ಬೆಂಗಳೂರು:ಕಳೆದ ಎರಡು ದಿನಗಳ ಹಿಂದೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಸಿಎಂ ಸಿದ್ದರಾಮಯ್ಯ ಅವರನ್ನು ಖುದ್ದಾಗಿ ಭೇಟಿ ಮಾಡಿ, ತಾವು ಎದುರಿಸುತ್ತಿರುವ ಪರಿಸ್ಥಿತಿಯನ್ನು ವಿವರಿಸಿದರು. ಈ ಮಧ್ಯೆ ಪ್ರತ್ಯೇಕ ಆರೋಪವನ್ನು ಕೂಡ ಮಾಡಿದರು. ಈ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಸಿಎಂ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್​ ಮಾಡಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಗೃಹಲಕ್ಷ್ಮೀ ಯೋಜನೆ ಚಾಲನೆ; 1ಲಕ್ಷ ಜನರು ಭಾಗಿ
“ಎಲ್ಲದಕ್ಕೂ ತನಿಖೆ ಬಾಕಿ ಇದೆ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರೇ, ಕೆಎಸ್​ಆರ್​​ಟಿಸಿ ನೌಕರರಿಗೆ ಸಂಬಳ ನೀಡಲು ಯಾವ ತನಿಖೆ ಬಾಕಿಯಿದೆ? ಶಿಕ್ಷಕರಿಗೆ ಸಂಬಳ ನೀಡಲು, ಸಾರಿಗೆ ನಿಗಮಗಳಿಗೆ ಪೂರ್ಣ ಹಣ ಬಿಡುಗಡೆ ಮಾಡಲು ಯಾವ ತನಿಖೆ ಬಾಕಿ ಇದೆ” ಎಂದು ಪ್ರಶ್ನಿಸಿದ್ದಾರೆ.
ಎಲ್ಲದಕ್ಕೂ ತನಿಖೆ ಬಾಕಿ ಇದೆ ಎಂದು ಹೇಳುತ್ತಿರುವ ಸಿದ್ದರಾಮಯ್ಯನವರೇ,
1. KSRTC ನೌಕರರಿಗೆ ಸಂಬಳ ನೀಡಲು ಯಾವ ತನಿಖೆ ಬಾಕಿ ಇದೆ?2.ಶಿಕ್ಷರಿಗೆ ಸಂಬಳ ನೀಡಲು ಯಾವ ತನಿಖೆ ಬಾಕಿ ಇದೆ?3. ಸಾರಿಗೆ ನಿಗಮಗಳಿಗೆ ಪೂರ್ಣ ಹಣ ಬಿಡುಗಡೆ ಮಾಡಲು ಯಾವ ತನಿಖೆ ಬಾಕಿ ಇದೆ?4. ನಿಮ್ಮ ಗ್ಯಾರಂಟಿ ಪದವೀಧರರಿಗೆ 3,000 ಹಾಗು ಡಿಪ್ಲೋಮಧರರಿಗೆ 1,500…
— Basanagouda R Patil (Yatnal) (@BasanagoudaBJP)August 11, 2023

“ನಿಮ್ಮ ಗ್ಯಾರಂಟಿ ಘೋಷಣೆಯಲ್ಲಿ ಪದವೀಧರರಿಗೆ 3,000 ರೂ. ಹಾಗೂ ಡಿಪ್ಲೋಮಧರರಿಗೆ 1,500 ರೂ. ನೀಡಲು ಯಾವ ತನಿಖೆಯಿದೆ? ನಿಮ್ಮ ‘ಬ್ರದರ್’ ವಿರುದ್ಧ ಬಂದಿರುವ ಆರೋಪಗಳು ಸತ್ಯವೆಂದು ತಿಳಿದಿದ್ದರೂ ಸಹ ಯಾಕೆ ಅವರ ಪರವಹಿಸಿಕೊಂಡು ಮಾತನಾಡುತ್ತೀರಿ?” ಎಂದು ಟ್ವೀಟ್​ ಮೂಲಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಬಾಕ್ಸ್ ಆಫೀಸ್​ನಲ್ಲಿ ‘ಜೈಲರ್’ ದಾಖಲೆ; ಸ್ನೇಹಿತರೊಟ್ಟಿಗೆ ಹಿಮಾಲಯಕ್ಕೆ ತೆರಳಿದ ತಲೈವಾ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:16 + 19 =
Remember me
