ ಅವರೇ ತಿರುಕನ ಕನಸು ಬಿಟ್ಟುಬಿಡಿ… ಎಂದು ವ್ಯಂಗ್ಯವಾಡಿದರು.
ನನಗೂ ಸ್ವಾಭಿಮಾನವಿದೆ. ಬಿ.ವೈ.ವಿಜಯೇಂದ್ರ ಯಾವ ಇಲಾಖೇಲಿ ಹಸ್ತಕ್ಷೇಪ ಮಾಡಿದ್ದಾರೆ? ಹೇಳಲಿ. ನಾನೇನು ವಿಜಯೇಂದ್ರರ ಮುಖವಾಣಿಯಲ್ಲ. ನಾನೊಬ್ಬ ಚುನಾಯಿತ ಪ್ರತಿನಿಧಿ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಊರಿಗೆ ಊರೇ ಕೊಚ್ಚಿಕೊಂಡು ಹೋದರೂ ಸಾಹೇಬ್ರಿಗೆ ಟೆನ್ಶನ್​ ಇಲ್ಲ!

3 ವರ್ಷ ಇವ್ರೇ ಸಿಎಂ ಎಂದ್ರು ಕಟೀಲ್​- ಅವ್ರು ಸಿಎಂ ಆಗೋದು ತಿರುಕನಕನಸು ಎಂದ್ರು ರವಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + fourteen =
Remember me
