ವಿಜಯಪುರ:ಡಿಸೆಂಬರ್​ 5ರಂದು ಕರ್ನಾಟಕ ಬಂದ್​ ಮಾಡುವುದಾಗಿ ಹೇಳಿರುವ ನಾಯಕ ವಾಟಾಳ್​ ನಾಗರಾಜ್​ ವಿರುದ್ಧ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಹರಿಹಾಯ್ದಿದ್ದಾರೆ. ವಾಟಾಳ್​ ಒಬ್ಬ ಕುರಿ ಇದ್ದಂತೆ. ಆತನ ಮೇಲೆ ಯಾರು ಅಟ್ಯಾಕ್​ ಮಾಡುತ್ತಾರೆ ಎಂದು ಹೀಯಾಳಿಸಿರುವ ಅವರು ಸವಾಲೊಂದನ್ನು ಎಸೆದಿದ್ದಾರೆ.
ಇದನ್ನೂ ಓದಿ:ವರ್ತೂರು ಪ್ರಕಾಶ್ ಅಪಹರಣದ ಹಿಂದೆ ಲೇಡಿ ಕೈವಾಡ? ಕಾರಿನಲ್ಲಿ ಸಿಕ್ಕ ವಸ್ತುವಿನಿಂದ ಹೆಚ್ಚಾದ ಅನುಮಾನ
ವಾಟಾಳ್​ಗೆ ತಾಕತ್ತಿದ್ದರೇ ಕಲಬುರ್ಗಿ ಕಾರ್ಪೋರೇಷನ್, ರೈಲು ನಿಲ್ದಾಣದ ಮೇಲಿರುವ ಉರ್ದು ಬೋರ್ಡ್​ಗೆ ಮಸಿ ಬಳಿಯಲಿ. ಕನ್ನಡ ರಕ್ಷಣಾ ವೇದಿಕೆ ಹಾಗೂ ಕೆಲ ಹೋರಾಟಗಾರರು ಇದ್ದಾರಲ್ಲ ಅವರು ಹಿಂದಿ ಶಾಲೆ ಬಂದ್ ಮಾಡುತ್ತಾರೆ. ಹಿಂದಿ ಮೇಲೆ ದಬ್ಬಾಳಿಕೆ ಮಾಡುತ್ತಾರೆ, ಹಿಂದಿ ಬೋರ್ಡ್​ಗೆ ಮಸಿ ಬಳಿತಾರೆ. ಇವರ ಮಕ್ಕಳು ಯಾವ ಶಾಲೆಯಲ್ಲಿ ಕಲಿಯುತ್ತಾರೆ ಅನ್ನೋದನ್ನ ಮೊದಲು ಬಹಿರಂಗ ಪಡೆಸಲಿ. ಕನ್ನಡ ಹೋರಾಟಗಾರರ ಮಕ್ಕಳು-ಮೊಮ್ಮಕ್ಕಳು ಯಾವ ಮಾಧ್ಯಮದ ಶಾಲೆಯಲ್ಲಿ ಕಲಿಯುತ್ತಾರೆ ಅನ್ನೋದನ್ನ ತನಿಖೆ ನಡೆಸಬೇಕು. ಕನ್ನಡ ಸಂಸ್ಕೃತಿ ಇಲಾಖೆಯಿಂದ ಪಡೆದ ಹಣದ ವಿಚಾರ ಬಹಿರಂಗವಾಗಬೇಕು. ನಾವೆಲ್ಲ ಕನ್ನಡದಲ್ಲಿ ಸಹಿ ಮಾಡುತ್ತೇವೆ. ಇವರಿಂದ ಬುದ್ದಿ ಕಲಿಯಬೇಕಿಲ್ಲ ಎಂದು ಯತ್ನಾಳ್​ ಹೇಳಿದ್ದಾರೆ.
ಇದನ್ನೂ ಓದಿ:ಸಚಿವ ಸಂಪುಟ ವಿಸ್ತರಣೆ ನಂತರ ಸೀಕ್ರೇಟ್ ಬಾಂಬ್​ ಸಿಡಿಸುತ್ತಾರಂತೆ ಶಾಸಕ ಯತ್ನಾಳ್​!
ವಾಟಾಳ್‌‌ಗೆ ನೀಡಿದ ಭದ್ರತೆ ಸರ್ಕಾರ ವಾಪಸ್ ಪಡೆದ ವಿಚಾರದಲ್ಲಿ ಮಾತನಾಡಿರುವ ಅವರು, ‘ವಾಟಾಳ್‌ಗೆ ಯಾವುದೇ ಹಳೆ ನಾಯಿ ಕೂಡ ಹೊಡೆಯಲ್ಲ. ಅವರಿಗೆ ಹೊಡೆದು ಏನ್ ಮಾಡ್ತಾರೆ? ಯಾರು ಶೂರರು, ಧೀರರು ಇರುತ್ತಾರೆ ಅವರ ಮೇಲೆ ಆಕ್ರಮಣ ಮಾಡ್ತಾರೆ. ವಾಟಾಳ್ ಒಬ್ಬ ಕುರಿ, ಆತನ ಮೇಲ್ಯಾರೆ ಅಟ್ಯಾಕ್ ಮಾಡ್ತಾರೆ’ ಎಂದು ಪ್ರಶ್ನಿಸಿದ್ದಾರೆ. ವಾಟಾಳ್ ನಾಗರಾಜ್​ಗೆ ಬುದ್ಧಿ ಭ್ರಮಣೆಯಾಗಿದೆ. ಇವರದ್ದು ಅರ್ಜಸ್ಟಮೆಂಟ್ ರಾಜಕಾರಣ, ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಎಲ್ಲರ ಜತೆಗೂ ಅರ್ಜಸ್ಟಮೆಂಟ್ ಇದೆ. ಯಾರ್ಯಾರು ಸಿಎಂ ಆಗುತ್ತಾರೆ ಎಲ್ಲರ ಜತೆಗೂ ವಾಟಾಳ್ ಅರ್ಜಸ್ಟಮೆಂಟ್ ಮಾಡಿಕೊಳ್ತಾರೆ ಎಂದು ಅವರು ದೂರಿದ್ದಾರೆ.
ಪತ್ನಿಯ ಬೆತ್ತಲೆ ದೇಹದ ವಿಡಿಯೋ ಮಾಡಿ ಈತ ಮಾಡುತ್ತಿದ್ದ ಮಹಾನೀಚತನದ ಕೆಲಸ!

ಡೇವಿಡ್ ವಾರ್ನರ್ ಗಾಯಕ್ಕೆ ಮ್ಯಾರಥಾನ್ ಸೆಕ್ಸ್ ಕಾರಣ ಎಂದ ಪತ್ನಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − 3 =
Remember me
